ಎಪಿಎಂಸಿಯಲ್ಲಿ ಎಸ್ಸೆಸ್ ಕೇರ್‌ನಿಂದ ರೈತರಿಗೆ ಉಚಿತ ಕಣ್ಣು ಪರೀಕ್ಷೆ

ಎಪಿಎಂಸಿಯಲ್ಲಿ ಎಸ್ಸೆಸ್ ಕೇರ್‌ನಿಂದ ರೈತರಿಗೆ ಉಚಿತ ಕಣ್ಣು ಪರೀಕ್ಷೆ

ದಾವಣಗೆರೆ, ಜ. 23 – ನಗರದ ಕೃಷಿ ಉತ್ಪನ್ನ ಮಾರುಕಟ್ಟೆ  ಸಮಿತಿಯಲ್ಲಿ  ಸೂಪರ್ ಸ್ಟಾರ್ ರೈತ- 2023 ವಿಜಯ ಕರ್ನಾಟಕ ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮದಲ್ಲಿ ರೈತರಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಎಸ್ ಎಸ್ ಐ ಕೇರ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. 

ಎಪಿಎಂಸಿ ಮಾಜಿ ಸದಸ್ಯ ವಡ್ಡಿನಳ್ಳಿ ಸಿದ್ದೇಶ್ ಕಣ್ಣು ಪರೀಕ್ಷೆ ಮಾಡಿಸಿಕೊಳ್ಳುವುದರ ಮೂಲಕ ಚಾಲನೆ ನೀಡಿದರು. ಹಿರಿಯ ಪತ್ರಕರ್ತ ಸದಾನಂದ್ ಹೆಗಡೆ, ಎಪಿಎಂಸಿ ಕಾರ್ಯದರ್ಶಿ ಕೆ.ಸಿ. ದೊರೆಸ್ವಾಮಿ, ಸಹಾಯಕ ನಿರ್ದೇಶಕ ಜೆ. ಪ್ರಭು, ಸಹಾಯಕ ಕಾರ್ಯದರ್ಶಿ ಶ್ರೀಹರಿ, ತಾಲ್ಲೂಕು ಕಸಾಪ ನಿರ್ದೇಶಕ  ಎಂ.ಷಡಕ್ಷರಪ್ಪ ಬೇತೂರು ಹಾಗೂ ಇತರರು ಉಪಸ್ಥಿತರಿದ್ದರು.