ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಗುರಿ, ಸಾಧಿಸುವ ಛಲ ಮುಖ್ಯ

ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಗುರಿ, ಸಾಧಿಸುವ ಛಲ ಮುಖ್ಯ

`ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ  ದಾವಣಗೆರೆ ವಿವಿ ಕುಲಪತಿ ಡಾ. ಬಿ.ಡಿ. ಕುಂಬಾರ

ದಾವಣಗೆರೆ, ಜ. 24- ವಿದ್ಯಾರ್ಥಿಗಳಿಗೆ ಜೀವನದಲ್ಲಿ ನಿರ್ದಿಷ್ಟ ಗುರಿ ಇರಬೇಕು. ಸಾಧಿಸುವ ಛಲ ಇರಬೇಕು. ಆಗ ಮಾತ್ರ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ದಾವಣಗೆರೆ ವಿವಿ ಕುಲಪತಿ ಡಾ. ಬಿ.ಡಿ. ಕುಂಬಾರ ಹೇಳಿದರು.

ರೋಟರಿ ದಕ್ಷಿಣ ವಲಯ, ಡಾ. ರವಿ ಕುಮಾರ್ ಮತ್ತು ತಂಡದವರ ಸಂಯುಕ್ತಾ ಶ್ರಯದಲ್ಲಿ ದಾವಣಗೆರೆ ದೃಶ್ಯಕಲಾ ವಿಶ್ವವಿ ದ್ಯಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ `ಪರೀಕ್ಷಾ ಪೇ ಚರ್ಚಾ’ ಕಾರ್ಯ ಕ್ರಮದ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ಓದುವ ವಿದ್ಯಾರ್ಥಿಗಳಿಗೆ ಈಗಿನಷ್ಟು ಸೌಲಭ್ಯವಿರಲಿಲ್ಲ. 21ನೇ ಶತಮಾನ ಸ್ಮಾರ್ಟ್‍ಯುಗವಾಗಿದೆ. ಬ್ಲಾಕ್ ಬೋರ್ಡ್‍ಗಳೂ ಸಹ ಸ್ಮಾರ್ಟ್ ಬೋರ್ಡ್‍ಗ ಳಾಗಿವೆ. ವಿದ್ಯಾರ್ಥಿಗಳು ಈ ಎಲ್ಲಾ ಸವಲತ್ತು ಗಳನ್ನು  ಸದ್ಬಳಕೆ ಮಾಡಿಕೊಂಡು ಉತ್ತಮ ಸಾಧನೆಗೈಯುವಂತೆ ಕರೆ ನೀಡಿದರು.

ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ನೆರವಾಗುವಂತೆ ಹಲವಾರು ಶೈಕ್ಷಣಿಕ ಯೋ ಜನೆಗಳನ್ನು ಮೋದಿ ಅವರು ರೂಪಿಸುತ್ತಿ ದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ವಿದ್ಯಾರ್ಥಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸು ತ್ತಿದ್ದು, ಉಪಯುಕ್ತ ಕಾರ್ಯಕ್ರಮಗಳ ಸದುಪ ಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ಟಿ.ಗುರುಸಿದ್ಧನಗೌಡ್ರು,  ಕಾರ್ಯಕ್ರಮದ ಸಂಚಾಲಕರಾದ ಡಾ. ರವಿಕುಮಾರ್ (ಆರೈಕೆ ಆಸ್ಪತ್ರೆ), ಡಾ. ಹಾಲಸ್ವಾಮಿ ಕಂಬಾಳಿಮಠ, ಶಿಕ್ಷಕರ ಪ್ರಕೋಷ್ಠದ ರಾಜ್ಯ ಸಂಚಾಲಕ ಕೆ.ಎಂ. ಸುರೇಶ್, ರಾಜ್ಯ ಸಮಿತಿ ಸದಸ್ಯ ತ್ಯಾವಣಿಗಿ ವೀರಭದ್ರಸ್ವಾಮಿ, ವಕೀಲರ ಪ್ರಕೋಷ್ಠದ ರಾಘವೇಂದ್ರ, ದೃಶ್ಯಕಲಾ ವಿಶ್ವವಿದ್ಯಾಲಯದ ಡಾ. ಸತೀಶ್‍ಕುಮಾರ್, ಡಾ. ನಂದಿನಿ ಮತ್ತಿತರರಿದ್ದರು.

ಡಾ. ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಹಾಲಸ್ವಾಮಿ ಸ್ವಾಗತಿಸಿದರು. ಸಿ.ಕೆ. ರಂಗಪ್ಪ ವಂದಿಸಿದರು.