ನಿಟುವಳ್ಳಿಯ ಜ್ಞಾನದೀಪ ಪಬ್ಲಿಕ್ ಶಾಲೆಯಲ್ಲಿ ಶತಾಯುಷಿ, ನಡೆದಾಡುವ ದೇವರು ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯವರ ಜನ್ಮ ದಿನ ಆಚರಿಸಲಾಯಿತು.
ಚಿತ್ರದಲ್ಲಿ ಸುದ್ದಿ

ಧರಾಮ ಕಾಲೇಜಿನಲ್ಲಿ ಮಹಿಳಾ ದಿನ
ನಗರದ ಧ.ರಾ.ಮ. ವಿಜ್ಞಾನ ಕಾಲೇಜಿನಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.

ಯುವ ಕಾಂಗ್ರೆಸ್ನಿಂದ ಮೊರಾರ್ಜಿ ಶಾಲೆ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ
ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರುಗಳ ಬಲಿದಾನ ದಿನದಂದು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ನಗರದ ನಿಜಲಿಂಗಪ್ಪ ಬಡಾವಣೆಯ ಮೊರಾರ್ಜಿ ದೇಸಾಯಿ ಶಾಲೆಯ 300 ಬಾಲಕಿಯರಿಗೆ ಪಠ್ಯ ಪುಸ್ತಕ ಮತ್ತು ಪೆನ್ಗಳನ್ನು ಹಂಚಲಾಯಿತು.

ಎಕ್ಕೆಗೊಂದಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ
ಮಲೇಬೆನ್ನೂರು : ದಾನಿಗಳು ನೀಡಿದ ವಸ್ತುಗಳನ್ನು ಪಡೆದು ಮಕ್ಕಳಿಗೆ ವಿತರಿಸುವಲ್ಲಿ ಎಕ್ಕೆಗೊಂದಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ತಾತ್ಸಾರ ಮಾಡಿದ್ದಾರೆಂದು ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯ ಕಾರ್ಯದರ್ಶಿ ಎಕ್ಕೇಗೊಂದಿ ರುದ್ರಗೌಡ ಆರೋಪಿಸಿದರು.

ದಾವಣಗೆರೆ ರಕ್ತ ನಿಧಿ ಕೇಂದ್ರಕ್ಕೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಭೇಟಿ
ನಗರದಲ್ಲಿ ನೂತನವಾಗಿ ಆರಂಭಿಸಿರುವ ರಕ್ತ ನಿಧಿ ಕೇಂದ್ರಕ್ಕೆ ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಇಂದು ಆಗಮಿಸಿ, ರಕ್ತ ನಿಧಿ ಕೇಂದ್ರದ ಘಟಕವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಸ್ವಾಮೀಜಿ ಅವರಿಗೆ ಸಂಸ್ಥೆಯ ಪದಾಧಿಕಾರಿಗಳಿಂದ ನಮನ ಸಲ್ಲಿಸಲಾಯಿತು.

ನವೀನ್ ಕುಟುಂಬದವರಿಗೆ ಸಾಂತ್ವನ ಹೇಳಿದ ಸುತ್ತೂರು ಶ್ರೀಗಳು
ಇತ್ತೀಚಿಗೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಸಂದರ್ಭದಲ್ಲಿ ಸಾವಿಗೀಡಾಗಿದ್ದ ರಾಣೇಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮಕ್ಕೆ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಇಂದು ಭೇಟಿ ನೀಡಿ, ನವೀನ್ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಐಎಂಎ ಪದಾಧಿಕಾರಿಗಳಿಂದ ಎಸ್ಸೆಸ್-ಎಸ್ಸೆಸ್ಸೆಂ ಭೇಟಿ
ಐಎಂಎ ವತಿಯಿಂದ ವೈದ್ಯರಿಗಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಂಡ್ಯ ಜಿಲ್ಲೆಯ ವೈದ್ಯರ ತಂಡ ಬಹುಮಾನ ಗಳಿಸಿದ್ದು, ದಾವಣಗೆರೆ ವೈದ್ಯರ ತಂಡ ಎರಡನೇ ಸ್ಥಾನ ಪಡೆಯಿತು.

