ರಾಜ್ಯದಲ್ಲಿ ಶೇ.62 ಜನರು ನೇರವಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ

ರಾಜ್ಯದಲ್ಲಿ ಶೇ.62 ಜನರು ನೇರವಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ

ದಾವಣಗೆರೆ, ಜ.22-   ಕರ್ನಾಟಕದಲ್ಲಿ ಶೇಕಡ 62 ಜನರು  ಕೃಷಿಯನ್ನು  ನೇರವಾಗಿ ಜೀವ ನೋಪಾಯಕ್ಕೆ ಅವಲಂಬಿಸಿದ್ದು, ಭಾರತದಲ್ಲಿ ಶೇಕಡ 50ರಷ್ಟು ಜನ ಕೃಷಿಯನ್ನೇ ನಂಬಿದ್ದಾರೆ ಎಂದು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಕರ್ನಾಟಕ ಯೋಜನಾ ಆಯೋ ಗದ ಸದಸ್ಯರೂ ಆದ ಡಾ.ಕೆ.ಪಿ.ಬಸವರಾಜಪ್ಪ  ಹೇಳಿದರು.   

ಇಲ್ಲಿನ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂ ದ್ರದಲ್ಲಿ  20ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ರೈತರ ಆದಾಯ ದ್ವಿಗುಣಗೊಳಿಸಲು ಪ್ರಮುಖ ಮೂರು ಅಂಶ ಗಳೆಂದರೆ ಸಮಗ್ರ ಕೃಷಿ, ಖರ್ಚು ಕಡಿಮೆ ಮಾಡುವುದು ಹಾಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡುವುದು.  ಎಲ್ಲಾ ಅಭಿವೃದ್ಧಿ ಇಲಾಖೆಗಳು ಹಾಗೂ ವಿಜ್ಞಾನ ಕೇಂದ್ರಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಕರೆ ನೀಡಿದರು. 

ಬೆಂಗಳೂರು ಐಸಿಎಆರ್-ಅಟಾರಿ ವಿಜ್ಞಾನಿ ಡಾ.ಡಿ ಕೋಲೆಕರ್ ಮಾತನಾಡಿ, ಜಿಲ್ಲೆಯ ಕೃಷಿ ಆರ್ಥಿಕತೆಗೆ ಕೆವಿಕೆಯ ಕೊಡುಗೆ ಮಹತ್ವದ್ದಾಗಿದೆ,  ತಂತ್ರ ಜ್ಞಾನಗಳ ಅಳವಡಿಕೆಯಿಂದ ರೈತರು ಸಾಕಾರಗೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. 

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ ಸಹ ವಿಸ್ತರಣಾ  ನಿರ್ದೇಶಕ  ಡಾ. ಎಸ್.ವಿ. ಪಾಟೀಲ್ ಮಾತನಾಡಿ ಕೃಷಿ ವಿಜ್ಞಾನ ಕೇಂದ್ರವು ಚಿಕ್ಕ ಕೃಷಿ ಸಂಶೋಧನಾ ಕೇಂದ್ರವಾಗಿದ್ದು, ಮಣ್ಣು ಮತ್ತು ನೀರು ಸಂರಕ್ಷಣೆಗೆ ಆದ್ಯತೆ ಕೊಡಬೇಕೆಂದು ತಿಳಿಸಿದರು. ಜಂಟಿ ಕೃಷಿ ನಿರ್ದೇಶಕ  ಶ್ರೀನಿವಾಸ ಚಿಂತಾಲ,  ಭತ್ತದ ಬೆಳೆಯ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ರೈತರಿಗೆ ಲಾಭದಾಯಕ ವಾಗುತ್ತಿಲ್ಲವೆಂದು ಕಳವಳ ವ್ಯಕ್ತಪಡಿಸಿದರು. ಸಭೆಯಲ್ಲಿ ಕೆವಿಕೆಯ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ  ದೇವರಾಜ ಟಿ. ಎನ್.  ಅವರು   ಕಳೆದ ಒಂದು ವರ್ಷದ ಪ್ರಗತಿಯನ್ನು ಮಂಡಿಸಿದರು. 

ಸಭೆಯಲ್ಲಿ  ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ  ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ  ಡಾ. ಎಚ್. ಕೆ. ವೀರಣ್ಣ, ಹಾಗೂ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು, ಪ್ರಗತಿಪರ ರೈತರು  ಹಾಗೂ ಕೆವಿಕೆಯ ವಿಜ್ಞಾನಿಗಳು ಭಾಗವಹಿಸಿದ್ದರು.