ಕರ್ನಾಟಕ ಬಂಜಾರ ರಕ್ಷಣಾ ವೇದಿಕೆಯಿಂದ ಪ್ರಧಾನ ಕಾರ್ಯದರ್ಶಿ ಎನ್. ಅರುಣ್, ಕಾರ್ಯಾಧ್ಯಕ್ಷ ಬಸವರಾಜ ನಾಯ್ಕ ಹಾಗೂ ರಾಜ್ಯ ಸಾಂಸ್ಕೃತಿಕ ಕಾರ್ಯದರ್ಶಿ ಎನ್. ಪುನೀತ್ ಕುಮಾರ್ ಅವರನ್ನು ಉಚ್ಛಾಟನೆ ಮಾಡಿರುವುದಾಗಿ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಡಿ. ನಾಯ್ಕ ತಿಳಿಸಿದ್ದಾರೆ.
Category: ಸುದ್ದಿ ಸಂಗ್ರಹ
ಭತ್ತದ ಬೆಳೆ ನಿರ್ವಹಣೆಗೆ ರೈತರಿಗೆ ಸಲಹೆ
ಜಿಲ್ಲೆಯಾದ್ಯಂತ ಭತ್ತದ ಬೆಳೆಯು ಬೆಳವಣಿಗೆ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ನಿರೀಕ್ಷಿತ ಇಳುವರಿ ಪಡೆಯಲು ರೈತ ಬಾಂಧವರು ನಿರ್ದಿಷ್ಟ ನಿರ್ವಹಣಾ ಕ್ರಮಗಳನ್ನು ಅನುಸರಿಸುವಂತೆ ಕೃಷಿ ಇಲಾಖೆ ರೈತರಿಗೆ ಸಲಹೆಗಳನ್ನು ನೀಡಿದೆ.
ನವಜಾತ ಶಿಶು ಕಳವು ಪ್ರಕರಣದ ಅಹೋರಾತ್ರಿ ಧರಣಿ ತಾತ್ಕಾಲಿಕ ಹಿಂಪಡೆ
ನಗರದ ನಗರದ ಹಳೇ ಸರ್ಕಾರಿ ಮಹಿಳಾ ಹೆರಿಗೆ ಆಸ್ಪತ್ರೆಯಲ್ಲಿ ಕಳೆದ 15 ದಿನಗಳ ಹಿಂದೆ ನವಜಾತ ಶಿಶು ಕಳುವಾಗಿರುವ ಪ್ರಕರಣ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆಸಲಾಗುತ್ತಿದ್ದ ಅಹೋರಾತ್ರಿ ಧರಣಿಯನ್ನು ಇಂದು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
ಬಿಐಹೆಚ್ಇ ಡಿಪಾರ್ಟ್ಮೆಂಟ್ ಆಫ್ ಕಾಮರ್ಸ್ ಕಾಲೇಜಿಗೆ ಸಿಎ ಫಲಿತಾಂಶ
ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಫೌಂಡೇಷನ್ ಪರೀಕ್ಷೆಯಲ್ಲಿ ನಗರದ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ ಡಿಪಾರ್ಟ್ಮೆಂಟ್ ಆಫ್ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿ ಅಭಿಷೇಕ್ ಎ. ಜಾಧವ್ ಅವರು ತೇರ್ಗಡೆ ಹೊಂದಿದ್ದಾರೆ
ಯುವ ಜನರಲ್ಲಿ ದೇಶಭಕ್ತಿ ಜಾಗೃತಿ ಕೋಮಲ ಪಾಟೀಲ ಸೋಲೋ ರೈಡ್
ಹುಬ್ಬಳ್ಳಿ ಬಿವಿಬಿ ಎಂಜಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ (ರಾಣೇಬೆನ್ನೂರು ರಾಜೇಶ್ವರಿ ನಗರದ) ಕೋಮಲ ಪಾಟೀಲ ಇವರು ರಸ್ತೆ ಸುರಕ್ಷತೆ, ಜಾಗೃತಿ ಹಾಗೂ ಯುವ ಜನರಲ್ಲಿ ದೇಶಭಕ್ತಿ ಮೂಡಿಸುವ ಉದ್ದೇಶದಿಂದ ನಾಳೆ ದಿನಾಂಕ 8ರ ಮಂಗಳವಾರ ನಗರದಿಂದ ಬೈಕ್ನಲ್ಲಿ ಏಕಾಂಗಿಯಾಗಿ ದೇಶ ಪರ್ಯಟನೆಗೆ (ಸೋಲೋ ರೈಡ್) ಹೊರಟಿದ್ದಾರೆ.
