`ಹರ ಹರ ಮಹಾದೇವ' ಎಂಬ ಹರ್ಷೋದ್ಘಾರದೊಂದಿಗೆ ನಾಡಿನ ಐತಿಹಾಸಿಕ ಸುಕ್ಷೇತ್ರ ಹೂವಿನಹಡಗಲಿ ತಾಲ್ಲೂಕು ಕುರುವತ್ತಿಯ ಶ್ರೀ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ರಥೋತ್ಸವವು ಶುಕ್ರವಾರ ಸಂಜೆ ಲಕ್ಷಾಂತರ ಭಕ್ತರ ಮಧ್ಯೆ ಸಂಭ್ರಮದಿಂದ ನೆರವೇರಿತು.

ಮಕ್ಕಳ ಭಾವನೆಗಳು ಕಲಾಕೃತಿಗಳಾದಾಗ…
ಅದೊಂದು ಮಕ್ಕಳ ಕಲ್ಪನಾ ಲೋಕ. 250ಕ್ಕೂ ಹೆಚ್ಚು ಮಕ್ಕಳಲ್ಲಿನ ಮನಸ್ಸಿನ ಭಾವನೆಗಳು, ಕಲ್ಪನೆಗಳು ಕುಂಚದ ಮೂಲಕ ಕಲಾಕೃತಿಗಳಾಗಿ ಹೊರ ಹಮ್ಮಿದ್ದವು.

ಕಲಾ ಕಾಲೇಜಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ
ವಿದ್ಯಾರ್ಥಿಗಳಲ್ಲಿ ಕಲೆಯ ಮೇಲಿನ ಆಸಕ್ತಿ ಕಡಿಮೆ ಆಗುತ್ತಿರುವುದರಿಂದ ಕಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ. ರಮೇಶ್ ಕಳವಳ ವ್ಯಕ್ತಪಡಿಸಿದರು.

ಉಕ್ಕಡಗಾತ್ರಿ : ಅಜ್ಜಯ್ಯನ ಜಾತ್ರೆಗೆ ಚಾಲನೆ
ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಮಹಾಶಿವರಾತ್ರಿ ಜಾತ್ರಾ ಮಹೋ ತ್ಸವಕ್ಕೆ ನಂದಿಗುಡಿ ವೃಷಭಪುರಿ ಮಹಾಸಂಸ್ಥಾನ ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಇಂದು ಬೆಳಿಗ್ಗೆ ನಂದಿ ಧ್ವಜಾರೋ ಹಣ ಮಾಡುವ ಮೂಲಕ ಚಾಲನೆ ನೀಡಿದರು.

