ದಾವಣಗೆರೆಯ ಶ್ರೀ ಕಲ್ಪವೃಕ್ಷ ಪ್ರಿಂಟರ್ ಮಾಲೀಕರಾದ ಶ್ರೀ ಹೆಚ್. ರಂಗನಾಥ್ರವರ ಮಾತೃಶ್ರೀಯವರಾದ ಶ್ರೀಮತಿ ಆನಂದ ರತ್ನಮ್ಮ ರವರು ದಿನಾಂಕ 22-01-2023ರ ಭಾನುವಾರ ರಾತ್ರಿ 8.30 ಕ್ಕೆ ಹರಿಪಾದ ಸೇರಿದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 89 ವರ್ಷ ವಯಸ್ಸಾಗಿತ್ತು. ಐದು ಜನ ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 23-01-2023ರ ಸೋಮವಾರ ಬೆಳಿಗ್ಗೆ 9.30 ಕ್ಕೆ ಹಳೇ ಪಿ.ಬಿ. ರಸ್ತೆಯಲ್ಲಿರುವ ವೈಕುಂಠ ಧಾಮದಲ್ಲಿ ನೆರವೇರಿಸಲಾಗುವುದುಎಂದು ಕುಟುಂಬದವರು ತಿಳಿಸಿದ್ದಾರೆ.