Category: ಜಗಳೂರು

ಚೆಕ್ ಪೋಸ್ಟ್ ಪರಿಶೀಲಿಸಿದ ಜಿಲ್ಲಾಧಿಕಾರಿ

ಜಗಳೂರು : ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರು ಜಗಳೂರು ತಾಲ್ಲೂಕಿನ ಕಾನನಕಟ್ಟೆ, ಮುಸ್ಟೂರು, ಬಿದರಿಕೆರೆ ಚೆಕ್ ಪೋಸ್ಟ್‌ಗಳನ್ನು ಇಂದು ಪರಿಶೀಲಿಸಿದರು.

ತಾರೇಹಳ್ಳಿಯಲ್ಲಿ ರಥೋತ್ಸವ

ಜಗಳೂರು ತಾಲ್ಲೂಕಿನ ತಾರೇಹಳ್ಳಿ ಗ್ರಾಮ ದಲ್ಲಿ ಶ್ರೀ ಲಕ್ಷ್ನಿ ರಂಗನಾಥ ಸ್ವಾಮಿ ಮಹಾರಥೋತ್ಸವವು ಇಂದು ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ನೆರವೇರಿತು.

ರಾಜಕೀಯದಲ್ಲಿ ಒಂದೇ ಪಕ್ಷದಲ್ಲಿ ದೃಢವಾಗಿದ್ದರೆ ಗೌರವ : ಶಾಸಕ ದೇವೇಂದ್ರಪ್ಪ

ಜಗಳೂರು : ರಾಜಕೀಯದಲ್ಲಿ ಪಕ್ಷ ಎಂಬುದು ತಾಯಿಯಿದ್ದಂತೆ. ದೃಢವಾಗಿ ಒಂದೇ ಪಕ್ಷಕ್ಕೆ ಸೀಮಿತವಾಗಿದ್ದರೆ  ಕಾರ್ಯಕರ್ತ ರಿಗೆ, ಮುಖಂಡರಿಗೆ ಉನ್ನತ ಸ್ಥಾನ ಸಿಗುವುದು ಖಚಿತ, ಘನತೆ ಗೌರವ ಹೆಚ್ಚಿಸುತ್ತದೆ  ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.

3.5 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಮ್ಮನಹಟ್ಟಿ ಕೆರೆ ಅಭಿವೃದ್ಧಿ

ಜಗಳೂರು : ತಾಲ್ಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ  ಕೆರೆಗೆ ತಡೆಗೋಡೆ ನಿರ್ಮಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.

ಬಾಳಿನ ಭಾಗ್ಯೋದಯಕ್ಕೆ ಧರ್ಮದ ಬೆಳಕು ಬೇಕು

ಜಗಳೂರು : ಬಾಳಿನ ಭಾಗ್ಯೋದಯಕ್ಕೆ ಧರ್ಮದ ಬೆಳಕು ಬೇಕು. ಪರಿಪೂರ್ಣದೆಡೆಗೆ ಕರೆದೊಯ್ಯುವುದೇ ನಿಜವಾದ ಧರ್ಮ. ಸಮರ ಜೀವನ ಅಮರ ಜೀವನವಾಗಲು ಸಂಸ್ಕಾರ, ಸದ್ವಿಚಾರಗಳ ಅವಶ್ಯಕತೆಯಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಬಿಜೆಪಿಗೆ ಸೇರ್ಪಡೆ

ಜಗಳೂರು : ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟಗೊಳ್ಳುವ ಕ್ಷಣಗಣನೆ ದಿನಗಳಲ್ಲಿ ಜಗಳೂರು ಕ್ಷೇತ್ರದಲ್ಲಿ ರಾಜಕೀಯ ದೃವೀಕರಣ ಆರಂಭಗೊಂಡಿದ್ದು, ಕಾಂಗ್ರೆಸ್ ಮಾಜಿ ಶಾಸಕ ಎಚ್.ಪಿ. ರಾಜೇಶ್ ಇಂದು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಕೆರೆ ಒತ್ತುವರಿ ಸ್ವಯಂ ಪ್ರೇರಿತ ತೆರವು: ಶಾಸಕ ಬಿ. ದೇವೇಂದ್ರಪ್ಪ ಶ್ಲ್ಯಾಘನೆ

