ಆಯ್ಕೆ-ನೇಮಕ

Home ಆಯ್ಕೆ-ನೇಮಕ
ಹರಪನಹಳ್ಳಿ ತಾ. ಭೋವಿ ಸಮಾಜದ ಅಧ್ಯಕ್ಷರಾಗಿ ಎಂ.ಬಿ. ಅಂಜಿನಪ್ಪ ಆಯ್ಕೆ

ಹರಪನಹಳ್ಳಿ ತಾ. ಭೋವಿ ಸಮಾಜದ ಅಧ್ಯಕ್ಷರಾಗಿ ಎಂ.ಬಿ. ಅಂಜಿನಪ್ಪ ಆಯ್ಕೆ

ಹರಪನಹಳ್ಳಿ ತಾಲ್ಲೂಕು ಭೋವಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು,  ಅಧ್ಯಕ್ಷರಾಗಿ ಕಂಚಿಕೇರಿ ಎಂ.ಬಿ. ಅಂಜಿನಪ್ಪ ಆಯ್ಕೆಯಾಗಿದ್ದಾರೆ.

ದಾವಣಗೆರೆ ಜಿ.ಪಂ.ಗೆ ಆಡಳಿತಾಧಿಕಾರಿ ನೇಮಕ

ಮೇ 2ರಂದು ಅಧಿಕಾರವಧಿ ಮುಕ್ತಾಯ ಗೊಳ್ಳಲಿರುವ ದಾವಣಗೆರೆ ಜಿಲ್ಲಾ ಪಂಚಾಯ್ತಿಗೆ ಆಡಳಿತಾಧಿಕಾರಿ ಯನ್ನಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅವರನ್ನು ಸರ್ಕಾರ ನೇಮಕ ಮಾಡಿದೆ.

ದಲಿತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಣ್ಣಾಳ ಅಂಜಿನಪ್ಪ

ಕರ್ನಾಟಕ ದಲಿತ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಶಾಮನೂರಿನ ಕಣ್ಣಾಳ ಅಂಜಿನಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಡಿ. ಶಿವಕುಮಾರ್ ತಿಳಿಸಿದ್ದಾರೆ.

ಹರಿಹರ ತಾ. ಜೆಡಿಎಸ್ ಅಧ್ಯಕ್ಷರಾಗಿ ಹಳ್ಳಿಹಾಳ್ ಪರಮೇಶ್ವರಪ್ಪ

ಹರಿಹರ ತಾ. ಜೆಡಿಎಸ್ ಅಧ್ಯಕ್ಷರಾಗಿ ಹಳ್ಳಿಹಾಳ್ ಪರಮೇಶ್ವರಪ್ಪ

ಮಲೇಬೆನ್ನೂರು : ಹಳ್ಳಿಹಾಳ್ ಗ್ರಾಮದ ಜೆಡಿಎಸ್ ಮುಖಂಡ ಹಾಗೂ ಶ್ರೀನಂದಿ ಸೌಹಾರ್ದ ಸಹಕಾರಿ ನಿರ್ದೇಶಕರೂ ಆದ ಹೆಚ್.ಟಿ. ಪರಮೇಶ್ವರಪ್ಪ ಅವರನ್ನು ಹರಿಹರ ತಾಲ್ಲೂಕು ಗ್ರಾಮಾಂತರ ಜೆಡಿಎಸ್ ಘಟಕದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಆರ್ಯವೈಶ್ಯ ಯುವಜನ ಮಹಾಸಭಾ ಪ್ರ.ಕಾರ್ಯದರ್ಶಿಯಾಗಿ ಎಸ್. ಸುನಿಲ್

ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ (ರಿ.), ಬೆಂಗಳೂರು ಇದರ 2021-2023ನೇ ಸಾಲಿನ ಅವಧಿಗೆ ದಾವಣಗೆರೆ ಎಸ್.ಕೆ.ಪಿ.ರಸ್ತೆ, ವಾಸವಿ ಯುವಜನ ಸಂಘದ ಸುನಿಲ್ ಎಸ್. ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ದರ್ಶನ್ ಎಸ್.ಕಾಸಲ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎಸ್.ಕೆ. ವೀರಣ್ಣ, ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಉಪಾಧ್ಯಕ್ಷ

ದಾವಣಗೆರೆ - ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ಉಪಾಧ್ಯಕ್ಷರಾಗಿ ಬ್ಯಾಂಕಿನ ಹಿರಿಯ ನಿರ್ದೇಶಕರ ಲ್ಲೊಬ್ಬರಾದ ಎಸ್.ಕೆ. ವೀರಣ್ಣ ಅವರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.