ಹರಿಹರ ಕಸಾಪಕ್ಕೆ ನೇಮಕ
ಹರಿಹರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಡಿ.ಎಂ. ಮಂಜುನಾಥಯ್ಯ ನೇಮಕಗೊಂಡಿದ್ದಾರೆ.
ಬ್ಯಾಂಕ್ ಖಾತೆಗೆ ಪಾನ್ ಕಾರ್ಡ್ ಅಪ್ಡೇಟ್ ನೆಪ
ಬ್ಯಾಂಕ್ ಖಾತೆಗೆ ಪಾನ್ ಕಾರ್ಡ್ ಅಪ್ ಡೇಟ್ ಮಾಡುವಂತೆ ಲಿಂಕ್ ಮೆಸೇಜ್ ಕಳುಹಿಸಿದ್ದನ್ನೇ ನಂಬಿದ ಇಂಜಿನಿಯರ್ ಅವರ ಬ್ಯಾಂಕ್ ಖಾತೆಯಲ್ಲಿದ್ದ 6 ಲಕ್ಷಕ್ಕೂ ಅಧಿಕ ಹಣವನ್ನು ಅಪರಿಚಿತರು ಆನ್ ಲೈನ್ ಮುಖೇನ ದೋಚಿ ವಂಚಿಸಿರುವ ಬಗ್ಗೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೋಗರತ್ನ ಪರಶುರಾಮಪ್ಪಗೆ `ಸಮಾಜ ಸೇವಾಶ್ರೀ’ ಪ್ರಶಸ್ತಿ
ನಗರದ ಎಸ್ ಎಎಸ್ಎಸ್ ಯೋಗ ಫೆಡರೇಷನ್ ಸಂಸ್ಥಾಪಕ ಅಧ್ಯಕ್ಷ ಯೋಗ ರತ್ನ ಎನ್. ಪರಶುರಾಮಪ್ಪ ಅವರಿಗೆ `ಸಮಾಜ ಸೇವಾಶ್ರೀ' ಪ್ರಶಸ್ತಿ ಪ್ರದಾನ ಮಾಡಲಾಯಿತು.
ಚೆಂಬೆಳಕಿನ ಕವಿ ಕಣವಿ ಇನ್ನಿಲ್ಲ
ಹುಬ್ಬಳ್ಳಿ : 'ಚೆಂಬೆಳಕಿನ ಕವಿ' ಎಂದು ಹೆಸರಾದ ಹಿರಿಯ ಕವಿ ಡಾ. ಚನ್ನವೀರ ಕಣವಿ ಅವರು ಬುಧವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.
ರಾಣೇಬೆನ್ನೂರು : ಆಕಸ್ಮಿಕ ಅಗ್ನಿ ಅವಘಡ ; ಕಬ್ಬಿನ ಬೆಳೆ ಭಸ್ಮ
ರಾಣೇಬೆನ್ನೂರು, ಫೆ.13- ನಗರದ ಹೊರ ವಲಯದ ಗಂಗಾಪುರ ರಸ್ತೆಯ ಶನೈಶ್ಚರ ಮಂದಿರದ ಬಳಿ ರೈತ ಅರುಣಕುಮಾರ ಕೊಪ್ಪದರವರಿಗೆ ಸೇರಿದ ಕಬ್ಬಿನ ಹೊಲಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕಬ್ಬು, 15 ಕ್ವಿಂಟಾಲ್ ಜೋಳ, ಪೈಪ್, ಬೇವಿನ ಮರ ಸೇರಿದಂತೆ ಲಕ್ಷಾಂತರ ರೂ.ಗಳಷ್ಟು ಹಾನಿಯಾಗಿದೆ.