ಅತ್ಯಂತ ಅಪಾಯಕಾರಿ ಗುಂಡಿ !

ಮಾನ್ಯರೇ,

ನಗರದ ಮಧ್ಯ ಭಾಗದಲ್ಲಿರುವ ಹಳೇ ಅಂಡರ್ ಬ್ರಿಡ್ಜ್‌ನಲ್ಲಿ ಸಾವಿನ ಗುಂಡಿಯೊಂದು ಬಹುಶಃ ಬಲಿಗಾಗಿ ಕಾಯುತ್ತಿದೆ !.

ಪ್ರತಿದಿನ ಸಹಸ್ರಾರು ದ್ವಿಚಕ್ರ ವಾಹನ ಸವಾರರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಇಂತಹ ಜನನಿಬಿಡ ಪ್ರದೇಶದ ರಸ್ತೆಯಲ್ಲಿ ಆಗಿರುವ ಇಂತಹ ಅಪಾಯಕಾರಿ ಗುಂಡಿ, ಸಂಬಂಧ ಪಟ್ಟವರಿಗೆ ಏಕೆ ಕಂಡಿಲ್ಲವೆಂಬುದೇ ಆಶ್ಚರ್ಯ ಮತ್ತು ಅವರ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುವಂತಹ ಆಘಾತಕಾರಿ ವಿಷಯ. 

ಯಾರದ್ದಾದರೂ ಪ್ರಾಣಕ್ಕೆ ಸಂಚಕಾರ ಬರುವ ಮೊದಲೇ ಈ ಗುಂಡಿಯನ್ನು ಕೇವಲ ಮಣ್ಣು ತುಂಬದೇ ವ್ಯವಸ್ಥಿತವಾಗಿ ಉತ್ತಮ ಪ್ರಮಾಣದಲ್ಲಿ ಸಿಮೆಂಟ್ ಮಿಕ್ಸಿಂಗ್ ಇರುವ ಕಾಂಕ್ರೀಟ್ ತುಂಬಿಸಬೇಕಾಗಿದೆ.


– ಜಯಚಂದ್, ದಾವಣಗೆರೆ.