ಆಶ್ರಯ ಹಿರಿಯ ವನಿತೆಯರ ಆನಂದಧಾಮಕ್ಕೆ ಆಯ್ಕೆ

ನಗರದ ವನಿತಾ ಸಮಾಜ ನಡೆಸುತ್ತಿರುವ `ಆಶ್ರಯ' ಹಿರಿಯ ವನಿತೆಯರ ಆನಂದಧಾಮಕ್ಕೆ ನೂತನ ಕಾರ್ಯಕಾರಿಣಿ ಸಮಿತಿ ಪದಾಧಿಕಾರಿಗಳನ್ನು ಗೌರವಾಧ್ಯಕ್ಷರಾದ ಡಾ. ಸಿ. ನಾಗಮ್ಮ ಕೇಶವಮೂರ್ತಿ ಅವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.

ಕೃಷಿ ವಿವಿ ನಿರ್ದೇಶಕರಾಗಿ ನಾಗರಾಜಪ್ಪ

ಮಲೇಬೆನ್ನೂರು : ಶಿವಮೊಗ್ಗದಲ್ಲಿರುವ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾನಿಲಯದ ನಿರ್ದೇಶಕರನ್ನಾಗಿ ಕತ್ತಲಗೆರೆಯ ಕೆ. ನಾಗರಾಜಪ್ಪ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಮಲೇಬೆನ್ನೂರು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಹಾಲಿಂಗಪ್ಪ

ಮಲೇಬೆನ್ನೂರು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಹಾಲಿಂಗಪ್ಪ

ಮಲೇಬೆನ್ನೂರು : ಇಲ್ಲಿನ ಪುರಸಭೆಯ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ 9 ನೇ ವಾರ್ಡ್‌ನ ಸದಸ್ಯ ಮಹಾಲಿಂಗಪ್ಪ ಇಂದು ಸಾಮಾನ್ಯ ಸಭೆಯ ನಂತರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕುಡೋ ಚಾಂಪಿಯನ್‌ಶಿಪ್‍ನಲ್ಲಿ ಬಂಗಾರದ ಪದಕ

ಶಿವಮೊಗ್ಗ ಜಿಲ್ಲೆಯ ಪ್ರಿಯದರ್ಶಿನಿ ಹೈಯರ್‍ ಪ್ರೈಮರಿ ಸ್ಕೂಲ್‍ನ ಕ್ರೀಡಾ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕುಡೋ ಚಾಂಪಿಯನ್‍ಶಿಪ್‍ನಲ್ಲಿ ನಗರದ ಮಿಲ್ಲತ್‍ ಹೈಸ್ಕೂಲ್‍ನ ವಿದ್ಯಾರ್ಥಿ ಮಹ್ಮದ್‍ ರಹಮತ್‍ವುಲ್ಲಾ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಜಿಲ್ಲಾ ಕ.ದ.ಸಂ.ಸ. ಅಧ್ಯಕ್ಷರಾಗಿ ಹೆಚ್. ರಾಮಣ್ಣ

ಕರ್ನಾಟಕ ದಲಿತ ಸಂಘರ್ಷ ಸಮಿತಿ  ಅಂಬೇಡ್ಕರ್ ಧ್ವನಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿರುವುದಾಗಿ ರಾಜ್ಯಾಧ್ಯಕ್ಷ ಸುರೇಶ್ ಕೆ.ರಾಯಪ್ಪಗೋಳ್ ತಿಳಿಸಿದ್ದಾರೆ.

ಹೊನ್ನಾಳಿ : ಕಾಂಗ್ರೆಸ್ ಗೆ ರಂಜಿತ್

ಹೊನ್ನಾಳಿ : ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಎಸ್. ರಂಜಿತ್ ಚುನಾಯಿತರಾಗಿದ್ದಾರೆ. ರಂಜಿತ್ ಈ ಹಿಂದೆ ತಾಲ್ಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದರು.

ಡಾ. ಬಸವರಾಜ ಕೇಲಗಾರ ವಾಯವ್ಯ ಸಾರಿಗೆ ಉಪಾಧ್ಯಕ್ಷ

ರಾಣೇಬೆನ್ನೂರು : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿರ್ದೇಶಕ ಮಂಡಳಿ ಉಪಾಧ್ಯಕ್ಷರನ್ನಾಗಿ ರಾಣೇಬೆನ್ನೂರಿನ ಬಿಜೆಪಿ ಮುಖಂಡ ಡಾ. ಬಸವರಾಜ ಕೇಲಗಾರ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.

