ಮೂಲತಃ ಹಿರೇಕೆರೂರು ತಾಲ್ಲೂಕು ಶಿರಗುಂಬಿ ಗ್ರಾಮದವರಾದ ದಾವಣಗೆರೆ ವಾಸಿ ಡಾ|| ಎಸ್.ಹೆಚ್.ಸೊರಟೂರ್ ಅವರು ದಿನಾಂಕ 21.01.2023ರ ಶನಿವಾರ ಸಂಜೆ 5.45 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 89 ವರ್ಷ ವಯಸ್ಸಾಗಿತ್ತು. ಪತ್ನಿ, ನಾಲ್ವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತಿಮ ದರ್ಶನವನ್ನು ದಿನಾಂಕ 22.01.2023ರ ಭಾನುವಾರ ಬೆಳಗ್ಗೆ 8 ಗಂಟೆಯವರೆಗೆ # 2985 `ಶಕುಂತಲ ಪಾರ್ಕ್ ವಿವ್ಯೂ’ ಅಪಾರ್ಟ್ಮೆಂಟ್ ವಾಟರ್ ಟ್ಯಾಂಕ್ ಎದುರು, ಎಂ.ಸಿ.ಸಿ `ಬಿ’ ಬ್ಲಾಕ್ ದಾವಣಗೆರೆಯಲ್ಲಿರುವ ಮೃತರ ಸ್ವಗೃಹದಲ್ಲಿ ಇಡಲಾಗುವುದು. ನಂತರ ಮಧ್ಯಾಹ್ನ 12 ಗಂಟೆಗೆ ಮೃತರ ಸ್ವಗ್ರಾಮವಾದ ಹಿರೇಕೆರೂರು ತಾಲ್ಲೂಕು ಶಿರಗುಂಬಿ ಗ್ರಾಮದಲ್ಲಿರುವ ಮೃತರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.