ಅತಿಯಾಸೆಯಿಂದ ಬದುಕು ಚಿಂತೆಗೀಡಾಗುತ್ತದೆ

ಅತಿಯಾಸೆಯಿಂದ ಬದುಕು ಚಿಂತೆಗೀಡಾಗುತ್ತದೆ

ರಾಣೇಬೆನ್ನೂರಿನಲ್ಲಿ ಸಿದ್ಧಾರೂಢರ 9ನೇ ರಥೋತ್ಸವ ಸಮಾರಂಭ ಮಲ್ಲಯ್ಯಜ್ಜ

ರಾಣೇಬೆನ್ನೂರು, ಜ. 24- ಹತ್ತು ತಲೆಮಾರು ಕುಳಿತು ಉಣ್ಣು ವಷ್ಟಿದ್ದರೂ ಹನ್ನೊಂದನೇ ತಲೆಮಾರಿನ ಬಗ್ಗೆ ಚಿಂತಿಸುವವರಿಗೆ ಬದುಕಿನಲ್ಲಿ ಶಾಂತಿ, ನೆಮ್ಮದಿ ದೊರಕಲಾರದು. ಅತಿಯಾಸೆ  ಬಾಧೆಯನ್ನು ತರುತ್ತದೆ. ಬಾಧೆ ಬದುಕನ್ನು ಚಿಂತೆಗೀಡು ಮಾಡುತ್ತದೆ ಎಂದು ಇಲ್ಲಿನ ಸಿದ್ಧಾರೂಢ ಮಠದ ಪೀಠಾಧಿಪತಿ ಶ್ರೀ ಮಲ್ಲಯ್ಯಜ್ಜ ಹೇಳಿದರು.

ಶ್ರೀಗಳು ಮಠದಲ್ಲಿ ಇಂದು ಪ್ರಾರಂಭವಾದ 23ನೇ ವರ್ಷದ ವೇದಾಂತ ಪರಿಷತ್ ಮತ್ತು ಸಿದ್ಧಾರೂಢರ 9ನೇ ರಥೋತ್ಸವ ಸಮಾರಂಭ ಉದ್ಘಾಟಿಸಿ, ಉಪ ದೇಶಿಸಿದ ಮಲ್ಲಯ್ಯಜ್ಜ, ಅತಿಯಾದ ಮೋಹದಿಂದ ಚಾಂಡಲನಾಗದೇ ಮಠ-ಮಂದಿರಗಳ, ಸುಜನರ ಸಂಗದಿಂದ ಬದುಕನ್ನು ಉಜ್ವಲಗೊಳಿಸಿಕೊಳ್ಳಿ ಎಂದರು.

ಶಿವಕಾರುಣ್ಯ ಸ್ಥಲ 16ನೇ ಪದ ತನುಮೋಹ ವಖಿಳೇಂದ್ರಿಯದ ಪರಿತಾಪ, ಧನದಾಸೆ, ಸುಖಜನರ ನಿಂದೆಯಾಲಾಪ ವಿಷಯ ಕುರಿತು  ಬೋಧಿಸಿದ ಸೌಟಗಿ ಶ್ರೀ ಲಿಂಗಯ್ಯ ಮಹಾಸ್ವಾಮಿಗಳು, ಲಕ್ಷ್ಮಿ ಚಂಚಲೆ, ಅವಳು ಒಂದೆಡೆ ನಿಲ್ಲುವುದು ವಿರಳ. ದಾನ-ಧರ್ಮದ ಮೂಲಕ ಅವಳನ್ನು ಹಿಡಿತದಿಂದಿಡಬಹುದು. ಸಿರಿತನ ಬಂದಾಗ ಧಾರ್ಮಿಕ ಸಭೆ-ಸಮಾರಂಭ, ಬಡವರಿಗೆ ದೀನರಿಗೆ ಕರೆದು ದಾನ ಮಾಡಿರಿ ಎಂದು ಸ್ವಾಮೀಜಿ ನುಡಿದರು.

ಪರದೇಶಗಳಿಗೆ ಹೋದವರೆಲ್ಲ ವಿವೇಕಾನಂದರಾಗುವುದಿಲ್ಲ. ಖಾದಿ ತೊಟ್ಟವರೆಲ್ಲ ಗಾಂಧಿಗಳಾಗಲ್ಲ. ಅಂತಹ ತತ್ವಾದರ್ಶಗಳನ್ನು ಅಳ ವಡಿಸಿಕೊಂಡು ಆಚರಣೆ ಮಾಡಿ ಕೊಂಡವರ ಕಾಯ ಅಳಿದರೂ ಹೆಸರು ಚಿರಸ್ಥಾಯಿಯಾಗಿರುತ್ತದೆ. ಮಲ್ಲಯ್ಯಜ್ಜನ ಕೋಪ ನಮ್ಮ ಬದುಕನ್ನು ಎತ್ತರದತ್ತ ಕೊಂಡೊ ಯ್ಯುತ್ತದೆ. ಅವರ ಮಾರ್ಗದರ್ಶನ ನಮಗೆ ದಾರಿದೀಪವಾಗಿದೆ ಎಂದು ಹುಬ್ಬಳ್ಳಿ ಸಿದ್ದಾರೂಢ ಮಠದ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು ನುಡಿದರು.

ಸಂಜೆ ಜೀವ ಸಂಭೋದನ ಸ್ಥಲ 1 ನೇ ಪದ ವಿನುತ ಗುರು ಮೂರ್ತಿಯನು ಮೇಶನಂಘ್ರೀ ಯನು ವಿಷಯ ಕುರಿತು ಹಂಪಿ ಹೇಮಕೂಟದ ಶ್ರೀ ವಿದ್ಯಾನಂದ ಭಾರತಿ ಸ್ವಾಮಿಗಳು ಬೋಧಿಸಿದರು. ಲಿಂಗಯ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದು, ಮಲ್ಲಯ್ಯಜ್ಜ ಸಾನ್ನಿದ್ಯ ವಹಿಸಿದ್ದರು. ಶ್ರೀ ಮಠದ ಭಕ್ತ ದೇವೇಂದ್ರಪ್ಪ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.