ರಾಣೇಬೆನ್ನೂರು, ಜ.12- ನಗರದ ರೇನ್ಬೋ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆಯಲ್ಲಿ 16ನೇ ವರ್ಷದ ಶಾಲಾ ವಾರ್ಷಿಕೋತ್ಸವ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಜಗದೀಶ ಎಸ್.ಹೆಬ್ಬಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಆಗಮಿಸಿ ದ್ದರು. ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಪ್ರೊ. ಎಸ್. ಎನ್. ಕಟ್ಟೀಮನಿ ವಹಿಸಿದ್ದರು. ಅತಿಥಿಗಳಾಗಿ ಡಾ.ಸುರೇಶ್, ಶ್ರೀಮತಿ ಲಲಿತಾ ಸುರೇಶ್, ನಾಗರಾಜ ಎಸ್. ಕೆ. ಮಾಲತೇಶ್ ಐ. ಕೆ. , ವೀರಣ್ಣ ಸಿ. ಟಿ., ಶ್ರೀಮತಿ ಶಾರದಾ ವೀರಣ್ಣ, ಶ್ರೀಮತಿ ಶಾಂತಮ್ಮ ಐ.ಕೆ., ಬಸವರಾಜ್ ಎನ್.ಟಿ., ರಾಘವೇಂದ್ರ ಐ.ಕೆ, ಶ್ರೀಮತಿ ಶಿಲ್ಪಾ ಎಂ.ಕೆ ಆಗಮಿಸಿದ್ದರು. ಪ್ರಾಚಾರ್ಯ ಸಂಗಮೇಶ.ಎಸ್.ಎಂ, ಶ್ರೀಮತಿ ಸುಜಾತ ಎಸ್.ಸಿ ಉಪಸ್ಥಿತರಿದ್ದರು.
ಅತ್ಯುನ್ನತ ಸಾಧನೆಗೈದ ವಿದ್ಯಾರ್ಥಿಗಳಾದ ನಿಖಿಲ್ ಸಿ .ಆರ್., ದೀಕ್ಷಾ ಪಿ ವಿ,. ಸೃಷ್ಟಿ ಸಿ.ಎಂ., ವಿದ್ಯಾಶ್ರೀ, ಪ್ರತಿಭಾ ಹಾಗೂ ನಿಖಿಲ್ ಬಿ. ಬಿ., ಆಕಾಶ್ ಆರ್.ಎಂ, ಪರಿಮಳ ಹೆಚ್.ಎಲ್, ಅಮೃತಾ ಎಂ.ಕೆ, ಪ್ರಿಯಾಂಕ ಹೆಚ್.ಟಿ, ರೇಖಾ ಹೆಚ್.ಟಿ, ಸಂದೀಪ ರೆಡ್ಡಿ ಇವರನ್ನು ಸನ್ಮಾನಿಸಲಾಯಿತು.
ಪುನೀತ್ ಟಿ ಹಾಗೂ ಸಾಕ್ಷಿ ಎಸ್. ಸಿ. ನಿರೂಪಣೆ ಮಾಡಿದರು. ಮೇಘನಾ, ಸ್ನೇಹಲ್ ಸ್ವಾಗತಿಸಿದರು. ಶ್ವೇತಾ ವಂದಿಸಿದರು.