ನಗರದಲ್ಲಿ ಇಂದು ನೃತ್ಯ ಸಮರ್ಪಣಾ ಕಾರ್ಯಕ್ರಮ
ದಾವಣಗೆರೆಯ ಶ್ರೀ ಶಾರದ ಸಂಗೀತ ಮತ್ತು ನೃತ್ಯ ಕಲಾ ಶಾಲೆ ವತಿಯಿಂದ ನೃತ್ಯ ಕ್ಷೇತ್ರದ ಮಹಾನ್ ಚೇತನ ಕೀರ್ತಿಶೇಷರಾದ ರುಕ್ಮಿಣಿ ದೇವಿ ಅರುಂಡೇಲ್ ಅವರ ಸ್ಮರಣಾರ್ಥ ನೃತ್ಯ ಸಮರ್ಪಣಾ - 2025 (ಭರತ ನಾಟ್ಯ ಕಾರ್ಯಕ್ರಮ) ವು ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ಇಂದು ಸಂಜೆ 5 ಗಂಟೆಗೆ ನಡೆಯಲಿದೆ
4 ರಂದು ಕೈದಾಳೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ
ತಾಲ್ಲೂಕಿನ ಕೈದಾಳೆ ಗ್ರಾಮದ ಕೈದಾಳೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮಹಾ ರಥೋತ್ಸವವು ಮಾರ್ಚ್ 4 ರಂದು ನೆರವೇರಲಿದೆ.
ನಗರದಲ್ಲಿ ಇಂದು ಬಿಜೆಪಿ ವೀರಶೈವ ಲಿಂಗಾಯತ ಮುಖಂಡರ ಸಭೆ
ಕರ್ನಾಟಕದಲ್ಲಿ ಬಿಜೆಪಿಯನ್ನು ಸದೃಢವಾಗಿ ಬೆಳೆಸುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 11.30 ಕ್ಕೆ ಸಮೃದ್ಧಿ ಬ್ಯಾಂಕ್ವೆಟ್ ಹಾಲ್ನಲ್ಲಿ ಚಿತ್ರದುರ್ಗ, ಹಾವೇರಿ, ದಾವಣಗೆರೆ ಜಿಲ್ಲೆಗಳ ವೀರಶೈವ ಲಿಂಗಾಯತ ಸಮಾಜದ ಪ್ರಮುಖರ ಸಭೆ ನಡೆಸಲಾಗುವುದು.
ಲೇಬರ್ ಕಾಲೋನಿಯಲ್ಲಿ ಶಿವರಾತ್ರಿ ಜಾಗರಣೆ
ಲೇಬರ್ ಕಾಲೋನಿ 6ನೇ ತಿರುವಿನ ಲ್ಲಿರುವ (ಕೆಎಸ್ಸಾರ್ಟಿಸಿ ಬಸ್ ಸ್ಟ್ಯಾಂಡ್ ರಸ್ತೆ) ಗುರು ಕರಿಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ ಬರುವ ಮಾರ್ಚ್ 4ರ ವರೆಗೆ ದೇವಸ್ಥಾನದಲ್ಲಿ 57ನೇ ವರ್ಷದ ಶಿವರಾತ್ರಿ ಜಾಗರಣೆ ಮಹೋತ್ಸವ ನಡೆಯಲಿದೆ.
ನಾಳೆ ಸತ್ಯನಾರಾಯಣ ಪೂಜೆ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಬಂಟರ ಸಂಘ ಮತ್ತು ದಾವಣಗೆರೆಯ ಕರಾವಳಿ ಮಿತ್ರ ಮಂಡಳಿ ಸಂಯುಕ್ತಾಶ್ರಯದಲ್ಲಿ ನಾಳೆ ಭಾನುವಾರ ಬೆಳಿಗ್ಗೆ ನಗರದ ಡಾ. ಶಾಮ ಸುಂದರ ಶೆಟ್ಟಿ ಬಂಟರ ಭವನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆ ಯಲಿದೆ.
ಕೊಮಾರನಹಳ್ಳಿಯಲ್ಲಿ ಶ್ರೀ ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರ ಆರಾಧನೆ
ಮಲೇಬೆನ್ನೂರು : ಕೊಮಾರನಹಳ್ಳಿಯ ಶ್ರೀ ರಂಗನಾಥ ಆಶ್ರಮದಲ್ಲಿ ಶ್ರೀ ಶಂಕರಲಿಂಗ ಭಗವಾನ್ ಸರಸ್ವತೀ ಪರಮಹಂಸರ 72ನೇ ವರ್ಷದ ಆರಾಧನಾ ಮಹೋತ್ಸವವು ಈಗಾಗಲೇ ಆರಂಭವಾಗಿದ್ದು, ಮಾರ್ಚ್ 2ರ ಭಾನುವಾರದವರೆಗೂ ನಡೆಯಲಿದೆ.
ಮಲೇಬೆನ್ನೂರು : ಇಂದು ಕಂಕಣಧಾರಣೆ
ಶ್ರೀ ಬಸವೇಶ್ವರ ದೇವರ ರಥೋತ್ಸವವು ಮಾರ್ಚ್ 4 ರ ಮಂಗಳವಾರ ಸಾಯಂಕಾಲ 4-30 ಕ್ಕೆ ಜರುಗಲಿದ್ದು, ಇದರ ಅಂಗವಾಗಿ ಇಂದು ಬೆಳಗ್ಗೆ 9.30 ಕ್ಕೆ ಶ್ರೀ ಮಹಾಗಣಪತಿ ಪೂಜೆಯೊಂದಿಗೆ ರಥಕ್ಕೆ ಕಂಕಣಧಾರಣೆ ನಡೆಯಲಿದೆ.
ಬೀದಿ ನಾಟಕ ಕಲಾತಂಡಗಳಿಂದ ಅರ್ಜಿ ಆಹ್ವಾನ
ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ಜಾನಪದ ಕಲಾ ಪ್ರಕಾರದಲ್ಲಿ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲು ಕಲಾ ಪ್ರದರ್ಶನ ನೀಡಲು ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹರಿಹರ ಬಳಿ ಅಪರಿಚಿತ ವೃದ್ಧನ ಸಾವು
ಹರಿಹರ : ಮಿಟ್ಲಕಟ್ಟೆ ದೇವರಬೆಳಕೆರೆ ರಸ್ತೆಯಲ್ಲಿ ಕಳೆದ ಡಿ. 3ರಂದು ಬೈಕ್ ಅಪಘಾತವಾಗಿ 73 ವಯಸ್ಸಿನ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ.
ವಿವಿ ನಾಮನಿರ್ದೇಶಿತ ಸದಸ್ಯತ್ವ ಕೊಡಿಸುವುದಾಗಿ ಹೇಳಿ ವಂಚನೆ
ರಾಜೀವ್ ಗಾಂಧಿ ವಿವಿ ಮತ್ತು ವಿ.ಟಿ.ಯು ನಲ್ಲಿ ರಾಜ್ಯಪಾಲರಿಂದ ನಾಮನಿರ್ದೇಶಿತ ಸದಸ್ಯತ್ವ ಕೊಡಿಸುವುದಾಗಿ ಹೇಳಿ 2.78 ಲಕ್ಷ ರೂ. ಪಡೆದು ವಂಚನೆ ಮಾಡಿದ್ದ ಆರೋಪಿಯನ್ನು ದಾವಣಗೆರೆ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ನಾಳೆಯಿಂದ ರಂಜಾನ್ ಉಪವಾಸ
ರಾಜ್ಯಾದ್ಯಂತ ಎಲ್ಲಿಯೂ ಸಹ ಚಂದ್ರ ಗೋಚರದ ಮಾಹಿತಿ ಲಭ್ಯವಾಗದ ಕಾರಣ ನಾಡಿದ್ದು ದಿನಾಂಕ ದಿನಾಂಕ 2ರ ಭಾನುವಾರ ರಂಜಾನ್ ಮಾಸದ ಉಪವಾಸ (ರೋಜಾ) ಪ್ರಾರಂಭವಾಗಲಿದೆ.
ಕಾರ್ಮಿಕರ ಪಿಎಫ್, ಇಎಸ್ಐ ದುರ್ಬಳಕೆಗೆ ಕಡಿವಾಣ ಹಾಕಿ
ಗುತ್ತಿಗೆ ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳ ಭವಿಷ್ಯನಿಧಿ (ಪಿಎಫ್) ಹಾಗೂ ಇಎಸ್ಐ ವ್ಯವಸ್ಥಿತ ದುರ್ಬಳಕೆಗೆ ಕಡಿವಾಣ ಹಾಕಬೇಕು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್ ಹೇಳಿದರು.
ನಗರದಲ್ಲಿ ಇಂದು ಶಿವಾನುಭವ ಸಂಪದ
ಹಾಲಕೆರೆ ಶ್ರೀ ಅನ್ನದಾನೇಶ್ವರ ಸಾರ್ವಜನಿಕ ಸೇವಾ ಟ್ರಸ್ಟ್ ಇವರ ವತಿಯಿಂದ ಇಂದು ಸಂಜೆ 6.30 ಕ್ಕೆ ಶ್ರೀ ಅನ್ನದಾನೇಶ್ವರ ಶಾಖಾ ಮಠದಲ್ಲಿ 278 ನೇ ಶಿವಾನುಭವ ಸಂಪದ ಕಾರ್ಯಕ್ರಮ ನಡೆಯಲಿದೆ.
ನಗರದಲ್ಲಿ ನಾಳೆ ನೃತ್ಯ ಸಮರ್ಪಣೆ
