ನವಯುಗದ ಪ್ರಣಾಳಿಕೆ ಬಿಡುಗಡೆ

ರಾಣೇಬೆನ್ನೂರು, ಜ.23- ಪ್ರಜಾಪ್ರಭುತ್ವದಲ್ಲಿ ಚಹಾ ಮಾರುವ ವ್ಯಕ್ತಿ ಪ್ರಧಾನಿಯಾದರು. ಈ ನಿಟ್ಟಿನಲ್ಲಿ ಸಂತೋಷ ಕುಮಾರ್ ಪಾಟೀಲ್ ಅವರು ಜನರಿಗೆ ಉತ್ತಮ ಆಡಳಿತ ನೀಡುವ ಕನಸು ಹೊಂದಿದ್ದಾರೆ ಎಂದು ಹಾವೇರಿ ತಾಲ್ಲೂಕಿನ ನೆಗಳೂರು ಹಿರೇಮಠದ ಶ್ರೀ  ಗುರುಶಾಂತೇಶ್ವರ ಸ್ವಾಮೀಜಿ ಹೇಳಿದರು.

ನಗರದ ದನದ ಮಾರುಕಟ್ಟೆಯ ಎದುರಿನ ಜಾಗ ದಲ್ಲಿ ಸೋಮವಾರ ನವಯುಗದ ಸಂತೋಷ ಕುಮಾರ ಪಾಟೀಲ್‌ ಅಭಿಮಾನಿ ಬಳಗದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹೊಸತನವನ್ನು ತರುವ ಹಿನ್ನೆಲೆಯಲ್ಲಿ ನವಯುಗ ಆರಂಭಿಸಿರುವುದು ಸಂತಸ ತಂದಿದೆ. ಆದ್ದರಿಂದ ನೀವೆಲ್ಲರೂ ಕೈಜೋಡಿಸಬೇಕು ಎಂದರು.

ಜಿ.ಪಂ. ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ್ ಮಾತನಾಡಿ,  ಜನರು ಬದುಕನ್ನು ಕಟ್ಟಿಕೊಳ್ಳಲು 80 ಅಂಶಗಳ ಕಾರ್ಯಕ್ರಮ ರೂಪಿಸಲಾಗಿದೆ. ಇದರಲ್ಲಿ 50 ಕಾರ್ಯ ಕ್ರಮಗ ಳನ್ನು 5 ವರ್ಷಗಳಲ್ಲಿ ಅನುಕೂಲ ಮಾಡದೇ ಹೋದರೆ ಮುಂದಿನ ಚುನಾವಣೆಯಲ್ಲಿ ನಿಲ್ಲುವುದಿಲ್ಲ. ರೈತರಿಂದ ಒಂದು ರೂಪಾಯಿ ಖರ್ಚು ಮಾಡಿಸದೇ ಜೌಗು ಪ್ರದೇಶವನ್ನು ಅಭಿವೃದ್ದಿ ಪಡಿಸಲಾಗುವುದು. ಜಾನು ವಾರುಗಳಿಗೆ ಉಚಿತವಾದ ವಿಮೆ ಮಾಡಲಾಗು ವುದು. ಎಪಿಎಂಸಿಯಲ್ಲಿ ಡ್ರೈಯರ್ ಮೂಲಕ ಒಣಗಿಸಿ ಮಾರುವ ವ್ಯವಸ್ಥೆ ಮಾಡಲಾಗುವುದು ಎಂದರು.

ದಾವಣಗೆರೆಯ ಬಿ.ಎ.ಇಬ್ರಾಹಿಂ ಸಖಾಫಿ ಮಾತ ನಾಡಿದರು. ಅಭಿಮಾನಿ ಬಳಗದ ಅಧ್ಯಕ್ಷ ಯುವರಾಜ ಬಾರಾಟಕ್ಕೆ, ಎಪಿಎಂಸಿ ಮಾಜಿ ಅಧ್ಯಕ್ಷ ರುದ್ರಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.