ಜಿಎಂಐಟಿ : ಎಂಬಿಎ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ
ನಗರದ ಜಿಎಂ ಐಟಿ ಮಹಾವಿದ್ಯಾ ಲಯದಲ್ಲಿ ಎಂ.ಬಿ.ಎ. ಪ್ರಥಮ ವರ್ಷದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ವಿತರಣಾ ಸಮಾರಂಭ ನಡೆಸಲಾಯಿತು.

ಪವಿತ್ರಾ ರಾಯ್ಕರ್ಗೆ ಚಿನ್ನದ ಪದಕ
ಇತ್ತೀಚಿಗೆ ಶಿವಗಂಗೋತ್ರಿಯಲ್ಲಿ ಜರುಗಿದ ದಾವಣಗೆರೆ ವಿಶ್ವವಿದ್ಯಾನಿಲಯದ ಒಂಭತ್ತನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ನಗರದ ಶ್ರೀಮತಿ ಗೀತಾ ಪ್ರಭಾಕರ ರಾಯ್ಕರ್ರವರ ಸುಪುತ್ರಿ ಕುಮಾರಿ ಪವಿತ್ರಾ ಪಿ.ರಾಯ್ಕರ್ರವರಿಗೆೆ `ಮಾಸ್ಟರ್ ಆಫ್ ಸೈನ್ಸ್' (ಭೌತಶಾಸ್ತ್ರ) ಪದವಿ ವಿತರಿಸಲಾಯಿತು.

ವಾಲ್ಮೀಕಿ ಸಮಾಜದ ಮುಖಂಡರಿಂದ ರೋಗಿಗಳಿಗೆ ಹಾಲು – ಹಣ್ಣು ವಿತರಣೆ
ಹರಿಹರ : ರಾಜನಹಳ್ಳಿ ಗುರುಪೀಠದ ಶ್ರೀ ಪುಣ್ಯಾನಂದ ಸ್ವಾಮೀಜಿಗಳ ಪುಣ್ಯಸ್ಮರಣೆ ನಿಮಿತ್ಯ ವಾಲ್ಮೀಕಿ ಸಮಾಜದ ಮುಖಂಡರು ನಗರದ ಸಾರ್ವ ಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಹಣ್ಣು ವಿತರಣೆ ಮಾಡಿದರು.

ನಂದಿಗಾವಿ : ಉಚಿತ ನೇತ್ರ ಶಿಬಿರ
ಮಲೇಬೆನ್ನೂರು : ಕಾಂಗ್ರೆಸ್ ಮುಖಂಡ ಎನ್.ಹೆಚ್.ಶ್ರೀನಿವಾಸ್ ಅವರ ಸಹೋದರ ಎನ್.ಹೆಚ್ ಸತ್ಯನಾರಾಯಣ ಅವರ ಹುಟ್ಟು ಹಬ್ಬದ ಪ್ರಯುಕ್ತ ನಂದಿಗಾವಿಯಲ್ಲಿ ಉಚಿತ ನೇತ್ರ ಹಾಗೂ ಬಿ.ಪಿ ಮತ್ತು ಸಕ್ಕರೆ ಕಾಯಿಲೆ ತಪಾಸಣೆ ಶಿಬಿರವನ್ನು ನಡೆಸಲಾಯಿತು.

ಜಗಳಿಯಲ್ಲಿ ಪುಣ್ಯಾನಂದ ಶ್ರೀಗಳ ಪುಣ್ಯಾರಾಧನೆ
ಮಲೇಬೆನ್ನೂರು : ಜಿಗಳಿ ಗ್ರಾಮದ ವಾಲ್ಮೀಕಿ ವೃತ್ತದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಥಮ ಪೀಠಾಧಿಪತಿಗಳಾದ ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿ ಅವರ 15ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮವನ್ನು ಆಚರಿಸಲಾಯಿತು.