ಮಹಾನ್ ಚೇತನ ಕೀರ್ತಿಶೇಷರಾದ ರುಕ್ಮಿಣಿ ದೇವಿ ಅರುಂಡೇಲ್ ಅವರ ಸ್ಮರಣಾರ್ಥ ನೃತ್ಯ ಸಮರ್ಪಣಾ - 2025 (ಭರತ ನಾಟ್ಯ ಕಾರ್ಯಕ್ರಮ) ವು ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ನಾಡಿದ್ದು ದಿನಾಂಕ 1ರ ಭಾನುವಾರ ಸಂಜೆ 5 ಗಂಟೆಗೆ ನಡೆಯಲಿದೆ.
ನಗರದಲ್ಲಿ ಇಂದು ರಾಷ್ಟ್ರೀಯ ವಿಜ್ಞಾನ ದಿನ
ಬಿ.ಇ.ಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ `ರಾಷ್ಟ್ರೀಯ ವಿಜ್ಞಾನ ದಿನಚರಣೆ ಕಾರ್ಯಕ್ರಮ ನಡೆಯಲಿದೆ.
ನಗರದ ಲೇಬರ್ ಕಾಲೋನಿಯಲ್ಲಿ ಇಂದಿನಿಂದ ಶಿವರಾತ್ರಿ ಜಾಗರಣೆ
ಲೇಬರ್ ಕಾಲೋನಿ 6ನೇ ತಿರುವಿನಲ್ಲಿರುವ (ಕೆಎಸ್ಸಾರ್ಟಿಸಿ ಬಸ್ ಸ್ಟ್ಯಾಂಡ್ ರಸ್ತೆ) ಗುರು ಕರಿಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ ಬರುವ ಮಾರ್ಚ್ 4ರ ವರೆಗೆ ದೇವಸ್ಥಾನದಲ್ಲಿ 57ನೇ ವರ್ಷದ ಶಿವರಾತ್ರಿ ಜಾಗರಣೆ ಮಹೋತ್ಸವ ನಡೆಯಲಿದೆ.
ನಗರದಲ್ಲಿಂದು ವಿಜ್ಞಾನ ರಸ ಪ್ರಶ್ನೆ ಸ್ಪರ್ಧೆ
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಬಿಐಇಟಿ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಮಟ್ಟದ ಪ್ರಶಿಕ್ಷಣಾರ್ಥಿಗಳ ವಿಜ್ಞಾನ ರಸ ಪ್ರಶ್ನೆ ಕಾರ್ಯಕ್ರಮ ನಡೆಯಲಿದೆ.
ನಗರದಲ್ಲಿ ಇಂದಿನಿಂದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ
ಜನಪ್ರಿಯ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಾಳೆ ದಿನಾಂಕ 28 ರಿಂದ ಮಾರ್ಚ್ 2 ರವರೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪ್ರೀಮಿಯರ್ ಲೀಗ್ ಪಂದ್ಯಾವಳಿ ನಡೆಯಲಿದೆ
ಇನ್ನರ್ವ್ಹೀಲ್ನಿಂದ ವಿವಿಧ ಸ್ಪರ್ಧೆಗಳು
ಇನ್ನರ್ ವ್ಹೀಲ್ ಸಂಸ್ಥೆ ವಿದ್ಯಾನಗರ ವತಿಯಿಂದ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ನಗರದಲ್ಲಿ ಇಂದು ಅನ್ನ ಸಂತರ್ಪಣೆ
ಕೆಟಿಜೆ ನಗರ 2ನೇ ಮುಖ್ಯ ರಸ್ತೆ, 14ನೇ ತಿರುವಿನಲ್ಲಿರುವ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಇಂದು ಮಧ್ಯಾಹ್ನ 12.30ಕ್ಕೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಶ್ರೀ ಕುರುಹಿನಶೆಟ್ಟಿ ನೇಕಾರ ಸಮಾಜ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ತರಳಬಾಳು ಹುಣ್ಣಿಮೆ : ಯಶಸ್ವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದಿಸಲು ಸಭೆ
ಭರಮಸಾಗರದಲ್ಲಿ ಈಚೆಗೆ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಸಮಿತಿ ಮತ್ತು ಕಾರ್ಯಕರ್ತರನ್ನು ಅಭಿನಂದಿಸಲು ನಾಡಿದ್ದು ದಿನಾಂಕ 28 ರ ಶುಕ್ರವಾರ ಬೆಳಿಗ್ಗೆ 11ಕ್ಕೆ ಭರಮಸಾಗರದ ನಿರಂಜನಮೂರ್ತಿಯವರ ಕಲ್ಯಾಣ ಮಂಟಪ ದಲ್ಲಿ ಶ್ರೀ ಜಗದ್ಗುರುಗಳವರ ಸಮ್ಮುಖದಲ್ಲಿ ಸಭೆಯನ್ನು ಕರೆಯಲಾಗಿದೆ.
ನಗರದಲ್ಲಿ ಇಂದು ಅನ್ನ ಸಂತರ್ಪಣೆ
ಕೆಟಿಜೆ ನಗರ 2ನೇ ಮುಖ್ಯ ರಸ್ತೆ, 14ನೇ ತಿರುವಿನಲ್ಲಿರುವ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಇಂದು ಮಧ್ಯಾಹ್ನ 12.30ಕ್ಕೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಶ್ರೀ ಕುರುಹಿನಶೆಟ್ಟಿ ನೇಕಾರ ಸಮಾಜ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸಂಸ್ಕಾರವಂತನು ಏನನ್ನಾದರೂ ಸಾಧಿಸಬಲ್ಲ
ಹರಿಹರ : ಸಂಸ್ಕಾರ ಮತ್ತು ಸಂಸ್ಕೃತಿ ಎಂಬುದು ತುಂಬಾ ವಿಸ್ತಾರವಾಗಿದೆ, ಸಂಸ್ಕೃತಿಯಲ್ಲಿ ಸಾಹಿತ್ಯ, ನಾಟ್ಯ, ನಡವಳಿಕೆ ಎಲ್ಲವೂ ಒಳಗೊಂಡಿದೆ. ಇದನ್ನರಿತವ ಏನಾದರೂ ಸಾಧನೆ ಮಾಡಲು ಸಾಧ್ಯ
ಶಿಬಾರದಲ್ಲಿ ಇಂದಿನಿಂದ ಮಾ. 14ರವರೆಗೆ ಭಾರೀ ದನಗಳ ಜಾತ್ರೆ
ಶ್ರೀ ಜಗದ್ಗುರು ಗುರುಪಾದ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಹಾಗು ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ 70ನೇ ವರ್ಷದ ರಥೋತ್ಸವ ಹಾಗೂ ಭಾರೀ ದನಗಳ ಜಾತ್ರೆಯನ್ನು ಇಂದಿನಿಂದ ಬರುವ ಮಾರ್ಚ್ 14ರವರೆಗೆ ಆಯೋಜಿಸಲಾಗಿದೆ.
ನಗರದಲ್ಲಿ ಇಂದು ಪದ್ಮಸಾಲಿ ಸಮಾಜದ ಬೆಳ್ಳಿ ರಥೋತ್ಸವ
ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಸಮಾಜದ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಇಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶಕ್ಕೆ ಅರ್ಜಿ
ಹರಪನಹಳ್ಳಿ : ತಾಲ್ಲೂಕಿನ ಅನಂತನಹಳ್ಳಿ ಸಮೀಪದ ಸರ್ಕಾರಿ ಆದರ್ಶ ವಿದ್ಯಾಲಯದ 2025-26ನೇ ಸಾಲಿನ 6ನೇ ತರಗತಿ ದಾಖಲಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಪ್ರಾಪ್ತ ಬೈಕ್ ಚಾಲನೆ : 25 ಸಾವಿರ ದಂಡ
ಸಂತೇಬೆನ್ನೂರು : ಅಪ್ರಾಪ್ತನೊಬ್ಬ ಬೈಕ್ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಮಾಲೀಕನಿಗೆ ಚನ್ನಗಿರಿಯ 2ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ.