ಜಗಳೂರು : ಸ್ವಗ್ರಾಮದಲ್ಲಿ ಕೆರೆಯಲ್ಲಿ ಒತ್ತುವರಿ ಮಾಡಿಕೊಂಡಿದ್ದ ರೈತರು ಸ್ವಯಂ ಪ್ರೇರಿತವಾಗಿ ಬಿಟ್ಟುಕೊಡುವ ಮೂಲಕ ಸಹಕರಿಸಿದ್ದಾರೆ. ಇದರ ಫಲವಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದವರು ಗೋಕಟ್ಟೆಯನ್ನು ಸುಂದರ ವಿನ್ಯಾಸದ ಕೆರೆ ನಿರ್ಮಾಣ ಮಾಡಿರುವುದು ಶ್ಲ್ಯಾಘನೀಯ ಕಾರ್ಯ

ಜಾತ್ರೆಗಳು ಕುಲ ಸಾಮ್ರಾಜ್ಯದ ಸಾಂಸ್ಕೃತಿಕ ಪರಂಪರೆಯ ಸೆಲೆಗಳು

ಜಗಳೂರು : ಬಯಲು ಸೀಮೆಯಲ್ಲಿನ ಜಾತ್ರೆಗಳು ಕುಲ ಸಾಮ್ರಾಜ್ಯದ ಸಾಂಸ್ಕೃತಿಕ ಪರಂಪರೆಯ ಸೆಲೆಗಳಾಗಿವೆ ಎಂದು ಸಂಸ್ಕೃತಿ ಚಿಂತಕ, ವಿಮರ್ಶಕ, ಅಂಕಣಕಾರ ಬಂಜಗೆರೆ ಜಯಪ್ರಕಾಶ್ ವ್ಯಾಖ್ಯಾನಿಸಿದರು.

ಕೊಡದಗುಡ್ಡದಲ್ಲಿ 14 ರಂದು ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮ ಸಭೆ

ಜಗಳೂರು : ತಾಲ್ಲೂಕಿನ ಪ್ರಸಿದ್ಧ ಕೊಡದಗುಡ್ಡ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಇದೇ ದಿನಾಂಕ 14ರಂದು ನೂತನವಾಗಿ ನಿರ್ಮಿಸಿರುವ ವಸತಿ ಗೃಹಗಳ ಉದ್ಘಾಟನೆ, ಕರಿಗಲ್ಲು ಸ್ಥಾಪನೆ, ಕಲ್ಯಾಣ ಮಂಟಪಕ್ಕೆ ಶಂಕು ಸ್ಥಾಪನೆ ಹಾಗೂ ಅಡ್ಡ ಪಲ್ಲಕ್ಕಿ ಮಹೋತ್ಸವ ಮತ್ತು ಧರ್ಮಸಭೆ ನಡೆಯಲಿದೆ

ಜಗಳೂರಿನಲ್ಲಿ ಕಾಂಗ್ರೆಸ್ ಬೆಂಬಲಿಗರ ಸಭೆ ಟಿಕೆಟ್ ಸಿಗುವ ವಿಶ್ವಾಸವಿದೆ : ವಿನಯ್ ಕುಮಾರ್

 ಜಗಳೂರು : ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರಿದ್ದು ನನಗೇ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಪಕ್ಷದ ಲೋಕಸಭಾ ಟಿಕೆಟ್ ಆಕಾಂಕ್ಷಿ ಜಿ.ಬಿ. ವಿನಯ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ನಿಧನಕ್ಕೆ ಮೇಣದ ಬತ್ತಿ ಹಚ್ಚಿ ಸಂತಾಪ

ಜಗಳೂರು : ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕನ್ನಡ ಚಲನಚಿತ್ರ ನಟ ಕೆ. ಶಿವರಾಮ್ ನಿಧನಕ್ಕೆ ಮೇಣದ ಬತ್ತಿ ಹಚ್ಚಿ ಸಂತಾಪ ಸೂಚಿಸಲಾಯಿತು.

error: Content is protected !!