June 18, 2019

ರಾಶಿ ಭವಿಷ್ಯ

ರಾಶಿ ಭವಿಷ್ಯ

ದಿನಾಂಕ: 16.06.2019 ರಿಂದ ದಿನಾಂಕ: 22.06.2019 ರವರೆಗೆ

– ಜಯತೀರ್ಥಾಚಾರ್ ವಡೇರ್, ದಾವಣಗೆರೆ.


ಮೇಷ:

ಅಶ್ವಿನಿ, ಭರಣಿ, ಕೃತ್ತಿಕಾ (ಚೂ.ಚೇ.ಚೋ..ಲಿ..ಲೇ.ಲೊ..)

ಧನಸಂಪಾದನೆ ಕಷ್ಟವಾದರೂ ಸೂಕ್ತ ಮಾರ್ಗ ಕಂಡು ಬರಲಿದೆ.  ನ್ಯಾಯಾಲಯದ ವಾಜ್ಯ ನಿಮ್ಮಂತೆ ಆಗಲಿವೆ. ಎದುರಾಳಿಗಳನ್ನು ಹೇಗೆ ಎದುರಿಸಬೇಕೆಂದು ಚಿಂತಿಸುವುದು ಉತ್ತಮ. ಸೋದರನಿಂದ ಹಗುರವಾದ ಮಾತು ಕೇಳಬೇಕಾದೀತು. ಮಕ್ಕಳಿಗೆ ಹೆಚ್ಚಿನ ಖರ್ಚು. ಕೌಟುಂಬಿಕ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಬಗೆಹರಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮ ಅಗತ್ಯ. ಪ್ರಯಾಣ ಬೇಡ. ವ್ಯವಹಾರದಲ್ಲಿ ಲಾಭ.

ಮಂಗಳವಾರ, ಗುರುವಾರ, ಶುಕ್ರವಾರ ಶುಭ ದಿನಗಳು.


ವೃಷಭ:

ಕೃತ್ತಿಕಾ, 2,3,4, ರೋಹಿಣಿ, ಮೃಗ 1,2 (.....ವಿ.ವು.ವೆ.ವೋ)

ಕೃಷಿ ಮಾರುಕಟ್ಟೆ ವಿಚಾರದಲ್ಲಿ ಎಚ್ಚರಿಕೆ ಅವಶ್ಯಕ. ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸಲು ಹೋಗಿ ನೀವು ಕಷ್ಟಕ್ಕೆ  ಸಿಲುಕಬೇಡಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ಮನೆ ರಿಪೇರಿಗೆ ಮೊದಲು ಆಲೋಚಿಸಿ. ಅಮೂಲ್ಯ ವಸ್ತು ಕಳೆದು ಹೋಗುವ ಸಂಭವ. ನವದಂಪತಿಗಳಲ್ಲಿ ಸಾಮರಸ್ಯ ಅಗತ್ಯ. ಉದ್ಯಮಿಗಳಿಗೆ ಸರ್ಕಾರದಿಂದ ಸಬ್ಸಿಡಿ. ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ. ಊಟೋಪಚಾರದಲ್ಲಿ ಚಾಪಲ್ಯ ಬೇಡ. ಆದಾಯ ಉತ್ತಮ.

ಭಾನುವಾರ, ಸೋಮವಾರ, ಶುಕ್ರವಾರ ಶುಭ ದಿನಗಳು.


ಮಿಥುನ:

3,4, ಆರಿದ್ರಾ, ಪುನರ್ವಸು 1,2,3, (.ಕಿ.ಕು., , .ಕೆ.ಕೋ..)

ಎದುರಾಗಬಹುದಾದ ಸಮಸ್ಯೆ ಮೊದಲೇ ಊಹಿಸಿ ತಕ್ಕ ಪರಿಹಾರ ಕಂಡುಕೊಳ್ಳಿ. ಉನ್ನತಾಧಿಕಾರಿಗಳು ಆತ್ಮಸಾಕ್ಷಿಗನುಗುಣವಾಗಿ ನಡೆದುಕೊಳ್ಳುವುದು ಒಳಿತು. ಗಣ್ಯರ ಪರಿಚಯದಿಂದ ಪ್ರತಿಷ್ಠೆ ಹೆಚ್ಚಳ. ಸಂಶೋಧಕ ಪ್ರಬಂಧಗಳಿಗೆ ವಿಶ್ವಮಾನ್ಯತೆ. ಅನುಭವಿಗಳ ಎದುರಿನಲ್ಲಿ ಅಹಂಕಾರ ಒಳ್ಳೆಯದಲ್ಲ. ಪಡೆದ ಸಾಲ ತೀರಿಸಲು ವ್ಯವಸ್ಥೆ ಮಾಡಿ. ಕೌಟುಂಬಿಕ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ.