ಬಿಜೆಪಿಯಲ್ಲಿ ಏಕೈಕ ಸಮುದಾಯಕ್ಕೆ ಮನ್ನಣೆ, ಇತರೆ ವರ್ಗ ನಿರ್ಲಕ್ಷ್ಯ
ಸದಾ ರಾಷ್ಟ್ರೀಯವಾದದ ಬಗ್ಗೆ ಮಾತನಾಡುವ ಬಿಜೆಪಿ ಕೇವಲ ಏಕೈಕ ಸಮುದಾಯದ ಸಮಾ ವೇಶ, ಪ್ರಮುಖರ ಸಭೆಗಳನ್ನು ಮಾಡುತ್ತಿದ್ದು, ಪಕ್ಷದಲ್ಲಿ ಕೇವಲ ಏಕೈಕ ಸಮುದಾಯಕ್ಕೆ ಮನ್ನಣೆ ನೀಡಲಾಗುತ್ತಿದೆ.

ನಂದಿತಾವರೆಯಲ್ಲಿ ನಾಳೆ ಶ್ರೀ ಬಸವೇಶ್ವರ ರಥೋತ್ಸವ
ಮಲೇಬೆನ್ನೂರು ಸಮೀಪದ ನಂದಿತಾವರೆ ಗ್ರಾಮದ ಆರಾಧ್ಯ ದೈವ ಶ್ರೀ ಬಸವೇಶ್ವರ ದೇವರ ರಥೋತ್ಸವವು ನಾಳೆ ಭಾನುವಾರ ಜರುಗಲಿದೆ.

ಜಗಳೂರು ತಾಲ್ಲೂಕಿನ ಹಿರಿಯ ನೇತ್ರಾಧಿಕಾರಿ ಪರಮೇಶ್ವರಪ್ಪ ನಿವೃತ್ತಿ
ಜಗಳೂರು : ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಹಿರಿಯ ನೇತ್ರಾಧಿಕಾರಿ ಕೆ.ಎಂ. ಪರಮೇಶ್ವರಪ್ಪ ಸುದೀರ್ಘ 39 ವರ್ಷಗಳ ಸರ್ಕಾರಿ ಸೇವೆಯಿಂದ ಇಂದು ಸೇವಾ ನಿವೃತ್ತಿ ಹೊಂದಿದ್ದಾರೆ.

