`ಉಡಾನ್ – 03′ ವಸ್ತು ಪ್ರದರ್ಶನ, ಮಾರಾಟ ಮೇಳಕ್ಕೆ ಚಾಲನೆ

`ಉಡಾನ್ – 03′ ವಸ್ತು ಪ್ರದರ್ಶನ, ಮಾರಾಟ ಮೇಳಕ್ಕೆ ಚಾಲನೆ

ದಾವಣಗೆರೆ, ಜ.22- ಜೈನ್ ಇಂಟರ್‌ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ ಹಾಗೂ ಜಿಟೋ ಲೇಡಿಸ್ ವಿಂಗ್ ವತಿಯಿಂದ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಶನಿವಾರ `ಉಡಾನ್ – 03′ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿತ್ತು. ಚೇತನಾ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷೆ ವಿ. ವಿಜಯಲಕ್ಷ್ಮಿ ಹಾಗೂ ಲತಾ ಲೋಕಿಕೆರೆ ನಾಗರಾಜ್ ಮೇಳಕ್ಕೆ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ನೆರೆಯ  ಶ್ರೀಲಂಕಾ, ಪಾಕಿಸ್ತಾನ ಮುಂತಾದ ದೇಶಗಳು ಆರ್ಥಿಕ ಸಂಕಷ್ಟದಲ್ಲಿರುವುದನ್ನು ಕಾಣುತ್ತಿದ್ದೇವೆ. ಎಲ್ಲರೂ ಸ್ವಾವಲಂಬಿಗಳಾಗಿ ಜೀವನ ನಡೆಸಿದರೆ ಆರ್ಥಿಕ ಸಂಕಷ್ಟಗಳಿಂದ ದೂರ ಇರಲು ಸಾಧ್ಯ ಎಂದು ಹೇಳಿದರು.

ಮಹಿಳೆಯರು ಮನೆಗಳಲ್ಲಿ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಬಹುದು. ಇಂತಹ ಉದ್ಯಮಗಳು ಹೆಚ್ಚಾದರೆ, ದೇಶದಲ್ಲಿ ಎಂತಹ ಆರ್ಥಿಕ ಕುಸಿತ ಉಂಟಾದರು ನಿಭಾಯಿಸುವ ಶಕ್ತಿ ದೊರೆಯುತ್ತದೆ ಎಂದು ಹೇಳಿದರು.

ಮೇಳದಲ್ಲಿ ವಿವಿಧ ಉತ್ಪನ್ನಗಳ 52 ಮಾರಾಟ ಮಳಿಗೆಗಳು, 17 ಆಹಾರೋ ತ್ಪನ್ನ ಮಳಿಗೆಗಳು ಸೇರಿದಂತೆ ಕ್ರೀಡಾ ಮಳಿಗೆಗಳೂ ಇವೆ. ಮಹಿಳೆಯರಲ್ಲಿ ಉದ್ಯಮಶೀಲತೆ ಹೆಚ್ಚಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಟೋ ದಾವಣಗೆರೆ ಮಹಿಳಾ ವಿಭಾಗದ ಮುಖ್ಯ ಕಾರ್ಯದರ್ಶಿ ಶ್ವೇತಾ ಗಾಂಧಿ ಮಾಹಿತಿ ನೀಡಿದರು. 

ಮೇಳದಲ್ಲಿ ಆಹಾರ ಮಳಿಗೆ ತೆರೆದಿದ್ದ ಸ್ವೀಟ್ ಟೆಂಪ್ಟೇಷನ್‌ನ ಪೂರ್ವ ಜಿ. ಲೊಡಯ, ಮಹಿಳೆಯರ ಉದ್ಯೋಗ ಪ್ರೋತ್ಸಾಹಿಸಲು ಇದು ಉತ್ತಮ ವೇದಿಕೆಯಾಗಿದೆ ಎಂದರು.

ಜಿಟೋ ಉಪಾಧ್ಯಕ್ಷೆ ಬಿಂದು ಖೋನಾ, ಜೀಟೋ ಚಾಪ್ಟರ್ ಮುಖ್ಯ ಕಾರ್ಯದರ್ಶಿ ವಿಕ್ರಂ ಸೇಠಿಯಾ, ಯುವ ವಿಭಾಗದ ಅಧ್ಯಕ್ಷ ಸಯ್ಯಾಮ್ ಜೈನ್, ವಿರಾಕ್ ಜೈನ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.