ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ೃವಿಶೇಷ ಪೂಜೆ, ಅಭಿಷೇಕ ಮಾಡುವುದರ ಮೂಲಕ ಕೊರೊನಾ ವೈರಸ್ ಸೋಂಕು ರೋಗವನ್ನು ತಡೆಗಟ್ಟುವಂತೆ ಸಂಕಲ್ಪ ಮಾಡಲಾಯಿತು.
ಕೊರೊನಾ ದೂರಮಾಡಲು ದೇವಿ ಮೊರೆ
ಎಲ್ಲೆಡೆ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಹಾವಳಿಗೆ ಕಂಗಾಲಾಗಿರುವ ಜನತೆ ಇದೀಗ ಶಕ್ತಿ ದೇವತೆಯ ಮೊರೆ ಹೋಗಿದ್ದಾರೆ.
ಡಿಸಿ ಮಾರ್ಗಸೂಚಿ ಪಾಲಿಸಿ ವ್ಯಾಪಾರ ನಡೆಸಲು ಛೇಂಬರ್ ಮನವಿ
ಸರ್ಕಾರದ ಮಾರ್ಗಸೂಚಿಗಳನ್ವಯ ಕೆಂಪು ವಲಯದಲ್ಲಿ ಆರ್ಥಿಕತೆಗೆ ನೀಡಲಾಗಿರುವ ವಿನಾಯಿತಿಯನ್ನು ನಗರಕ್ಕೂ ಅನ್ವಯಿಸುವಂತೆ ವ್ಯಾಪಾರ, ವಹಿವಾಟುಗಳಿಗೆ ಜಿಲ್ಲಾಧಿಕಾರಿಗಳು ಅವಕಾಶ ನೀಡುವುದರ ಮೂಲಕ ವರ್ತಕರಿಗೆ ಸ್ಪಂದಿಸಿದ್ದಾರೆ ಎಂದು ಛೇಂಬರ್ ಆಫ್ ಕಾಮರ್ಸ್ ತಿಳಿಸಿದೆ
ಮದ್ಯಪ್ರಿಯರ ಕಾಟ: ಬೇಸತ್ತ ಗ್ರಾಮಸ್ಥರಿಂದ ಬಾರ್ ಬಂದ್
ಮದ್ಯಪ್ರಿಯರ ಕಾಟ ತಡೆಯದೇ ಬೇಸತ್ತ ಗ್ರಾಮಸ್ಥರು ಬಾರ್ ಬಂದ್ ಮಾಡಿಸಿದ ಘಟನೆ ತಾಲ್ಲೂಕಿನ ಜರೇಕಟ್ಟೆ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಮೂರು ಕೋವಿಡ್ ಲ್ಯಾಬ್
ಎಸ್.ಎಸ್. ಆಸ್ಪತ್ರೆಯಲ್ಲಿನ ಪಿಸಿಆರ್ ಲ್ಯಾಬ್ನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಕೊರೊನಾ ಲ್ಯಾಬ್ಗೆ ಚಾಲನೆ ನೀಡಿದರು
ಕೊರೊನಾ ವಾರಿಯರ್ಸ್ಗೆ ಹೂಮಳೆ
ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ಜಿಲ್ಲಾ ವೈದ್ಯರು, ನರ್ಸ್ ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ವತಿಯಿಂದ
ಸೀಲ್ ಡೌನ್ ಪ್ರದೇಶಗಳಲ್ಲಿ `ಡ್ರೋಣ್ ಕಣ್ಣು’
ದಾವಣಗೆರೆ, ಮೇ 6- ಕೊರೊನಾ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ 5 ಕಂಟೈನ್ಮೆಂಟ್ ಝೋನ್ಗಳನ್ನು ಈಗಾಗಲೇ ಸೀಲ್ಡೌನ್ ಮಾಡಲಾಗಿದ್ದು, ಅಲ್ಲಿನ ಜನರ ಸ್ಥಿತಿಗತಿ ಪರಿಶೀಲಿಸಲು ಜಿಲ್ಲಾಡಳಿತದಿಂದ ಡ್ರೋನ್ಗಳ ಬಳಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು. ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ತಂಡದೊಂದಿಗೆ ಸೀಲ್ಡೌನ್ ಪ್ರದೇಶವಾದ ಜಾಲಿನಗರದಲ್ಲಿ ಡ್ರೋನ್ ಪರಿವೀಕ್ಷಣೆ ಮತ್ತು ಸರ್ವೇಕ್ಷಣಾ ತಂಡದ ತಪಾಸಣೆ ಕಾರ್ಯ ಪರಿಶೀಲಿಸಲು ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಜನರು ಗುಂಪು ಸೇರುವುದನ್ನು ನಿಯಂತ್ರಿಸಲು ಹಾಗೂ...
ನಗರದಲ್ಲಿ ದೊರೆಯದ ಮದ್ಯ: ಹಳ್ಳಿಗಳತ್ತ ಪಾನಪ್ರಿಯರ ಓಟ
ದಾವಣಗೆರೆ, ಮೇ. 4- ನಗರದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಸುತ್ತ ಮುತ್ತಲಿನ ಹಳ್ಳಿಗಳು, ತಾಲ್ಲೂಕುಗಳಿಗೆ ದಾಂಗುಡಿ ಇಟ್ಟು ಮದ್ಯ ಖರೀದಿಸಿ ಬಂದಿದ್ದಾರೆ
ಬೇಜವಾಬ್ದಾರಿತನ ಸಲ್ಲದು: ಸಿರಿಗೆರೆ ಶ್ರೀ
ಮನೆಯಲ್ಲಿಯೇ ಇದ್ದು ಮನೆಯ ದೀಪ ಬೆಳಗಿಸಿರಿ. ಪುಣ್ಯ ಮಾಡಿ ಭಾರತದಲ್ಲಿ ಹುಟ್ಟಿದ್ದೀರಿ. ರಾತ್ರಿ ದೀಪ ಬೆಳಗಿಸಿ ಬೆಳಗಾದೊಡನೆ ಅಡ್ಡಾದಿಡ್ಡಿ ತಿರುಗಾಡುವ ಪಾಪ ಕೃತ್ಯವನ್ನು ಮಾಡಬೇಡಿ.
ಕಳಪೆ ಬೀಜ ಮಾರಿದರೆ ರೈತರನ್ನು ಕೊಂದಂತೆ
ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಸಮಯದಲ್ಲಿ ಕಳಪೆ ಬೀಜ ವಿತರಿಸಿದರೆ ರೈತರನ್ನು ನೇರವಾಗಿ ಕೊಲೆ ಮಾಡಿದಂತಾಗುತ್ತದೆ.