ಹಂಪೆ ಉತ್ಸವ ಕವಿಗೋಷ್ಠಿಗೆ ನಾಗರಾಜ
ವಿಶ್ವವಿಖ್ಯಾತ ಹಂಪೆ ಉತ್ಸವದ ಅಂಗವಾಗಿ ವಿರೂಪಾಕ್ಷ ದೇವಾಲಯದ ಆವರಣದ ವೇದಿಕೆಯಲ್ಲಿ ಮಾರ್ಚ್ 1ರ ಬೆಳಿಗ್ಗೆ ಏರ್ಪಡಿಸಿರುವ ಕವಿಗೋಷ್ಠಿಯಲ್ಲಿ ಕನ್ನಡ ಅಧ್ಯಾಪಕ ನಾಗರಾಜ ಸಿರಿಗೆರೆ ಅವರು ಕವನ ವಾಚನ ಮಾಡಲಿದ್ದಾರೆ.

ಹಂಪಿ ಉತ್ಸವದ ಯೋಗ ಪ್ರದರ್ಶನಕ್ಕೆ ಹರಿಹರದ ಕೆ.ವೈ.ಸೃಷ್ಠಿ
2025 ನೇ ಸಾಲಿನ ಹಂಪಿ ಉತ್ಸವ ಸಾಂಸ್ಕೃತಿಕ ಕಾರ್ಯ ಕ್ರಮದಲ್ಲಿ ಯೋಗ ಪ್ರದರ್ಶನವು ಮಾರ್ಚ್ 2 ರ ಭಾನುವಾರ ಸಂಜೆ 5.30ಕ್ಕೆ ನಡೆಯಲಿದ್ದು, ಈ ಕಾರ್ಯಕ್ರಮ ದಲ್ಲಿ ಅಂತರರಾಷ್ಟ್ರೀಯ ಯೋಗ ಪಟು ಸೃಷ್ಟಿ ಕೆ.ವೈ. ಅವರು ಯೋಗ ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಜಗದ್ಗುರು ಗುರುಪಾದ ಮುರುಘಾ ಮಹಾಸ್ವಾಮೀಜಿ ರಥೋತ್ಸವ
ಚಿತ್ರದುರ್ಗ : ಶ್ರೀ ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರೀ ಜಗದ್ಗುರು ಗುರುಪಾದ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಹಾಗೂ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ 70ನೇ ವರ್ಷದ ರಥೋತ್ಸವವು ನಗರಕ್ಕೆ ಸಮೀಪದ ಸಿಬಾರದಲ್ಲಿ ನಿನ್ನೆ ಸಂಭ್ರಮದಿಂದ ಜರುಗಿತು.

ಕುಂಬಳೂರು : ರಾಜೀವ್ಗಾಂಧಿ ಸೇವಾ ಕೇಂದ್ರ ಉದ್ಘಾಟನೆ ಇಂದು
ಮಲೇಬೆನ್ನೂರು ಸಮೀಪದ ಕುಂಬಳೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯ್ತಿ ನೂತನ ಕಟ್ಟಡವಾದ ರಾಜೀವ್ಗಾಂಧಿ ಸೇವಾ ಕೇಂದ್ರ ಇಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಅಕ್ಕಿ ವರ್ತಕ – ಶಿವಗೋಷ್ಠಿ ಅಧ್ಯಕ್ಷ ಮಾಗನೂರು ಸೋಮಶೇಖರ ಗೌಡ್ರು ನಿಧನ
ನಗರದ ಹಿರಿಯ ಅಕ್ಕಿ ವರ್ತಕರೂ, ತರಳಬಾಳು ಬಡಾವಣೆ ಶಿವಗೋಷ್ಠಿ ಸಮಿತಿ ಅಧ್ಯಕ್ಷರೂ ಆದ ಮಾಗನೂರು ಸೋಮಶೇಖರ ಗೌಡ್ರು ಇಂದು ಬೆಳಗಿನಜಾವ 4.30 ಗಂಟೆಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು.

ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇಂದು ಶಿವರಾತ್ರಿ ಅಮಾವಾಸ್ಯೆ ಪೂಜೆ
ಶ್ರೀ ಡಿ. ದೇವರಾಜ ಅರಸು ಬಡಾವಣೆ 'ಎ' ಬ್ಲಾಕ್ ನಲ್ಲಿರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಶಿವರಾತ್ರಿ ಅಮಾವಾಸ್ಯೆ ಪ್ರಯುಕ್ತ ಇಂದು ಶ್ರೀ ನಾಗಲಿಂಗೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಮೃತ್ಯುಂಜಯ ಹೋಮ, ಪ್ರಧಾನ ದೇವತೆ ಶ್ರೀ ಮಾತಾ ಅನ್ನಪೂರ್ಣೇಶ್ವರಿಗೆ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ

ಹರಿಯಾಣದ ರಾಷ್ಟ್ರಮಟ್ಟದ ಫಾಸ್ಟ್ 5 ನೆಟ್ ಬಾಲ್ ತಂಡಕ್ಕೆ ನಗರದ ಇಬ್ಬರು ಆಟಗಾರರು ಆಯ್ಕೆ
ಹರಿಯಾಣದ ನೆಟ್ ಬಾಲ್ ಅಸೋಸಿಯೇಷನ್ ಭಿವಾನಿಯ ಕಲ್ಲಿಂಗದಲ್ಲಿರುವ ಶ್ರೀ ಬಾಲಾಜಿ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಇಂದು ಮತ್ತು ನಾಳೆ ನಡೆಯಲಿರುವ 3ನೇ ಫಾಸ್ಟ್ 5 ಜ್ಯೂನಿಯರ್ ರಾಷ್ಟ್ರೀಯ ನೆಟ್ಬಾಲ್ ಚಾಂಪಿಯನ್ಶಿಪ್ (ಬಾಲಕರು ಮತ್ತು ಬಾಲಕಿಯರು) ಗೆ ದಾವಣಗೆರೆ ಜಿಲ್ಲಾ ನೆಟ್ ಬಾಲ್ ಸಂಸ್ಥೆಯಿಂದ ಬಾಲಕಿಯರ ತಂಡಕ್ಕೆ ಇಬ್ಬರು ಆಯ್ಕೆಯಾಗಿದ್ದಾರೆ.

