ವಾರ ಭವಿಷ್ಯ

ವಾರ ಭವಿಷ್ಯ

ಮೇಷ (ಅಶ್ವಿನಿ, ಭರಣಿ, ಕೃತ್ತಿಕಾ)
(ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)

 ವ್ಯವಹಾರದಲ್ಲಿ ಹೂಡಿಕೆ ಮಾಡುವ ಮೊದಲು ಅದರ ಅರಿವು ಚೆನ್ನಾಗಿರುವುದು ಲೇಸು. ದೇಹದಲ್ಲಿ ಉಷ್ಣಾಂಶವು ಹೆಚ್ಚಾಗುವುದರಿಂದ, ಆರೋಗ್ಯದ ವಿಚಾರದಲ್ಲಿ ವ್ಯತ್ಯಾಸವಾಗುವ ಸಂಭವವಿದೆ. ಇಷ್ಟುದಿನ ನಿಮ್ಮ ಮಾತುಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದವರು, ಅನಿರೀಕ್ಷಿತವಾಗಿ ನಿಮ್ಮ ವಿರುದ್ಧ ತಿರುಗಿ ಬೀಳಬಹುದು. ಆಸ್ತಿ ಪಾಲುದಾರಿಕೆ ವಿಚಾರದಲ್ಲಿ ಅನುಭವಿಗಳಾದ ಮಧ್ಯಸ್ಥರ  ಸಲಹೆಯಂತೆ ನಡೆದುಕೊಳ್ಳಿ. ಸರ್ಕಾರಿ ನೌಕರರಿಗೆ ಅನಿರೀಕ್ಷಿತವಾಗಿ ವರ್ಗಾವಣೆ, ಹಣಕಾಸಿನ ಪರಿಸ್ಥಿತಿ ಅನುಕೂಲ ವಾಗಿರುವುದರಿಂದ, ಅದರ ಚಿಂತೆಬೇಡ. ಗುರುಗಳ ಸೇವೆ ಮಾಡಿ. ಭಾನು-ಸೋಮ-ಮಂಗಳ-ಶುಭ ದಿನಗಳು.

ವೃಷಭ (ಕೃತ್ತಿಕಾ, 2,3,4, ರೋಹಿಣಿ, ಮೃಗ 1,2)
(ಇ.ಉ.ಎ.ಒ.ವ.ವಿ.ವು.ವೆ.ವೋ)

ಪ್ರತಿಯೊಂದಕ್ಕೂ ಮತ್ತೊಬ್ಬರನ್ನು ಅವಲಂಬಿಸುವುದರಿಂದ ನಿಮಗೆ ಅನು ಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಮನೆಯ ಹಿರಿಯರೊಂದಿಗೆ ಅನಾವಶ್ಯಕ ಮಾತು ಗಳನ್ನು ಬೆಳೆಸಬೇಡಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಅಲಕ್ಷೆ ಮಾಡುವುದರಿಂದ ಉನ್ನತಾಧ್ಯಯನಕ್ಕೆ ಅಡಚಣೆಯಾಗಬಹುದು. ರಾಜಕಾರಣಿಗಳ ಶಿಫಾರಿಸ್ಸಿನಿಂದ ಮಾತ್ರ ಸರ್ಕಾರಿ ಕೆಲಸಗಳು ಆಗಲು ಸಾಧ್ಯ. ತಾಳ್ಮೆ ಜಾಣ್ಮೆಯಿಂದ ಮಾತ್ರ ಸ್ವಂತ ಉದ್ಯಮದಲ್ಲಿ ಯಶಸ್ಸು ಕಾಣಲು ಸಾಧ್ಯ. ಯುವಕರು ಹಿರಿಯರೊಂದಿಗೆ ತಾಳ್ಮೆಯಿಂದಿರುವುದು ಉತ್ತಮ. ಹಣ್ಣು-ತರಕಾರಿಗಳಿಗೆ ಬೇಡಿಕೆ. ಸೋಮ-ಗುರು-ಶುಕ್ರ-ಶುಭ ದಿನಗಳು.