ಭಾನುವಾರ, ಬುಧವಾರ, ಗುರುವಾರ ಶುಭ ದಿನಗಳು.


ಕಟಕ:

ಪುನ 4, ಪುಷ್ಯ, ಆಶ್ಲೇಷ (ಹಿ.ಹು.ಹೆ.ಹೂ..ಡಿ.ಡು.ಡೆ.ಡೋ)

ರಾಜಕಾರಣಿಗಳು ಸಾರ್ವಜನಿಕರೊಂದಿಗೆ ಗೌರವದಿಂದ ನಡೆದು ಕೊಳ್ಳಿ. ಹಲವು ವಿಷಯಗಳಿಗೆ ಪ್ರತಿಕ್ರಿಯೆ ಬೇಡ. ವ್ಯವಹಾರದಲ್ಲಿ ಧೈರ್ಯದಿಂದಿರಿ. ಮತ್ತೊಬ್ಬರನ್ನು  ಕೆರಳಿಸುವ ಮಾತುಗಳನ್ನಾಡಬೇಡಿ. ಶತ್ರುಗಳು ತಾವಾಗಿಯೇ ತಲೆ ಬಾಗುವರು. ಹಿರಿಯರೊಂದಿಗೆ ಪುಣ್ಯಕ್ಷೇತ್ರ ದರ್ಶನ. ಮಿತ್ರರೊಂದಿಗೆ ಸೌಹಾರ್ದತೆ ಹೆಚ್ಚಳ. ವೈದ್ಯವೃಂದದವರಿಗೆ ಹೆಚ್ಚಿನ ಆದಾಯ. ಲೇವಾದೇವಿ ವ್ಯವಹಾರದಲ್ಲಿ ಹೆಚ್ಚಿನ ಲಾಭ.

ಸೋಮವಾರ, ಮಂಗಳವಾರ, ಶುಕ್ರವಾರ ಶುಭ ದಿನಗಳು.


ಸಿಂಹ:

ಮಘ, ಪುಬ್ಬ, ಉತ್ತರ 1. (.ಮಿ.ಮು.ಮೋ.ವೆ..ಟಿ.ಟು.ಟೆ)

ಸರ್ವಜ್ಞನಂತೆ ವರ್ತಿಸುವುದರಿಂದ ಅಪಹಾಸ್ಯಕ್ಕೆ ಈಡಾಗುವಿರಿ. ಮಕ್ಕಳ ಭವಿಷ್ಯದ ಬಗ್ಗೆ ಮುಂದಾಲೋಚನೆ ಒಳಿತು. ಸರಿ-ತಪ್ಪು ತಿಳಿಯದೇ ದುಡುಕಬೇಡಿ. ಸರ್ಕಾರಿ ನೌಕರರಿಗೆ ಹೊರಬಹುದಾದ ಜವಾಬ್ದಾರಿಯ ಅರಿವು ಉತ್ತಮ. ಅನಿರೀಕ್ಷಿತ ಆರ್ಥಿಕ ಮುಗ್ಗಟ್ಟು. ಆಸ್ತಿ ಖರೀದಿ ವಿಷಯದಲ್ಲಿ ನಷ್ಟ ಎದುರು ಹಾಕಿಕೊಳ್ಳಬೇಡಿ. ಅತಿಯಾದ ಮನರಂಜನೆ ಒಳ್ಳೆಯದಲ್ಲ. ಲೆಕ್ಕಾಧಿಕಾರಿ ಗಳಿಗೆ ಬಿಡುವಿಲ್ಲದ ಕೆಲಸ. ಮಕ್ಕಳ ನಡಾವಳಿ ತುಸು ಬೇಸರ ತರಬಹುದು. ಅಪರಿ ಚಿತರೊಂದಿಗೆ ವ್ಯವಹಾರ ಜಾಗ್ರತೆ.

