ಜಿಗಳಿ ಗ್ರಾ.ಪಂ ಅಧ್ಯಕ್ಷರಾಗಿ ವಿನೋದ ಹಾಲೇಶ್‌ಕುಮಾರ್ ಉಪಾಧ್ಯಕ್ಷರಾಗಿ ಜಿ. ಬೇವಿನ ಹಳ್ಳಿಯ ಕೆ.ಜಿ. ಮಹಾಂತೇಶಪ್ಪ

ಜಿಗಳಿ ಗ್ರಾ.ಪಂ ಅಧ್ಯಕ್ಷರಾಗಿ ವಿನೋದ ಹಾಲೇಶ್‌ಕುಮಾರ್ ಉಪಾಧ್ಯಕ್ಷರಾಗಿ ಜಿ. ಬೇವಿನ ಹಳ್ಳಿಯ ಕೆ.ಜಿ. ಮಹಾಂತೇಶಪ್ಪ

ಮಲೇಬೆನ್ನೂರು, ಜ.24- ಜಿಗಳಿ ಗ್ರಾ.ಪಂ ಅಧ್ಯಕ್ಷರಾಗಿ ಶ್ರೀಮತಿ ವಿನೋದ ಜಿ.ಆರ್ ಹಾಲೇಶ್‌ ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಜಿ. ಬೇವಿನಹಳ್ಳಿಯ ಕೆ.ಜಿ. ಮಹಾಂತೇಶಪ್ಪ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶ್ರೀಮತಿ ಕವಿತಾ ಮಾಕನೂರು ಶಿವು ಮತ್ತು ಕೆ.ಜಿ. ಬಸವರಾಜ್ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ತೆರವಾಗಿದ್ದವು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ರೇಖಾ ಅವರು ಚುನಾವಣಾಧಿಕಾರಿಯಾಗಿದ್ದರು. ತೋಟಗಾರಿಕೆ ಇಲಾಖೆಯ ಪ್ರಕಾಶ್, ಪಿಡಿಓ ಉಮೇಶ್ ಸಹಕರಿಸಿದರು.