ಮಿಥುನ (3,4, ಆರಿದ್ರಾ, ಪುನರ್ವಸು 1,2,3
(ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)

ಹಲವು ಸಮಸ್ಯೆಗಳಿಗೆ ಒಂದೇ ಬಾರಿಗೆ ಪರಿಹಾರ ಹುಡುಕುವುದಕ್ಕಿಂತ, ಹಂತಹಂತ ವಾಗಿ ಪರಿಹಾರ ಕಂಡುಕೊಳ್ಳಿ, ಮನೆಕಟ್ಟುವ ವಿಚಾರದಲ್ಲಿ, ಸ್ನೇಹಿತರಿಂದ ಹಾಗೂ ಬಂಧುಗಳಿಂದ ನೆರವು ದೊರೆಯಲಿದೆ. ಎಷ್ಟೇ ಕೆಲಸ ಕಾರ್ಯಗಳಿದ್ದರೂ ಕೂಡ, ಮಕ್ಕಳ ವಿದ್ಯಾಭ್ಯಾಸವನ್ನು ಅಲಕ್ಷಿಸಬೇಡಿ. ಮಡದಿಯ ಸಲಹೆಗಳು ಉಪಯೋಗಕ್ಕೆ ಬರಬಹುದು. ಗುತ್ತಿಗೆದಾರರಿಗೆ ಬಾಕಿಹಣ ಕೈಸೇರಲಿದೆ. ಚಾಡಿಮಾತುಗಳಿಂದ ನವದಂಪತಿಗಳಲ್ಲಿ ವೈಮನಸ್ಯ. ಸಾಧ್ಯವಾದಷ್ಟು ಇದಕ್ಕೆ ಅವಕಾಶಕೊಡದಿರುವುದು ಮೇಲು. ಸಂತಾ ನಾಪೇಕ್ಷಿಗಳಿಗೆ ನಿರೀಕ್ಷಿತ ಶುಭ ಸಮಾಚಾರ, ಹಣಕಾಸಿನ ಪರಿಸ್ಥಿತಿ ಸಾಧಾರಣ, ಖರ್ಚಿನ ವಿಚಾರದಲ್ಲಿ ಹಿಡಿತವಿರಲಿ. ಭಾನು-ಗುರು-ಶುಕ್ರ-ಶುಭ ದಿನಗಳು.

ಕರ್ಕಾಟಕ (ಪುನ 4, ಪುಷ್ಯ, ಆಶ್ಲೇಷ)
(ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)

ಗಣ್ಯಾತಿಗಣ್ಯರೊಂದಿಗೆ ವ್ಯವಹರಿಸುವಾಗ ತುಸು ಜಾಗ್ರತರಾಗಿರುವುದು ಮೇಲು.ತುಸು ವ್ಯತ್ಯಾಸವಾದಲ್ಲಿ, ಅವಮಾನ ಖಂಡಿತಾ, ಮಹಿಳಾ ರಾಜಕಾರಣಿಗಳ ಏಳಿಗೆಗೆ, ತಮ್ಮ ಪಕ್ಷದಲ್ಲೇ ಇರುವ ಕೆಲವರ ಒಳಸಂಚಿನಿಂದಾಗಿ ಪದೇಪದೇ ಅಡಚಣೆ, ವಿದ್ಯಾರ್ಥಿಗಳ ಉನ್ನತಾಧ್ಯಯನಕ್ಕೆ  ಸಮಾಜದಲ್ಲಿರುವ ದಾನಿಗಳಿಂದ ವಿಶೇಷ ನೆರವು ದೊರೆಯಲಿದೆ. ಆದರೆ ಇದು ದುರುಪಯೋಗವಾಗದಂತೆ ಎಚ್ಚರವಹಿಸುವುದು ಉತ್ತಮ. ನಿರುದ್ಯೋಗಿ ಪದವೀಧರರು, ಉದ್ಯೋಗದ ವಿಷಯದಲ್ಲಿ ಹಠಮಾಡದೆ, ಸಿಗಲಿರುವ ಕೆಲಸಕ್ಕೆ ಹೋಗುವುದು ಮೇಲು. ಮಡದಿಯ ಆರೋಗ್ಯದ ವಿಚಾರದಲ್ಲಿ, ಉದಾಸಿನ ಮಾಡಬೇಡಿ. ಸಾಧ್ಯವಿದ್ದಲ್ಲಿ ಅನ್ನದಾನಮಾಡಿ. ಸೋಮ-ಮಂಗಳ-ಗುರು-ಶುಭ ದಿನಗಳು.

