ಅಪರಾಧ

Home ಅಪರಾಧ

ಈಜಲು ಹೋಗಿ ಬಾಲಕ ಸಾವು

ಕೂಡ್ಲಿಗಿ ತಾಲ್ಲೂಕಿನ ಶಿವಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿರುವ, ಕಲ್ಲಿನ ಕ್ವಾರಿಯ  ಗುಂಡಿಯಲ್ಲಿ  ಕೂಡ್ಲಿಗಿಯ ರಾಜೀವ್ ಗಾಂಧಿ ನಗರದ ಅಫ್ರಿದ್ (15) ಎಂಬ ಬಾಲಕನು ನೀರಿನಲ್ಲಿ ಈಜಲು ಹೋಗಿ ಗುಂಡಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಹೊರಗುತ್ತಿಗೆ ನೌಕರ ಆತ್ಮಹತ್ಯೆ

ಮಾನಸಿಕ ಖಿನ್ನತೆಗೆ ಸೂಕ್ತ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಜಗಳೂರು ತಾಲ್ಲೂಕು ಲಿಂಗಣ್ಣನಹಳ್ಳಿಯ ಸಮಾಜ ಕಲ್ಯಾಣ ಇಲಾಖೆ ಹೊರಗುತ್ತಿಗೆ ನೌಕರ ತಿಮ್ಮಣ್ಣ (46) ಎಂಬಾತ ಮನೆಯ ಚಾವಣಿಗೆ ನೇಣು ಬಿಗಿದುಕೊಂಡಿದ್ದಾರೆ.

ಅಪ್ರಾಪ್ತೆಯ ಮದುವೆಗೆ ನಡೆದಿದ್ದ ಸಿದ್ಧತೆ : ತಡೆ

ಅಪ್ರಾಪ್ತೆಯನ್ನು 32 ವರ್ಷದ ಯುವಕನಿಗೆ ಸೋಮವಾರ ಮದುವೆ ಮಾಡಲು ಸಿದ್ಧತೆ ನಡೆಸಿದ್ದ ಹಿನ್ನೆಲೆಯಲ್ಲಿ ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ, ಗ್ರಾಮ ಪಂಚಾಯತ್, ಸಿಡಿಪಿಓ ಕಚೇರಿ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ತಂಡ ಬಾಲ್ಯ ವಿವಾಹ ತಡೆಯುವಲ್ಲಿ ಯಶಸ್ವಿಯಾಗಿದೆ. 

ಟ್ರ್ಯಾಕ್ಟರ್ ನಲ್ಲಿದ್ದ ದೋಷ ಪ್ರಶ್ನಿಸಿದ್ದಕ್ಕೆ ಸುಳ್ಳು ದೂರು : ರೈತನ ಆರೋಪ

ಖರೀದಿಸಿದ್ದ ಟ್ರ್ಯಾಕ್ಟರ್ ನಲ್ಲಿ ದೋಷವಿದ್ದ ಬಗ್ಗೆ ಪ್ರಶ್ನಿಸಿ, ಸರಿಪಡಿಸಿಕೊಡುವಂತೆ ಕೇಳಿದ ನನ್ನ ವಿರುದ್ಧವೇ ಟ್ರ್ಯಾಕ್ಟರ್ ಕಂಪನಿಯೊಂದು ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದೆ ಎಂದು ಚನ್ನಗಿರಿ ತಾಲ್ಲೂಕು ಕಾರಿಗನೂರು ಗ್ರಾಮದ ರೈತ ಪಿ.ಎಂ. ಮುರುಗೇಶ್ ಆರೋಪಿಸಿದ್ದಾರೆ.

ನಾಲೆ, ನದಿಯಲ್ಲಿ 2 ಶವಗಳ ಪತ್ತೆ

ಹರಿಹರ : ಮಿಟ್ಲಕಟ್ಟೆ ಗ್ರಾಮದ ಆಕಾಶ್ ರೈಸ್‌ ಮಿಲ್ ಬಳಿ ಹಾದು ಹೋಗಿರುವ ಭದ್ರಾ ನಾಲೆ 10 ಉಪನಾಲೆಯಲ್ಲಿ ಸುಮಾರು 60-65 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವವು ತೇಲಿಬಂದಿದೆ.

ಅನೈತಿಕ ಸಂಬಂಧವಿದ್ದ ಮಹಿಳೆಯ ಕೊಲೆ : ಆರೋಪಿ ಬಂಧನ

ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಶೀಲವನ್ನು ಶಂಕಿಸಿ ಕೊಲೆಗೈದ ಆರೋಪಿತನನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಚನ್ನಗಿರಿ ತಾಲ್ಲೂಕು ಮಾವಿನಕಟ್ಟೆ ಗ್ರಾಮದ ಗಾರೆ ಕೆಲಸಗಾರ ವೆಂಕಟೇಶ್ ಬಂಧಿತನು. 