ಭಾನುವಾರ, ಸೋಮವಾರ, ಮಂಗಳವಾರ ಶುಭ ದಿನಗಳು.


ಕನ್ಯಾ:

ಉತ್ತರಾ 2,3,4, ಹಸ್ತಾ, ಚಿತ್ತಾ 1,2 (ಟೋ..ಪಿ.ಪು....ಪೆ.ಪೋ)

ಮಹಿಳೆಯರು ನಡೆಸುತ್ತಿರುವ ಉದ್ಯಮಗಳಿಗೆ ಹೆಚ್ಚಿನ ಲಾಭ. ಕೆಲಸ ಕಾರ್ಯಗಳಿಗೆ ಅಡ್ಡಿ ಮಾಡುವವರ ಬಗ್ಗೆ ಎಚ್ಚರ. ಮಗನಿಗೆ ನೌಕರಿ ದೊರೆಯಲಿದೆ. ಅವಿವಾಹಿತರು ಬರಲಿರುವ ಸಂಬಂಧ ಬಿಡುವುದು ಮೂರ್ಖತನ. ಆಮದು-ರಫ್ತು ವ್ಯವಹಾರದಲ್ಲಿ ತುಸು ನಷ್ಟ. ವಿದೇಶ ಪ್ರವಾಸದಿಂದ ಹೆಚ್ಚಿನ ಅನುಭವ. ಆಸ್ತಿ ಖರೀದಿಗೆ ಮೊದಲು ದಾಖಲೆ ಪರಿಶೀಲಿಸಿ. ವಾಹನ ಬಿಡಿಭಾಗ ವ್ಯಾಪಾರಕ್ಕೆ ಲಾಭ. ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ.

ಮಂಗಳವಾರ, ಬುಧವಾರ, ಗುರುವಾರ ಶುಭ ದಿನಗಳು. 


ತುಲಾ:

ಚಿತ್ತಾ 3,4, ಸ್ವಾತಿ, ವಿಶಾಖ 1,2,3 (.ರಿ.ರು.ರೆ.ರೊ..ತಿ.ತು.ತೆ.)

ಪ್ರೇಮಿಗಳು ತಮ್ಮ ಸಂಗಾತಿಯ ಸ್ಪಷ್ಟ ಅಭಿಪ್ರಾಯ ಪಡೆಯುವುದು ಉತ್ತಮ. ಕೃಷಿ ಉಪಕರಣ ವಹಿವಾಟು ಜೋರು-ಲಾಭ ಕಡಿಮೆ. ರಾಜಕಾರಣಿಗಳಿಗೆ ಮುಖಭಂಗ ಪ್ರಸಂಗ. ಸ್ನೇಹಿತರ ಸಲಹೆ ಧಿಕ್ಕರಿಸಬೇಡಿ. ಮಡದಿಯ ಆರೋಗ್ಯ ತಪಾಸಣೆ ಮಾಡಿಸಿ. ಸಿನಿಮಾ ತಾಂತ್ರಿಕ ವರ್ಗದವರಿಗೆ ಬಹು ಬೇಡಿಕೆ. ನಿರುದ್ಯೋಗಿಗಳಿಗೆ ಖಾಸಗಿ ಕಂಪನಿ ನೌಕರಿ ದೊರೆಯುವ ಸಂಭವ. ಸಲಹೆ ಕೇಳಿ ಬಂದವರಿಗೆ ಸಹಾಯ ನೀಡಿ. ಶಿವನಿಗೆ ರುದ್ರಾಭಿಷೇಕ ಮತ್ತು ಬಿಲ್ವಾರ್ಚನೆ ಮಾಡಿಸಿ. 


ವೃಶ್ಚಿಕ:

ವಿಶಾಖ 4, ಅನೂ, ಜೇಷ್ಠ (ತೊ..ನಿ.ನು.ನೆ.ನೋ..ಯಿ.ಯು.)