ಸಿಂಹ ( ಮಘ, ಪುಬ್ಬ, ಉತ್ತರ 1)
(ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)

ಬಹುಶ್ರಮದಿಂದ ದೇಹಾಲಸ್ಯವಾಗುವ ಸಂಭವಿದ್ದು, ವಿಶ್ರಾಂತಿ ಕಡೆಗೂ ತುಸು ಗಮನಕೊಡಿ, ರಾಜಕಾರಣಿಗಳೊಂದಿಗೆ ಎಷ್ಟೇ ಒಡನಾಟವಿದ್ದರೂ ಅವರಿಂದ ಅಂತರಕಾಯ್ದುಕೊಳ್ಳಿ, ವಿಷಯಗಳ ಅರಿವಿಲ್ಲದೇ ಮಧ್ಯಸ್ಥರಾಗಬೇಡಿ. ಇಲ್ಲವಾದಲ್ಲಿ, ನೀವೇ ಅಪಮಾನಿತರಾಗುವಿರಿ. ಮಗನ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿಕಂಡುಬಂದು, ಮನಸ್ಸಿಗೆ ನೆಮ್ಮದಿಯಾಗಲಿದೆ. ಪ್ರಯಾಣ ಕಾಲದಲ್ಲಿ, ಅಪರಿಚಿತರೊಂದಿಗೆ ಮಾತುಕತೆ ಬೇಡ. ಅವಿವಾಹಿತ ಸೋದರಿಗೆ ಕಂಕಣಭಾಗ್ಯ, ವಿವಾದಗಳಿಗೆ ಕೋರ್ಟ್ ಮೆಟ್ಟಿಲೇರದೇ, ರಾಜಿ-ಪಂಚಾಯ್ತಿ ಮುಖಾಂತರ ಬಗೆಹರಿಸಿಕೊಳ್ಳಿ, ದೈನಂದಿನ ಜೀವನಕ್ಕೆ ಹಣಕಾಸಿನ ಅಡಚಣೆಯಾಗದು. ಗುರುಗಳನ್ನು ಆರಾಧಿಸಿ. ಭಾನು-ಗುರು-ಶುಕ್ರ-ಶುಭದಿನಗಳು.

ಕನ್ಯಾ (ಉತ್ತರಾ 2,3,4, ಹಸ್ತಾ, ಚಿತ್ತಾ 1,2)
(ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)

ಸಂಗಾತಿಯ ಆಯ್ಕೆ ವಿಚಾರದಲ್ಲಿ ಮನೆಯವರ ವಿರೋಧ ಕಟ್ಟಿಕೊಳ್ಳ ಬೇಕಾದೀತು.ನಿಮಗೆ ಮೂಳೆಸಂಬಂಧಿ ಸಮಸ್ಯೆಗಳಿದ್ದಲ್ಲಿ, ಎಚ್ಚರದಿಂದಿರುವುದು ಮೇಲು. ಮಕ್ಕಳಿಗೆ ಅಧ್ಯಯನದಲ್ಲಿ ಉದಾಸೀನತೆ ಬರದಂತೆ ಎಚ್ಚರವಹಿಸುವುದು ಉತ್ತಮ.ಸಂಶೋಧನಾಕ್ಷೇತ್ರದಲ್ಲಿ, ಪರಿಣಾಮಕಾರಿ ಮತ್ತು ಅಪೇಕ್ಷಿತ ಫಲಿತಾಂಶ ಬರಲಿದೆ. ಆದಾಯದ ಮೂಲದಲ್ಲಿ ಏರಿಕೆ ಕಂಡುಬರಲಿದೆ. ಮತ್ತೊಬ್ಬರ ಒತ್ತಾಯಕ್ಕೆ ಹೆಚ್ಚಿನ ಭೋಜನ ಕೂಟದಲ್ಲಿ ಭಾಗವಹಿಸದಿರುವುದು ಕ್ಷೇಮಕರ. ಅನಿರೀಕ್ಷಿತವಾಗಿ ಪುಣ್ಯಕ್ಷೇತ್ರಗಳ ದರ್ಶನಭಾಗ್ಯ ಬರಲಿದೆ. ಇದನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ.ಗಣಪತಿಯನ್ನು ವಿಶೇಷವಾಗಿ ಆರಾಧಿಸಿ. ಸೋಮ-ಬುಧ-ಶುಕ್ರ-ಶುಭ ದಿನಗಳು.

ತುಲಾ (ಚಿತ್ತಾ 3,4, ಸ್ವಾತಿ, ವಿಶಾಖ 1,2,3)
(ರ.ರಿ.ರು.ರೆ.ರೊ.ತ.ತಿ.ತು.ತೆ.)

