ಮಾನವೀಯ ಮೌಲ್ಯಗಳ ಗಟ್ಟಿಗಾಗಿ ಜಿಲ್ಲೆಯಾದ್ಯಂತ ಅಭಿಯಾನಕ್ಕೆ ತೀರ್ಮಾನ

ಮಾನವೀಯ ಮೌಲ್ಯಗಳ ಗಟ್ಟಿಗಾಗಿ ಜಿಲ್ಲೆಯಾದ್ಯಂತ ಅಭಿಯಾನಕ್ಕೆ ತೀರ್ಮಾನ

ದಾವಣಗೆರೆ, ಜ. 23 – ಸಮಾನ ಮನಸ್ಕರು, ಸೌಹಾರ್ದ ಪ್ರಿಯರು, ಸ್ನೇಹ ಪರ ಜೀವಿಗಳು ಸೇರಿ ಸಭೆ ಯನ್ನು ನಡೆಸಿ ಜಿಲ್ಲೆಯಾದ್ಯಂತ ಪ್ರೀತಿ ಬಾಂಧವ್ಯವನ್ನು ಬೆಸೆಯುವ ಸೌಹಾರ್ದ ವಾತಾವರಣವನ್ನು ಸೃಷ್ಟಿ ಮಾಡುವ ಕಾರ್ಯಕ್ರಮಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.

ನಗರದ ಪಿ. ಬಿ. ರಸ್ತೆಯಲ್ಲಿನ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ನಮ್ಮ ನಡೆ ಸಾಮರಸ್ಯ ಕಡೆ ಕುರಿತು ಹಮ್ಮಿಕೊಳ್ಳಲಾಗಿದ್ದ ಸಹೃದಯ ಸಮಾನ ಮನಸ್ಕರ ಸಭೆಯಲ್ಲಿ ಜ.26 ಗಣರಾಜ್ಯೋತ್ಸವ ದಿನವನ್ನು ಸೌಹಾರ್ದ ದಿನವನ್ನಾಗಿ ಗಾಂಧಿನಗರದಲ್ಲಿ  ಆಚರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. 26ನೇ ತಾರೀಕಿನಿಂದ ನಿರಂತರವಾಗಿ ಹತ್ತು ದಿನಗಳ ಕಾಲ ಬೇರೆ ಬೇರೆ ಗ್ರಾಮೀಣ ಪ್ರದೇಶಗಳಲ್ಲಿ ಸಹ- ಭೋಜನಕೂಟ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಮಾಡಲು ನಿರ್ಧರಿಸಲಾಯಿತು.

ಇತ್ತೀಚಿನ ದಿನಗಳಲ್ಲಿ ಪ್ರೀತಿ, ಬಾಂಧವ್ಯಗಳು ನಶಿಸಿ ಹೋಗುತ್ತಿವೆ . ಜಾತಿ ಜಾತಿಗಳ ಮಧ್ಯೆ ವೈಷಮ್ಯವನ್ನು  ಹುಟ್ಟಿ ಹಾಕಲಾಗುತ್ತಿದೆ. ಯುವ ಜನತೆ ತಮ್ಮ ಭವಿಷ್ಯ ದ ಬಗ್ಗೆ ಚಿಂತನೆ ಮಾಡುವುದು ಬಿಟ್ಟು ದಿಕ್ಕು ತೋಚದಂತಾಗಿದೆ. ನಮಗೆ ಮಾರ್ಗದ ರ್ಶಕರಾಗಬೇಕಾಗಿದ್ದ ಪ್ರಜಾಪ್ರತಿನಿ ಧಿಗಳು ತಮ್ಮ ನಾಲಿಗೆಯನ್ನು ಹರಿಬಿಟ್ಟು ಅಶ್ಲೀಲ ಪದಗಳಿಂದ ಇಡೀ ಸಮಾಜದ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಜಾತಿ, ಜಾತಿಗಳನ್ನು ಎತ್ತಿ ಕಟ್ಟಿ ದ್ವೇಷವನ್ನು ಹುಟ್ಟು ಹಾಕುತ್ತಿದ್ದಾರೆ ಇಂಥ ಪರಿಸ್ಥಿತಿಯಲ್ಲಿ ಜನಸಾಮಾನ್ಯರಲ್ಲಿ ಭ್ರಾತೃತ್ವ, ಏಕತೆ ಮತ್ತು ಅಖಂಡತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡಬೇಕಾಗಿದೆ.ಹಾಗಾಗಿ ನಮ್ಮ ನಡೆ ಸಾಮ ರಸ್ಯದ ಕಡೆ ತಂಡವು ನಿರಂತರವಾಗಿ ಕಾರ್ಯನಿರ್ವಹಿ ಸುತ್ತಾ ಬಂದಿದೆ. 

ಅದರ ಮುಂದಿನ ಭಾಗವಾಗಿ ಈ ಬಾರಿ ಪ್ರತಿಯೊಂದು ಹಳ್ಳಿಗಳಲ್ಲಿ ಭ್ರಾತೃತ್ವವನ್ನು ಬೆಸೆಯುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು ಎಂದು ನಮ್ಮ ನಡೆ ಸಾಮರಸ್ಯದ ಕಡೆ ಸಂಚಾಲಕ, ವಕೀಲ ಅನೀಸ್ ಪಾಷಾ ತಿಳಿಸಿದ್ದಾರೆ.

ಸಭೆಯಲ್ಲಿ ಬಲ್ಲೂರು ರವಿಕುಮಾರ್ , ಹೆಚ್ ಮಲ್ಲೇಶ, ಕತ್ತಲಗೆರೆ ಡಿ. ತಿಪ್ಪಣ್ಣ, ಹೆಚ್ ಸಿ ಗುಡ್ಡಪ್ಪ, ವಕೀಲರಾದ ಕೆ.ಸಿ ಕೊಟ್ರೇಶ್, ಬೈರೇಶ್ , ರುದ್ರೇಶ್, ಸಿರಾಜುದ್ದೀನ್, ಸತೀಶ್ ಅರವಿಂದ್‌, ಓಬಳೇಶ್, ಮಲ್ಲಪ್ಪ ಮರುಡಪ್ಪ, ವೆಂಕಟೇಶ್, ಮುಸ್ತಫಾ ಸೇರಿದಂತೆ ಇತರರು ಇದ್ದರು.