ಹಂಪಿ ಉತ್ಸವಕ್ಕೆ ನಗರದ ಹಿಂದೂಸ್ತಾನಿ ಗಾಯಕಿ ಡಾ. ಪೃಥ್ವಿ ಐಗೂರು ಆಯ್ಕೆ
ಬರುವ ಮಾರ್ಚ್ 1 ಮತ್ತು 2 ರಂದು ನಡೆಯಲಿರುವ 2025 ನೇ ಸಾಲಿನ ಹಂಪಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಗರದ ಹಿಂದೂಸ್ತಾನಿ ಗಾಯಕಿ ಕು. ಡಾ. ಪೃಥ್ವಿ ಎ.ಟಿ. ಐಗೂರು ಆಯ್ಕೆಯಾಗಿದ್ದಾರೆ.

ಕೋಡಿ ಕ್ಯಾಂಪ್ ಕೊಟ್ಟೂರೇಶ್ವರ ಮಠದಲ್ಲಿಂದು ಶಿವರಾತ್ರಿ ಅಮಾವಾಸ್ಯೆ
ದಾವಣಗೆರೆಯ ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ಇವರಿಂದ ಮಾಗಾನಹಳ್ಳಿ ಕೋಡಿ ಕ್ಯಾಂಪ್ ಬಳಿ ಇರುವ ಶ್ರೀ ಕೊಟ್ಟೂರೇಶ್ವರ ಮಹಾಸ್ವಾಮಿ ಪಾದಗಳಿಗೆ ಮಹಾಶಿವರಾತ್ರಿ ಪ್ರಯುಕ್ತ ನಾಡಿದ್ದು ಇಂದು ಬೆಳಿಗ್ಗೆ 6.30ಕ್ಕೆ ಅಭಿಷೇಕ - ಪೂಜೆ ನಡೆಯಲಿದೆ.

ಶ್ರೀ ದಾನಮ್ಮ ದೇವಸ್ಥಾನದಲ್ಲಿ ಇಂದು ಶಿವರಾತ್ರಿ ಅಮಾವಾಸ್ಯೆ ಪೂಜೆ
ದೊಡ್ಡಪೇಟೆಯ ಶ್ರೀ ಬಸವೇಶ್ವರ ಮತ್ತು ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ಶಿವರಾತ್ರಿ ಅಮಾವಾಸ್ಯೆ ಪ್ರಯುಕ್ತ ಇಂದು ಬೆಳಿಗ್ಗೆ ಶ್ರೀ ಸ್ವಾಮಿಗೆ ಅಭಿಷೇಕ, ಪೂಜೆ, ಹೂವಿನ ಅಲಂ ಕಾರ ನಡೆ ಯುವುದು.

ಎಲೆಬೇತೂರಿನಲ್ಲಿ ವಿಶೇಷ ಪೂಜೆ
ತಾಲ್ಲೂಕಿನ ಎಲೆಬೇತೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಈಶ್ವರ ಸ್ವಾಮಿಗೆ ವಿಶೇಷವಾಗಿ ಭಸ್ಮ ಅರ್ಪಣೆ, ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಬಿಲ್ವಾರ್ಚನೆ ಮಹಾಮಂಗ ಳಾರತಿ ಪ್ರಸಾದ ವಿನಿಯೋಗ ನಡೆಯಿತು.

ಶಿವರಾತ್ರಿ : ನಗರದ ಶ್ರೀ ಕೇದಾರನಾಥ ದೇವಾಲಯದಲ್ಲಿ ವಿಶೇಷ ಪೂಜೆ
ನಗರದ ಹೊಂಡದ ಸರ್ಕಲ್, ತುಳಸಿ ಪಾರ್ಕ್ ಬಳಿಯ ಶ್ರೀ ಕೇದಾರನಾಥ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಶ್ರೀ ಗಣಪತಿ ಹೋಮ, ನವಗ್ರಹ ಪೂಜೆ, ನಂತರ ಶ್ರೀ ಸ್ವಾಮಿಗೆ ರುದ್ರಾಭಿಷೇಕ ನಡೆಯಿತು.

ತರಳಬಾಳು ಹುಣ್ಣಿಮೆ : ಯಶಸ್ವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದಿಸಲು ಇಂದು ಸಭೆ
ಭರಮಸಾಗರದಲ್ಲಿ ಈಚೆಗೆ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಸಮಿತಿ ಮತ್ತು ಕಾರ್ಯಕರ್ತರನ್ನು ಅಭಿನಂದಿಸಲು ಇಂದು ಬೆಳಿಗ್ಗೆ 11ಕ್ಕೆ ಭರಮಸಾಗರದ ನಿರಂಜನಮೂರ್ತಿಯವರ ಕಲ್ಯಾಣ ಮಂಟಪದಲ್ಲಿ ಶ್ರೀ ಜಗದ್ಗುರುಗಳವರ ಸಮ್ಮುಖದಲ್ಲಿ ಸಭೆಯನ್ನು ಕರೆಯಲಾಗಿದೆ

ಜಿಲ್ಲೆಯಲ್ಲಿ 1500 ಪ್ಲಾಸ್ಟಿಕ್, ಅರ್ಧ ಹೆಲ್ಮೆಟ್ ವಶಕ್ಕೆ : ಎಸ್ಪಿ ಎಚ್ಚರ
ಸುರಕ್ಷಿತವಲ್ಲದ ಪ್ಲಾಸ್ಟಿಕ್ ಮತ್ತು ಅರ್ಧ ಹೆಲ್ಮೆಟ್ಗಳನ್ನು ಇಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಅಂಗಡಿಗಳಲ್ಲಿ ಸುಮಾರು 1500 ಪ್ಲಾಸ್ಟಿಕ್, ಅರ್ಧ ಹೆಲ್ಮೆಟ್ಗಳನ್ನು ನಾಶಪಡಿಸುವ ಉದ್ದೇಶಕ್ಕಾಗಿ ವಶಕ್ಕೆ ಪಡೆಯಲಾಯಿತು.