ಆದಾಯಕ್ಕಿಂತ ಅನಿರೀಕ್ಷಿತ ವೆಚ್ಚಗಳೇ ಬಹಳವಾಗಲಿದ್ದು, ಲೆಕ್ಕಪರಿಶೋಧಕರಿಗೆ, ವೃತ್ತಿಯಲ್ಲಿ ಹಲವು ಸವಾಲುಗಳು ಎದುರಾಗಲಿವೆ. ತುಸು ಜಾಣ್ಮೆಯಿಂದ ನಡೆದುಕೊಂಡಲ್ಲಿ, ಸಮಸ್ಯೆಗಳು ಬಗೆಹರಿಯುವುದು. ಕೃಷಿ ಸಂಬಂಧಿ ಯಂತ್ರೋಪಕರಣಗಳ ವ್ಯಾಪಾರ ಜೋರಾಗಿಯೇ ನಡೆಯಲಿದೆ. ಆದಾಯ ತೆರಿಗೆ ಅಧಿಕಾರಿಗಳ ದಾಳಿ, ರಾಜಕಾರಣಿಗಳು ಸಮಾಜಸೇವೆ ಸೋಗಿನಲ್ಲಿ ಹೋದಲ್ಲಿ, ಅವರ ನಿಜಬಣ್ಣ ಬಯಲಾಗಲಿದೆ.ಮಂದಗತಿಯಲ್ಲಿರುವ ಹಣಕಾಸಿನ ಹರಿವು ಮಡದಿ ಮಕ್ಕಳ ಕೋರಿಕೆಗಳನ್ನು ಪೂರೈಸಲು ಸಾಲದೇ ಹೋಗಬಹುದು. ವಿದ್ಯಾರ್ಥಿಗಳು ಅಧ್ಯಯನದ ಕಡೆ ಗಮನವಿಡದೇ ಹೋದಲ್ಲಿ, ಮುಂದಿನ ಭವಿಷ್ಯ ಮಸುಕಾಗಬಹುದು. ಬುಧ-ಶುಕ್ರ-ಶನಿ-ಶುಭದಿನಗಳು.

ವೃಶ್ಚಿಕ (ವಿಶಾಖ 4, ಅನೂ, ಜೇಷ್ಠ)
(ತೊ.ನ.ನಿ.ನು.ನೆ.ನೋ.ಯ.ಯಿ.ಯು.)

ವಿದೇಶದಲ್ಲಿ ವ್ಯವಹಾರ ಮಾಡುತ್ತಿರುವ ಮಕ್ಕಳಿಗೆ ನೆರವಾಗಲು ವಿದೇಶ ಪ್ರಯಾಣ ಮಾಡಲೇಬೇಕಾದೀತು. ನಿರೀಕ್ಷಿತ ಮೂಲಗಳಿಂದ ಮಾತ್ರವಲ್ಲದೇ ಬೇರೆ ಮೂಲಗಳಿಂದಲೂ ಹಣದ ಹರಿವು ಉತ್ತಮವಾಗಿಯೇ ಇರುವುದರಿಂದ ಉಳಿತಾ ಯದ ಬಗ್ಗೆ ಆಲೋಚಿಸಿವುದು ಲೇಸು. ಜೊತೆಗೆ ಅದನ್ನು ಉತ್ತಮವಾಗಿ ನಿರ್ವಹಣೆ ಮಾಡು ವುದನ್ನು ಕಲಿಯಿರಿ. ಅವಕಾಶ ಸಿಕ್ಕಲ್ಲಿ ಆಸ್ತಿ ಖರೀದಿ ಮಾಡಲು ಯಾವುದೇ ಅಡ್ಡಿ ಯಿಲ್ಲ. ಹೋಟೆಲ್ ಉದ್ಯಮದಲ್ಲಿ ಸಾಕಷ್ಟು ಪ್ರಗತಿ,  ವಿದ್ಯುತ್ ಉಪಕರಣಗಳಲ್ಲಿ ಜಾಗ್ರತೆ ಯಿಂದಿರುವುದು ಮೇಲು. ಸರ್ಕಾರಿ ಕೆಲಸಗಳಿಗಿದ್ದ ಅಡಚಣೆಗಳು ದೂರವಾಗಲಿವೆ. ಬಂಧುಗಳೊಂದಿಗೆ ಸೌಹಾರ್ದತೆಯಿರಲಿ. ಭಾನು-ಮಂಗಳ-ಬುಧ-ಶುಭ ದಿನಗಳು.