ಜಿಲ್ಲಾ ಬಿಜೆಪಿ ಎಲ್ಲಾ ಮಂಡಲದ ಕಾನೂನು ಪ್ರಕೋಷ್ಟಕ್ಕೆ ನೇಮಕ

ಭಾರತೀಯ ಜನತಾ ಪಾರ್ಟಿಯ ಜಿಲ್ಲೆಯ ಎಲ್ಲಾ ಮಂಡಲದ  ಕಾನೂನು ಪ್ರಕೋಷ್ಟದ ಪದಾಧಿಕಾರಿ ಗಳನ್ನು ಜಿಲ್ಲಾ ಅಧ್ಯಕ್ಷ  ಎಸ್‌.ಎಂ. ವೀರೇಶ್‌ ಹನಗವಾಡಿ ಅವರ ಸೂಚನೆ ಮೇರೆಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್‌ ಜಗದೀಶ್‌ ಮಂಡಲ ಕಾನೂನು ಪ್ರಕೋಷ್ಟದ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ

ಜಿ.ಟಿ. ದೇವೇಗೌಡ ಸಹಕಾರ ಮಹಾಮಂಡಳ ಅಧ್ಯಕ್ಷ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾಗಿ ಮಾಜಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಉಪಾಧ್ಯಕ್ಷರಾಗಿ ಜಗದೀಶ್ ಎಂ. ಕವಟಗಿಮಠ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತೀರ್ಥರಾಜ್‍, ಅನಿಲ್‍ಕುಮಾರ್‍ ಗೆ `ಯೋಗಾಚಾರ್ಯ’ ಪ್ರಶಸ್ತಿ ಪ್ರದಾನ

ಯೋಗ ಕ್ಷೇತ್ರದಲ್ಲಿ ಜೀವಮಾನದ ಯೋಗ ಸಾಧನೆ ಹಾಗೂ ಸೇವೆಗಾಗಿ ಕೊಡ ಮಾಡುವ `ಯೋಗಾಚಾರ್ಯ ಪ್ರಶಸ್ತಿ ' ಯನ್ನು ಈ ಬಾರಿ ನಗರದ ಯೋಗ ಶಿಕ್ಷಕರಾದ ತೀರ್ಥರಾಜ್‍ ಹೋಲೂರು,  ಅನಿಲ್‍ಕುಮಾರ್‍ ರಾಯ್ಕರ್‍ ಅವರಿಗೆ ಮಹಾದೇವ ಪ್ರಶಸ್ತಿ ಪ್ರದಾನ ಮಾಡಿದರು.

ತೋಳಹುಣಸೆ ಪ್ರಾ.ಕೃ.ಪ. ಸಹಕಾರ ಸಂಘದ ಅಧ್ಯಕ್ಷರಾಗಿ ನಿಂಗಪ್ಪ ಆಯ್ಕೆ

ತಾಲ್ಲೂಕಿನ ತೋಳಹುಣಸೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವಿ.ಎಸ್‌. ನಿಂಗಪ್ಪ ವಡ್ಡಿನಹಳ್ಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಆರ್‌. ರಮೇಶ್‌ ಕರ್ತವ್ಯ ನಿರ್ವಹಿಸಿದರು. 

ಶಸಾಪ ಅಧ್ಯಕ್ಷರಾಗಿ ಗೊರುಚ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ಡಾ. ಗೊ.ರು. ಚನ್ನಬಸಪ್ಪ ಬುಧವಾರ ಅಧಿಕಾರ ಸ್ವೀಕರಿಸಿದರು.

ಜಂಗಮ ಸೌಹಾರ್ದ ಸಹಕಾರಿ ಅಧ್ಯಕ್ಷರಾಗಿ ಎನ್.ಎಂ. ಬಸವರಾಜಯ್ಯ

ನಗರದ ಜಂಗಮ ಸೌಹಾರ್ದ ಸಹಕಾರಿಯ ನೂತನ ಅಧ್ಯಕ್ಷರಾಗಿ ಎನ್‍.ಎಂ. ಬಸವರಾಜಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಇಂದೂಧರ ನಿಶಾನಿಮಠ ಇವರು ಮುಂದುವರೆದಿದ್ದಾರೆ.

ಕಡ್ಲೆಬಾಳು ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷರಾಗಿ ಸತ್ಯನಾರಾಯಣ

ದಾವಣಗೆರೆ ತಾಲ್ಲೂಕಿನ ಕಡ್ಲೆಬಾಳು ಗ್ರಾಮದ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ವಿ. ಸತ್ಯನಾರಾಯಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ನಾಗರತ್ನಮ್ಮ ಮಲ್ಲೇಶಪ್ಪ

ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ಶ್ರೀಮತಿ ನಾಗರತ್ನಮ್ಮ ಮಲ್ಲೇಶಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.

ಶಿವ ಸೊಸೈಟಿಗೆ ಶ್ರೀಕಾಂತ್, ನಾಗರಾಜಪ್ಪ ಆಯ್ಕೆ

ಶಿವ ಸೊಸೈಟಿಗೆ ಶ್ರೀಕಾಂತ್, ನಾಗರಾಜಪ್ಪ ಆಯ್ಕೆ

ಹೊನ್ನಾಳಿ, ಮಾ.26- ಪಟ್ಟಣದ ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ನ್ಯಾಮತಿಯ ಜೆ. ಶ್ರೀಕಾಂತ್ ಹಾಗೂ ಉಪಾಧ್ಯಕ್ಷರಾಗಿ  ಕುಂದೂರಿನ ಎಸ್. ನಾಗರಾಜಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.