ಜುಮ್ಲಾಪುರ : 60 ಅಡಿ ಆಳದ ಬಾವಿಗೆ ಬಿದ್ದ ಯುವಕನ ರಕ್ಷಣೆ
ತಾಲ್ಲೂಕಿನ ಜುಮ್ಮಾಪುರದಲ್ಲಿ 60 ಅಡಿ ಆಳದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆಯ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಮಲೇಬೆನ್ನೂರು : ಶಿವರಾತ್ರಿ ಆಚರಣೆ
ಮಲೇಬೆನ್ನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ಜರುಗಿದವು.

ಹರಿಹರ : ದ್ವಾದಶ ಜ್ಯೋತಿರ್ಲಿಂಗಗಳ ಮೆರವಣಿಗೆ
ಹರಿಹರ : ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ವತಿಯಿಂದ ಮಹಾ ಶಿವರಾತ್ರಿ ಪ್ರಯುಕ್ತ ಬೆಳಿಗ್ಗೆ ಶಿವ ಧ್ವಜಾರೋಹಣ, ಸಹಸ್ರಲಿಂಗ ದರ್ಶನ, ದ್ವಾದಶ ಜ್ಯೋತಿರ್ಲಿಂಗಗಳ ಉತ್ಸವದ ಮೆರವಣಿಗೆ ನಡೆಸಲಾಯಿತು.

ಕೊಟ್ಟೂರಿನಲ್ಲಿ ಸಂಭ್ರಮದ ಶಿವರಾತ್ರಿ
ಕೊಟ್ಟೂರು : ಮಹಾಶಿವರಾತ್ರಿಯ ದಿನವಾದ ಬುಧವಾರದಂದು ಕೊಟ್ಟೂರಿನ ಗದ್ದಿಕಲ್ಲೇಶ್ವರ ಈಶ್ವರ ಲಿಂಗ ಮೂರ್ತಿಗೆ ಮಹಿಳೆಯರು ಮತ್ತು ಪುರುಷರು ಪೂಜೆ ಅಭಿಷೇಕ ನೆರವೇರಿಸಿ ಭಕ್ತಿ ಸಮರ್ಪಿಸಿದರು.

ಕಲ್ಮಠ ಅವರಿಗೆ ಧಾರ್ಮಿಕ ಶಿರೋರತ್ನ ಪ್ರಶಸ್ತಿ
ಹರಪನಹಳ್ಳಿ : ತಾಲ್ಲೂಕಿನ ನೀಲಗುಂದದ ಗುಡ್ಡದ ಸಂಸ್ಥಾನ ಜಂಗಮಪೀಠದಿಂದ ಜರುಗಿದ ಜಂಗಮ ಜಾತ್ರೆಯ ಭಕ್ತ ಹಿತಚಿಂತನಾ ಸಮಾರಂಭದಲ್ಲಿ ಧಾರ್ಮಿಕ ಸಾಮಾಜಿಕ ಸೇವೆ ಪರಿಗಣಿಸಿ ಚಿರಸ್ತಿಹಳ್ಳಿ ಮಲ್ಲಿಕಾರ್ಜುನಸ್ವಾಮಿ ಕಲ್ಮಠ ಅವರಿಗೆ ಶ್ರೀ ಚನ್ನಬಸವ ಶಿವಯೋಗಿ ಮಹಾಸ್ವಾಮಿಗಳು `ಧಾರ್ಮಿಕ ಶಿರೋರತ್ನ' ಪ್ರಶಸ್ತಿ ಪ್ರದಾನ ಮಾಡಿದರು.

ಹರಿಹರದಲ್ಲಿ ಶ್ರದ್ಧಾ-ಭಕ್ತಿಯ ಮಹಾಶಿವರಾತ್ರಿ ಆಚರಣೆ
ಹರಿಹರ : ನಗರದ ಶ್ರೀ ಹರಿಹರೇಶ್ವರ ಸ್ವಾಮಿ, ನೂರ ಎಂಟು ಲಿಂಗೇಶ್ವರ ಸ್ವಾಮಿ, ಹರ ಮಠದ ಶಿವಲಿಂಗೇಶ್ವರ ಸ್ವಾಮಿ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ, ವಿಶೇಷ ರುದ್ರಾಭಿಷೇಕ, ಅಲಂಕಾರ, ಮಹಾಮಂಗಳಾರತಿ ಮುಂತಾದ ಪೂಜಾ ಕಾರ್ಯಗಳು ಶ್ರದ್ಧಾ - ಭಕ್ತಿಯಿಂದ ನಡೆದವು.

ಬಸವೇಶ್ವರ ವೈದ್ಯ ಕಾಲೇಜಿಗೆ ರ್ಯಾಂಕ್
ಚಿತ್ರದುರ್ಗ : ವೈದ್ಯಕೀಯ ಪರೀಕ್ಷೆಯಲ್ಲಿ ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಏಳು ರ್ಯಾಂಕ್ ಗಳು ಲಭಿಸಿವೆ.

ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವ ಸರ್ಕಾರಿ ಶಾಲೆಗಳು
ಚನ್ನಗಿರಿ : ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಹೆಣಗಾಡುತ್ತಿವೆ ಎಂದು ಹಿರಿಯ ಸಾಹಿತಿ ಡಾ.ಎ.ಬಿ. ರಾಮಚಂದ್ರಪ್ಪ ತಿಳಿಸಿದರು.