ಮತ್ತೊಬ್ಬರ ವೈಯಕ್ತಿಕ ವಿಚಾರಕ್ಕೆ ಕುತೂಹಲ ಬೇಡ. ಹಣಕಾಸಿನ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಹಲವು ಮಾರ್ಗಗಳಿವೆ. ಗಾಯಕರಿಗೆ, ವಾದ್ಯವೃಂದದವರಿಗೆ ಬೇಡಿಕೆ ಹೆಚ್ಚು. ಆತ್ಮಾವಲೋಕನಕ್ಕೆ ಒಳ್ಳೆಯ ಅವಕಾಶ. ಸೋದರಿ ಮಗನ ವಿದ್ಯಾಭ್ಯಾಸಕ್ಕೆ ನೆರವು ನೀಡುವಿರಿ. ಮಾಡುವ ಕೆಲಸಗಳಲ್ಲಿ ಶ್ರದ್ಧೆ ಕಡಿಮೆಯಾದೀತು. ನೇತ್ರ ಸಂಬಂಧಿ ಆರೋಗ್ಯ ಸಮಸ್ಯೆ ಕಾಡಲಿದೆ. ಇಷ್ಟದೇವತಾರಾಧನೆ ಮಾಡಿ ನೆಮ್ಮದಿ ಪಡೆಯಿರಿ. ಆರ್ಥಿಕ ಮೂಲದಲ್ಲಿ ತುಸು ಕಡಿತವಾಗಬಹುದು.

ಭಾನುವಾರ, ಮಂಗಳವಾರ, ಬುಧವಾರ ಶುಭ ದಿನಗಳು.


ಧನಸ್ಸು:

ಮೂಲ, ಪೂರ್ವಾಷಾಡ, ಉತ್ತರಾಷಾಡ,  (ಯೆ.ಯೋ. .ಬಿ.ಬು....ಬೆ.)

ಚಾಡಿ ಮಾತಾಡುವವರನ್ನು ದೂರವಿಟ್ಟರೆ ಕ್ಷೇಮ. ವ್ಯಾಪಾರದಲ್ಲಿ ಹೆಚ್ಚು ಶ್ರಮ ಪಡುವ ನಿಮಗೆ ಮಕ್ಕಳಿಂದ ನೆರವು. ಸದ್ಯದ ಮಟ್ಟಿಗೆ ವ್ಯವಹಾರದಲ್ಲಿ ಹೂಡಿಕೆ ಬೇಡ. ಮುಂದಾಲೋಚನೆಯಿಂದ ನಿರ್ಣಯ ತೆಗೆದುಕೊಳ್ಳಿ. ಸಹೋ ದ್ಯೋಗಿಗಳೊಂದಿಗೆ ಹೊಂದಿಕೊಳ್ಳದೆ ಬೇರೆ ದಾರಿಯಿಲ್ಲ. ಧರ್ಮಾಧಿಕಾರಿಗಳಿಗೆ ಜವಾಬ್ದಾರಿ ಹೆಚ್ಚು. ಸೋದರನ ಆಸ್ತಿ ಖರೀದಿಗೆ ನಿಮ್ಮಿಂದ ನೆರವು. ದುರಾಭ್ಯಾಸ ಗಳಿಂದ ದೂರವಿರುವುದು ಆರೋಗ್ಯಕರ.

ಬುಧವಾರ, ಗುರುವಾರ, ಶನಿವಾರ ಶುಭ ದಿನಗಳು.


ಮಕರ:

ಉತ್ತರಾಷಾಢ 2,3,4, ಶ್ರವಣ, ಧನಿಷ್ಠಾ 1,2 (ಜೊ..ಜಿ.ಜೆ.ಶಿ.ಶು.ಶೇ.ಶೋ..ಗಿ)

ಕುಟುಂಬದ ಸದಸ್ಯರಲ್ಲಿ ಸಹಮತಕ್ಕೆ ಕಷ್ಟ ಪಡಬೇಕಾದೀತು. ಹಿತಶತ್ರುಗಳು ನಿಮ್ಮ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವುದರಲ್ಲಿ ಯಶಸ್ವಿಯಾಗುವರು. ಮಗಳ ವಿವಾಹ ನಿಶ್ಚಿಸಲು ಸಕಾಲ. ಕಲಾಸಕ್ತರಿಗೆ ಉತ್ತಮ ಮಾರ್ಗದರ್ಶನ. ಲೆಕ್ಕಾಧಿಕಾರಿಗಳಿಗೆ ಮೇಲಿನ ಅಧಿಕಾರಿಗಳಿಂದ ಒತ್ತಡ. ಬದಲಿ ವ್ಯಾಪಾರದಿಂದ ನಷ್ಟ.  ರಿಯಲ್ ಎಸ್ಟೇಟ್ ನಿಂದ ಹೆಚ್ಚಿನ ಲಾಭ. ಮಡದಿಯ ಆರೋಗ್ಯದಲ್ಲಿ ತುಸು ವ್ಯತ್ಯಾಸ. ಆದಾಯದ ಮೂಲ ಹೆಚ್ಚಳ.