ಧನಸ್ಸು (ಮೂಲ, ಪೂರ್ವಾಷಾಢ, ಉತ್ತರಾಷಾಢ)
(ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)

ಮೆಕ್ಯಾನಿಕಲ್‌ ಇಂಜಿನಿಯರಿಂಗ್‍ನಲ್ಲಿ ಹೆಚ್ಚಿನ ಪರಿಣಿತಿ ಪಡೆದವರಿಗೆ, ದೇಶ-ವಿದೇಶಗಳಲ್ಲಿ ಬೇಡಿಕೆ ಹೆಚ್ಚಲಿದೆ. ಕೈಗಾರಿಕೋದ್ಯಮಿಗಳು ತಾವು ಯಂತ್ರೋಪಕರ ಣಗಳನ್ನು ಖರೀದಿಸುವಾಗ ಮಧ್ಯವರ್ತಿಗಳಿಂದ ಮೋಸ ಹೋಗುವ ಪ್ರಸಂಗ ಬರಲಿದೆ.ಆಸ್ತಿ ಪಾಲುದಾರಿಕೆ ವಿಚಾರದಲ್ಲಿ, ತಗಾದೆ ಬರಲಿವುದರಿಂದ, ಹಿರಿಯರ ಸಮಕ್ಷಮದಲ್ಲಿ ಬಗೆಹರಿಸಿಕೊಳ್ಳಿ. ಏರೋನಾಟಿಕಲ್ ಓದುತ್ತಿರುವ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಉತ್ತಮವಾಗಿರಲಿದೆ. ಪ್ರಾಯಕ್ಕೆ ಬಂದ ಮಕ್ಕಳ ಚಟುವಟಿಕೆಗಳನ್ನು ಆಗಾಗ ಗಮನಿ ಸುತ್ತಿರುವುದು ಮೇಲು. ನೆರೆಹೊರೆಯವರೊಂದಿಗೆ ಸೌಹಾರ್ದತೆಯಿಂದಿರುವುದು ಉತ್ತಮ. ದೂರದೂರುಗಳಿಗೆ ಪ್ರಯಾಣ ಬೇಡ. ಬುಧ-ಗುರು-ಶುಕ್ರ-ಶುಭ ದಿನಗಳು.

ಮಕರ (ಉತ್ತರಾಷಾಢ 2,3,4, ಶ್ರವಣ, ಧನಿಷ್ಠಾ 1,2)
(ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)

ಕೆಲಸ ಕಾರ್ಯಗಳ ಒತ್ತಡದ ನೆಪದಲ್ಲಿ ವೈಯುಕ್ತಿಕ ವಿಚಾರಗಳನ್ನು ಕಡೆಗಣಿಸಿದಲ್ಲಿ, ಕುಟುಂಬದಲ್ಲಿ ಅಸಮಾಧಾನದ ಹೊಗೆಯಾಡಬಹುದು. ವೃತ್ತಿಯಲ್ಲಿ ಏನೇ ತೊಂದರೆ ಬಂದರೂ, ತಾಳ್ಮೆಯಿಂದ ವರ್ತಿಸಿದಲ್ಲಿ ಸಮಸ್ಯೆಗಳು ತಾವಾಗಿಯೇ ಬಗೆಹರಿಯುವವು. ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡವರಿಗೆ, ಸರ್ಕಾರ ಮತ್ತು ಸಂಘ-ಸಂಸ್ಥೆಗಳಿಂದ ಸನ್ಮಾನವಾಗಲಿದೆ. ಮಕ್ಕಳ ನಿಮಿತ್ತವಾಗಿ ನೆರೆಹೊರೆಯವರೊಂದಿಗೆ ನಿಷ್ಠೂರ ಕಟ್ಟಿಕೊಳ್ಳ ಬೇಕಾದೀತು. ವ್ಯಾಪಾರಿಗಳು ಹಣಕಾಸಿನ ವಿಚಾರದಲ್ಲಿ ಜಾಗರೂಕ ರಾಗಿರಿ, ಮನೆಯಲ್ಲಿರುವ ಅಮೂಲ್ಯ ವಸ್ತುಗಳ ಕಣ್ಮರೆ, ಮಹಿಳೆಯರು ತಮ್ಮ ಕೋರಿಕೆ ಗಳನ್ನು ಈಡೇರಿಸಿಕೊಳ್ಳಲು ಕಷ್ಟಪಡುವರು. ಸೋಮ-ಶುಕ್ರ-ಶನಿ-ಶುಭ ದಿನಗಳು.