ಮಹಾಶಿವರಾತ್ರಿಯಂದು ಶಿವನಿಗೆ ವಿಶ್ರಾಂತಿಯ ಕಾಲ
ಮಹಾಶಿವರಾತ್ರಿಯನ್ನು ಭಾರತದಾದ್ಯಂತ ಆಚರಿಸುವ ವಿಶೇಷವಾದ ವೃತದ ಆಚರಣೆಯಾಗಿದೆ. ಮಹಾಶಿವರಾತ್ರಿ ಎಂದರೆ ಶಿವನ ವಿಶ್ರಾಂತಿಯ ಕಾಲವಾಗಿದೆ.

ಹೊನ್ನಾಳಿಯಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ
ಹೊನ್ನಾಳಿ : ಶಿವರಾತ್ರಿ ಅಂಗವಾಗಿ ಹಿರೇಕಲ್ಮಠದ ತೂಗುಯ್ಯಾಲೆ ಎದುರು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಅಧ್ಯಾತ್ಮಿಕ ಚಿತ್ರ ಪ್ರದರ್ಶನ, ದ್ವಾದಶ ಜ್ಯೋತಿರ್ಲಿಂಗಗಳ ದರ್ಶನದ ಮೂಲಕ ಪರಮಾತ್ಮನ ಅವತರಿಣಿಕೆಯ ವಿಚಾರಗಳನ್ನು ಪರಿಚಯಿಸ ಲಾಯಿತು

ಮಿಟ್ಲಕಟ್ಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಸಂವಾದ
ಇನ್ನರ್ವ್ಹೀಲ್ ಕ್ಲಬ್ ದಾವಣಗೆರೆ ವತಿಯಿಂದ ಮಿಟ್ಲಕಟ್ಟೆಯ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆರೋಗ್ಯ ಸಂವಾದವನ್ನು ಏರ್ಪಡಿಸಲಾಗಿತ್ತು.

ಜಗಳೂರಿನಲ್ಲಿ ಕ್ಯಾನ್ಸರ್ ಜಾಗೃತಿ ಜಾಥಾ
ಜಗಳೂರು : ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಇಲ್ಲಿನ ಎಸ್.ಎಂ.ವಿ. ವಿದ್ಯಾವರ್ಧಕ ಸಂಘ ಹಾಗೂ ಎನ್.ಎಂ.ಕೆ. ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು.

ಕಮಲಾಪುರ : ಎಸ್ಡಿಎಂಸಿ ಅಧ್ಯಕ್ಷರಾಗಿ ಗಣೇಶ್
ಹರಿಹರ ತಾಲ್ಲೂಕು ಕಮಲಾಪುರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ) ಅಧ್ಯಕ್ಷರಾಗಿ ಗಣೇಶ್ ಕಮಲಾಪುರ ಆಯ್ಕೆಯಾಗಿದ್ದಾರೆ.

ರಾಣೇಬೆನ್ನೂರು : ಇನ್ನರ್ವ್ಹೀಲ್ನಿಂದ ಕಲಿಕಾ ಸಾಮಗ್ರಿ ವಿತರಣೆ
ರಾಣೇಬೆನ್ನೂರು : ಇನ್ನರ್ವ್ಹೀಲ್ ಕ್ಲಬ್ ವತಿಯಿಂದ ನಗರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಕ್ಲಬ್ನ `ಹ್ಯಾಪಿ ಸ್ಕೂಲ್' ಯೋಜನೆಯಲ್ಲಿ ಕಲಿಕಾ ಹಾಗೂ ಆಟದ ಸಾಮಗ್ರಿಗಳನ್ನು ಜಿಲ್ಲಾ ಕಾರ್ಯದರ್ಶಿ ವಿರಾಜ್ ಕೊಟಕ್ ವಿತರಿಸಿದರು.

ಸಿಗಂಧೂರು ಬ್ರಿಡ್ಜ್ ಶೀಘ್ರ ಲೋಕಾರ್ಪಣೆ
ಶರಾವತಿ ಹಿನ್ನೀರಿನಲ್ಲಿ ನಿರ್ಮಾಣ ವಾಗುತ್ತಿರುವ 2.16 ಕಿ.ಮೀ ಉದ್ದದ `ಸಿಗಂಧೂರು ಸೇತುವೆ' ರೋಪ್ ವೇ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತ ತಲುಪಿದ್ದು, 3-4 ತಿಂಗಳಲ್ಲೇ ಲೋಕಾರ್ಪಣೆಗೊಳ್ಳಲಿದೆ ಎನ್ನಲಾಗುತ್ತಿದೆ.

ಕೋಡಿ ಕ್ಯಾಂಪ್ ಕೊಟ್ಟೂರೇಶ್ವರ ಮಠದಲ್ಲಿ ನಾಳೆ ಮಹಾಶಿವರಾತ್ರಿ ಅಮಾವಾಸ್ಯೆ
ದಾವಣಗೆರೆಯ ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ಇವರಿಂದ ಮಾಗಾನಹಳ್ಳಿ ಕೋಡಿ ಕ್ಯಾಂಪ್ ಬಳಿ ಇರುವ ಶ್ರೀ ಕೊಟ್ಟೂರೇಶ್ವರ ಮಹಾಸ್ವಾಮಿ ಪಾದಗಳಿಗೆ ಮಹಾಶಿವರಾತ್ರಿ ಪ್ರಯುಕ್ತ ನಾಡಿದ್ದು ದಿನಾಂಕ 28ರ ಶುಕ್ರವಾರ ಬೆಳಿಗ್ಗೆ 6.30ಕ್ಕೆ ಅಭಿಷೇಕ - ಪೂಜೆ ನಡೆಯಲಿದೆ.