ಮೂವರ ಬಂಧನ : ಗೂಡ್ಸ್ ಆಟೋ-ನೈಲಾನ್ ರಬ್ಬರ್ ಬೆಲ್ಟ್ ವಶ

ಮೂವರ ಬಂಧನ : ಗೂಡ್ಸ್ ಆಟೋ-ನೈಲಾನ್ ರಬ್ಬರ್ ಬೆಲ್ಟ್ ವಶ

ಹೊನ್ನಾಳಿ : ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿರುವ ಹೊನ್ನಾಳಿ ಪೊಲೀಸರು ಕಳ್ಳತನವಾಗಿದ್ದ ಆಪೇ ಗೂಡ್ಸ್ ಆಟೋ ಮತ್ತು ನೈಲಾನ್ ರಬ್ಬರ್ ಬೆಲ್ಟ್ ವಶಪಡಿಸಿಕೊಂಡಿದ್ದಾರೆ.

ಅಪರಿಚಿತ ವ್ಯಕ್ತಿಯ ಶವ ಪತ್ತೆ

ಇದೇ ದಿನಾಂಕ 20ರಂದು ಹದಡಿ ಪೊಲೀಸ್‍ ಠಾಣೆಯ ಬಿಸಲೇರಿ ಹಳ್ಳಿ ಚಾನಲ್‍ನ ನೀರಿನಲ್ಲಿ ಸುಮಾರು 60 ರಿಂದ 65 ವಯಸ್ಸಿನ ಅಪರಿಚಿತ ಗಂಡಸಿನ ಶವ ದೊರೆತಿದೆ.

ರೈಲ್ವೇ ನಿಲ್ದಾಣದ ಬಳಿ ನೇಣಿಗೆ ಶರಣು

ಹರಿಹರ : ನಗರದ ರೈಲ್ವೇ ನಿಲ್ದಾಣದ ಬಳಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ತಡ ರಾತ್ರಿ ನೇಣು ಹಾಕಿಕೊಂಡು ಮೃತಪಟ್ಟಿದ್ದು, ಬೆಳಗ್ಗೆ ರೈಲ್ವೆ ಸಿಬ್ಬಂದಿಗಳು ಕಾರ್ಯನಿರ್ವಹಿಸುವಾಗ ನೋಡಿ, ರೈಲ್ವೆ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಮಾಸ್ಕ್‌ ಹಾಕು ಎಂದಿದ್ದಕ್ಕೆ ಪೊಲೀಸ್‌ಗೆ ಕಪಾಳಮೋಕ್ಷ

ಕೂಡ್ಲಿಗಿ : ಲಾಕ್‌ಡೌನ್ ವೇಳೆ ಬೈಕ್‌ ಸವಾರ ನೊಬ್ಬ ಮಾಸ್ಕ್‌ ಧರಿಸದೆ ಮೊಬೈಲ್‌ನಲ್ಲಿ ಮಾತನಾಡುತ್ತಿ ರುವಾಗ, ತಡೆದು ಮಾಸ್ಕ್‌ ಹಾಕು ಎಂದು ಹೇಳಿದ್ದಕ್ಕೆ ಪೇದೆಗೆ ಕಪಾಳಮೋಕ್ಷ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಬಾಲಕನ ಬಂಧನ : ಐದು ಬೈಕ್‌ಗಳ ವಶ

ಬೈಕ್‌ಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘ ರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಿ ರುವ ಇಲ್ಲಿನ ಬಡಾ ವಣೆ ಪೊಲೀಸರು 5 ಪ್ರಕರಣಗಳನ್ನು ಪತ್ತೆ ಮಾಡಿ, 5 ಬೈಕ್‌ಗಳು ವಶಪಡಿಸಿಕೊಂಡಿದ್ದಾರೆ.

ಬೀಗ ಹಾಕಿದ್ದ ಮನೆಗೆ ಕನ್ನ

ಹಬ್ಬಕ್ಕೆಂದು ಮನೆಗೆ ಬೀಗ ಹಾಕಿ ತೆರಳಿದ್ದನ್ನು ಬಂಡವಾಳವಾಗಿಸಿಕೊಂಡು ಕನ್ನ ಹಾಕಿರುವ ಕಳ್ಳರು 35 ಸಾವಿರ ಮೌಲ್ಯದ 10 ಗ್ರಾಂ ಬಂಗಾರ, 39 ಸಾವಿರ ನಗದು ದೋಚಿರುವ ಘಟನೆ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೊರೊನಾ ನಿಯಮ ಉಲ್ಲಂಘಿನೆ : ಇಬ್ಬರು ಹೋಟೆಲ್ ಮಾಲೀಕರ ವಶ

