ಎಸ್‌ಬಿಐ ಆಂಗ್ಲ ನಾಮಫಲಕ ತೆರವು

ಎಸ್‌ಬಿಐ ಆಂಗ್ಲ ನಾಮಫಲಕ ತೆರವು

ದಾವಣಗೆರೆ, ಜ. 24- ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ವತಿಯಿಂದ ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿನ (ರಾಂ ಅಂಡ್ ಕೋ ಸರ್ಕಲ್) ಎಸ್‌ಬಿಐ ಬ್ಯಾಂಕಿನ ಆಂಗ್ಲ ನಾಮಫಲಕ ತೆರವುಗೊಳಿಸುವಲ್ಲಿ ಯಶಸ್ವಿಯಾಯಿತು.

ಬ್ಯಾಂಕಿನಲ್ಲಿ ಹಿಂದಿ, ಇಂಗ್ಲಿಷ್ ಚಲನ್‌ಗಳು, ಬ್ಯಾಂಕಿನ ಅಗತ್ಯ ಮಾಹಿತಿ ಕನ್ನಡದಲ್ಲಿ ಇಲ್ಲದಿರುವುದನ್ನು ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ತೀವ್ರವಾಗಿ ಖಂಡಿಸಿದರು.

ಬ್ಯಾಂಕಿನ ಜಾಹಿರಾತು ಫಲಕಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರುವ ಕಾರಣ ಅವುಗಳನ್ನು ಕಿತ್ತೆಸೆಯಲಾಯಿತು. ಈ ಬಗ್ಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕ ದೊಡ್ಡಮನಿ ಅವರಿಗೆ ದೂರವಾಣಿ ಮೂಲಕ ದೂರು ನೀಡಿದರು. 

ಎಲ್ಲಾ ಬ್ಯಾಂಕ್‌ಗಳಲ್ಲೂ ಪತ್ರ ವ್ಯವಹಾರವನ್ನು ಇಂಗ್ಲಿಷ್ ಭಾಷೆಯಲ್ಲಿ ಮಾಡುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳದಿದ್ದರೆ  ಶೀಘ್ರದಲ್ಲೇ ಪ್ರತಿಭಟನೆ ಹಮ್ಮಿಕೊಳ್ಳು ವುದಾಗಿ ರಾಮೇಗೌಡ ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಘಟಕದ ಉಪಾಧ್ಯಕ್ಷ ಜಿ.ಎಸ್. ಸಂತೋಷ್ ಮತ್ತಿತರರು ಬೆಂಬಲಿಸಿ, ಉಪಸ್ಥಿತರಿದ್ದರು.