ಕುಂಭ (ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ 1,2,3)
(ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ)

ತಮ್ಮ ಸಾಮರ್ಥ್ಯವನ್ನು ಮೀರಿಹೋಗುವುದರಿಂದ ತೊಂದರೆ ಅನುಭವಿಸುವರು. ಕೃಷಿ ಪದಾರ್ಥಗಳ ಮಾರಾಟಗಾರರಿಗೆ ಮಾರುಕಟ್ಟೆ ವಿಸ್ತರಿಸಲಿದೆ. ತಿಳಿಯದಿರುವ ವಿಷಯಗಳ ಬಗ್ಗೆ ಮಾತನಾಡಲು ಹೋಗಿ ಅಪಹಾಸ್ಯಕ್ಕೆ ಗುರಿಯಾಗುವಿರಿ. ಕೈಗಾರಿಕೊದ್ಯಮಿಗಳಿಗೆ ಸರ್ಕಾರದಿಂದ ನೆರವು ದೊರೆಯಲಿದೆ. ಅವಶ್ಯಕತೆಯಿಲ್ಲದೇ ಇದ್ದರೂ ಸಾಲ ಮಾಡುವುದು ಮೂರ್ಖತನ, ದೈನಂದಿನ ಜೀವನದ ಚಿಂತೆಬೇಡ. ಆದರೆ ಅನಗತ್ಯ ವಸ್ತುಗಳ ಖರೀದಿಬೇಡ. ಖಾಸಗಿ ಕಂಪನಿ ನೌಕರರು ತಮ್ಮ ವೃತ್ತಿ ಬದಲಾವಣೆ ಪ್ರಸ್ತಾಪವನ್ನು ಕೆಲಕಾಲ ಮುಂದೂಡುವುದು ಮೇಲು. ಸಾಧ್ಯವಿದ್ದಲ್ಲಿ ವಿಷ್ಣು ಸಹಸ್ರನಾಮ ಪಠಿಸಿ. ಬುಧ-ಗುರು-ಶನಿ-ಶುಭ ದಿನಗಳು.

ಮೀನ (ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ)
(ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.) 

ಕೆಲವೊಮ್ಮೆ ನಮಗೆ ಇಷ್ಟವಿಲ್ಲದಿದ್ದರೂ, ಮತ್ತೊಬ್ಬರನ್ನು ಓಲೈಸಲೇ ಬೇಕಾದ ಪ್ರಸಂಗ ಬರಬಹುದು.  ಕಟ್ಟಡದ ಕಾರ್ಮಿಕರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಮಹಿಳೆಯರು ಅತಿಯಾದ ಭಾವೊದ್ವೇಗದಿಂದ ಮಾತನಾಡಿದರೆ ತಾವು ಮಾತ್ರವಲ್ಲದೆ ಇಡೀ ಕುಟುಂಬದ ಸದಸ್ಯರೂ ಕೂಡ ಗಹನವಾದ ಸಮಸ್ಯೆಗಳನ್ನು ಎದುರಿಸಬೇಕಾದೀತು. ಅಸ್ತಮಾ ಅಥವಾ ಉಸಿರಾಟದ ತೊಂದರೆಯಿರುವವರು, ತಜ್ಞವೈದ್ಯರ ಸಂಪರ್ಕದಲ್ಲಿರುವುದು ಮೇಲು. ಮತ್ತೊಬ್ಬರ ವೈಯಕ್ತಿಕ ವಿಚಾರದಲ್ಲಿ ಪ್ರವೇಶ ಮಾಡುವುದರಿಂದ ನೀವು ತೊಂದರೆಗೆ ಸಿಲುಕಬಹುದು. ಶಾಸ್ತ್ರೀಯ ವಿದ್ವಾಂಸರಿಗೆ ಮಠಮಾನ್ಯಗಳಿಂದ ಗೌರವ ಸಿಗಲಿದೆ. ಪುಸ್ತಕಗಳ ಮಾರಾಟ ಜೋರಾಗಿಯೇ ನಡೆಯಲಿದೆ. ಸೋಮ-ಗುರು-ಶುಕ್ರ-ಶುಭ ದಿನಗಳು.


ವಿಶೇಷ ದಿನಗಳು :
ದಿನಾಂಕ: 27.1.2023 ನೇ ಗುರುವಾರ ಭೋಗಿ,
28.1.2023 ನೇ ಶುಕ್ರವಾರ ರಥಸಪ್ತಮೀ. 

 


ಜಯತೀರ್ಥಾಚಾರ್ ವಡೇರ್
ದಾವಣಗೆರೆ.
[email protected]