ಗುರುವಾರ, ಶುಕ್ರವಾರ, ಶನಿವಾರ ಶುಭ ದಿನಗಳು.


ಕುಂಭ:

ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ 1,2,3 (ಗು.ಗೆ.ಗೊ..ಸಿ.ಸು.ಸೆ.ಸೋ.)

ಸಿದ್ದ ಉಡುಪು ಮಾರಾಟದಲ್ಲಿ ಹೆಚ್ಚಳ. ಬೇಜವಾಬ್ದಾರಿತನದಿಂದ ಕೆಲಸ ಕಾರ್ಯಗಳಲ್ಲಿ ಹಿನ್ನಡೆ. ಬಹುದಿನಗಳ ಬಯಕೆ ಈಡೇರುವ ಸಂದರ್ಭ. ಹಣಕಾಸಿನ ವಿಚಾರದಲ್ಲಿ ಬಂಧುಗಳಿಂದ ಮೋಸ. ಕಂದಾಯ ಇಲಾಖೆ ನೌಕರರು ತಮ್ಮ ಕರ್ತವ್ಯದಲ್ಲಿ ಜಾಗೃತರಾಗಿರುವುದು ಲೇಸು. ಮಕ್ಕಳ ವಿದ್ಯಾಭ್ಯಾಸ ಪ್ರಗತಿ ತುಸು ನೆಮ್ಮದಿ ತರಲಿದೆ. ಬ್ಯಾಂಕ್ ನೀಡಲಿರುವ ಆರ್ಥಿಕ ನೆರವು ದುರುಪ ಯೋಗವಾಗದಂತೆ ನೋಡಿಕೊಳ್ಳಿ. ಬಿಟ್ಟು ಹೋಗಿದ್ದ ಬಾಂಧವ್ಯ ಮತ್ತೆ ಬೆಸೆಯ ಲಿದೆ. ಗಣೇಶನನ್ನು ಗರಿಕೆಯಿಂದ ಆರಾಧಿಸಿ.

ಸೋಮವಾರ, ಶುಕ್ರವಾರ, ಶನಿವಾರ ಶುಭ ದಿನಗಳು.


ಮೀನ:

ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ    (ದಿ.ದು....ದೆ.ದೋ...ಚಿ.)

ಒಡಹುಟ್ಟಿದವರು ಧನಸಹಾಯ ಕೋರಿ  ಬರುವರು. ಮೊದಲಿನಿಂದಲೂ ಸಮಸ್ಯೆ ಎಂದೇ ತಿಳಿದಿದ್ದ ಹಳೇ ಗಾಯ ಈಗ ವಾಸಿ. ಸಮಾಜ ಕಾರ್ಯಗಳಿಗೆ ನಿಮ್ಮಿಂದ ಹೆಚ್ಚಿನ ದೇಣಿಗೆ ಸಂದಾಯ. ಆದಾಯ ಎಷ್ಟೇ ಇದ್ದರೂ ತೃಪ್ತಿ ಇಲ್ಲ. ಪಶು ವೈದ್ಯಕೀಯ ವಿಜ್ಞಾನದಲ್ಲಿ ಮಹತ್ತರ ಸಂಶೋಧನೆ. ಬ್ಯಾಂಕ್ ನೌಕರರಿಗೆ ಕರ್ತವ್ಯ ದಲ್ಲಿ ಶ್ರದ್ಧೆ ತುಸು ಕಡಿಮೆ. ಅನಿರೀಕ್ಷಿತವಾಗಿ ಸಾಧು ಸಂತರ ದರ್ಶನ ಲಾಭ. ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿರಿ.

ಭಾನುವಾರ, ಮಂಗಳವಾರ, ಗುರುವಾರ ಶುಭ ದಿನಗಳು.