ಕೊರೊನಾ ನಿಯಮ ಉಲ್ಲಂಘಿಸಿ, ನಿರ್ಲಕ್ಷದಿಂದ ವ್ಯಾಪಾರ ನಡೆಸಿದ ಆರೋಪದಡಿ ಇಂದು ಇಬ್ಬರು ಹೋಟೆಲ್ ಮಾಲೀಕರನ್ನು ವಶಕ್ಕೆ ಪಡೆದು ಇವರಿಬ್ಬರ ವಿರುದ್ಧ ಪ್ರತ್ಯೇಕವಾಗಿ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕ್ಷಣಾರ್ಧದಲ್ಲೇ ದ್ವಿಚಕ್ರ ವಾಹನದಲ್ಲಿದ್ದ 5 ಲಕ್ಷ ಕಳವು

ಬೇಕರಿಗೆ ಹೋಗಿ ಬರುವಷ್ಟರಲ್ಲಿ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿದ್ದ ಐದು ಲಕ್ಷ ನಗದನ್ನು ಹಾಡಹಗಲೇ ಕ್ಷಣಾರ್ಧದಲ್ಲಿ ದೋಚಿರುವ ಬಗ್ಗೆ ಇಲ್ಲಿನ ಕೆಟಿಜೆ ನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರೊನಾ ನಿಯಮ ಉಲ್ಲಂಘಿಸಿದ ಆಟೋ ಚಾಲಕನ ವಶ

ಕೊರೊನಾ ನಿಯಮ ಉಲ್ಲಂಘಿಸಿ, ಹೆಚ್ಚುವರಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಪ್ರಯಾಣಿಕರ ಆಟೋ ಮೇಲೆ ಚನ್ನಗಿರಿ ಪೊಲೀಸ್ ಠಾಣೆ ಪಿಎಸ್ಐ ಜಿ. ಜಗದೀಶ್ ಮತ್ತು ಸಿಬ್ಬಂದಿಗಳ ತಂಡ ಇಂದು ದಾಳಿ ನಡೆಸಿ ಆಟೋ ಚಾಲಕನನ್ನು ವಶಕ್ಕೆ ಪಡೆದು ಈತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಹಳೇಬಿಸಲೇರಿ : ಶವ ಪತ್ತೆ

ತಾಲ್ಲೂಕಿನ ಹಳೇಬಿಸಲೇರಿ ಗ್ರಾಮದ ಬಳಿ ಇರುವ ಚಾನೆ ಲ್‌ನಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.

ದರೋಡೆ ಪ್ರಕರಣ ಭೇದಿಸಿದ ಪೊಲೀಸರು

ದರೋಡೆ ಪ್ರಕರಣ ಭೇದಿಸಿದ ಪೊಲೀಸರು

ಕೊಟ್ಟೂರು : ಕಳೆದ ಭಾನುವಾರ ರಾತ್ರಿಯಷ್ಟೇ ಪಟ್ಟಣದ ಬಸವೇಶ್ವರ ನಗರದ ಮಲ್ಲೇಶ್‌ ಹುಲ್ಮನಿ ಮನೆಗೆ ನುಗ್ಗಿ, ಮಚ್ಚು ತೋರಿಸಿ 30 ಲಕ್ಷ ರೂ.ಗಳನ್ನು ದೋಚಿಕೊಂಡು ಪರಾರಿಯಾಗಿದ್ದ ಆರೋಪಿಗಳನ್ನು ವಾರದೊಳಗೆ ಕೊಟ್ಟೂರು ಪೊಲೀಸರು ಪತ್ತೆ ಹಚ್ಚಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಷನ್ ಅಂಗಡಿಗೆ ಬೆಂಕಿ: ವಸ್ತುಗಳು ಭಸ್ಮ

ಕುಷನ್ ಅಂಗಡಿಗೆ ಬೆಂಕಿ: ವಸ್ತುಗಳು ಭಸ್ಮ

ಕುಷನ್ ಅಂಗಡಿಯೊಂ ದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿ ಕೊಂಡು ಕುಷನ್ ವಸ್ತುಗಳೆಲ್ಲಾ ಬೆಂಕಿಗಾಹುತಿಯಾಗಿರುವ ಘಟನೆ ಇಲ್ಲಿನ ವಿನೋಬ ನಗರ‌ 2ನೇ ಹಂತ ರೆಡ್ಡಿ ಬಿಲ್ಡಿಂಗ್ ಬಳಿ ಇಂದು ರಾತ್ರಿ 10.15ರ ಸುಮಾರಿಗೆ ಸಂಭವಿಸಿದೆ.

ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಎರಡು ಮನೆಗಳು

ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಅಕ್ಕಪಕ್ಕದಲ್ಲಿನ ಎರಡು ಮನೆಗಳು ಹೊತ್ತಿ ಉರಿದ ಘಟನೆ ನಗರದ ಬಸವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹುಬ್ಬಳ್ಳಿ ಚೌಡಪ್ಪನ ಓಣಿಯಲ್ಲಿಂದು ನಡೆದಿದೆ.