ಕಾಂಗ್ರೆಸ್ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ನೀಡಿ ಗೌರವಿಸಿದೆ

ಕಾಂಗ್ರೆಸ್ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ನೀಡಿ ಗೌರವಿಸಿದೆ

ಜಗಳೂರಿನಲ್ಲಿ ಮಾಜಿ ಶಾಸಕ ಹೆಚ್.ಪಿ.ರಾಜೇಶ್

ಜಗಳೂರು, ಜ.13-  ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಳ್ಳಲಿರುವ ಎ.ಐ.ಸಿ.ಸಿ‌. ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಆಗಮನದಿಂದ ರಾಜ್ಯದ ಮಹಿಳೆಯರಿಗೂ ನಾಯಕತ್ವದ ಅವಕಾಶ ಸಿಗಲಿದೆ ಎಂದು ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ `ನಾ ನಾಯಕಿ’ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳಾ ನಾಯಕತ್ವಕ್ಕೂ ಕಾಂಗ್ರೆಸ್  ಪಕ್ಷಕ್ಕೂ ಅವಿನಾಭಾವ ಸಂಬಂದವಿದೆ ಮಾಜಿ ಪ್ರಧಾನ‌‌ಮಂತ್ರಿ ಇಂದಿರಾ ಗಾಂಧಿ  ಅವರು   ಸುದೀರ್ಘ ಆಡಳಿತ ನಡೆಸಿದ್ದರು , ನಂತರ ಸೋನಿಯಾ ಗಾಂಧೀ ಅಧ್ಯಕ್ಷರಾದಾಗ ಪಕ್ಷ ಅಧಿಕಾರಕ್ಕೆ ಬಂದಿತ್ತು. ಕಾಂಗ್ರೆಸ್ ಪಕ್ಷವೂ ಮಹಿಳೆಯರನ್ನು ಸಮಾನವಾಗಿ ಕಂಡು ರಾಜಕೀಯ ಸ್ಥಾನಮಾನ ನೀಡಿದೆ.

ಪ್ರಿಯಾಂಕಾ ಗಾಂಧಿ ಅವರೂ ಸಹ ಹೆಚ್ಚಿನ ಆಸಕ್ತಿ ವಹಿಸಿ “ನಾ ನಾಯಕಿ” ಎಂಬ ವಿನೂತನ ಕಾರ್ಯಕ್ರಮ‌ ಮಾಡಿ ಮಹಿಳೆಯರಿಗೆ ಶಕ್ತಿ ತುಂಬಲು  ರಾಜ್ಯಕ್ಕೆ ಬರುತ್ತಿದ್ದಾರೆ. 

ಇದೇ ಜನವರಿ 16 ರಂದು ಪ್ರತಿ ಬೂತ್ ಮಟ್ಟದಿಂದ ಮಹಿಳೆಯರನ್ನು ಸಮಾವೇಶಕ್ಕೆ ಕಳುಹಿಸಲಾಗುವುದು ಎಂದರು.

ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ,  ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹಿಳೆಯರ ಅಭಿವೃದ್ದಿಗೆ ವಿಶೇಷ ಯೋಜನೆ  ರೂಪಿಸಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗಿತ್ತು. ಇಂದಿನ ಬಿಜೆಪಿ ಸರ್ಕಾರ ಯಾವುದೇ ವಿಶೇಷ ಯೋಜನೆ ನೀಡದೆ ಮಹಿಳೆಯರಿಗೆ ,ವಿದ್ಯಾರ್ಥಿನಿಯರಿಗೆ ವಂಚಿಸಿದೆ ಎಂದು ಟೀಕಿಸಿದರು.

ಮುಖಂಡರಾದ  ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ , ಕೆಪಿಸಿಸಿ  ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ , ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆಂಚಮ್ಮ  ಧನ್ಯಕುಮಾರ್ ಮಾತನಾಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್ ,  ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಮುಖಂಡರಾದ

 ಗೋಡೆ ಪ್ರಕಾಶ್ , ಶಂಭುಲಿಂಗಪ್ಪ  ,  ಸಿ ತಿಪ್ಪೇಸ್ವಾಮಿ , ತಾ.ಪಂ. ಮಾಜಿ ಸದಸ್ಯ ಕುಬೇಂದ್ರಪ್ಪ ,   ಬಿ.ಲೋಕೇಶ್   ಮುಂತಾದವರು ಇದ್ದರು.