ಅತ್ಯಾತಿ ಟೆಕ್ನಾಲಜೀಸ್ ಸಂಸ್ಥೆ ವತಿಯಿಂದ ನಗರದ ಬಾಪೂಜಿ ಎಂಬಿಎ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನವನ್ನು ಆಚರಿಸಲಾಯಿತು.
ಕಬಳಿಸಿದ ಜಾಗ ಹಿಂತಿರುಗಿಸಲು ಮನವಿ
ಹೊಸಕುಂದವಾಡ ಗ್ರಾಮದ ಆಂಜಿನಪ್ಪ ಎಂಬುವವರಿಂದ ಅಂಗನವಾಡಿ ಕೇಂದ್ರ ಹಾಗೂ ಹಿಟ್ಟಿನ ಗಿರಣಿ ಇರುವ ಸರ್ಕಾರಿ ಜಾಗವನ್ನು ಕಬಳಿಸಿದ್ದು, ಅದನ್ನು ಬಿಡಿಸಿ ಕೊಡುವಂತೆ ಗ್ರಾಮಸ್ಥರು ಇಂದು ಜಿಲ್ಲಾಡಳಿತ, ನಗರಾ ಡಳಿತ, ತಾಲ್ಲೂಕು ಅಡಳಿತಕ್ಕೆ ಮನವಿ ಸಲ್ಲಿಸಿದರು.
ಐಸಿಟಿಯೊಂದಿಗೆ ಬಿಐಇಟಿ ನೂತನ ಒಪ್ಪಂದ
ವಿದ್ಯಾರ್ಥಿಗಳ ಸರ್ವತೋಮುಖ ಶಿಕ್ಷಣಕ್ಕೆ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ಫೆ. 17 ರಂದು ಐಸಿಟಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಜಿಲ್ಲಾಡಳಿತದಿಂದ ಕವಿ ಶ್ರೀ ಸರ್ವಜ್ಞ ಜಯಂತಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತ್ರಿಪದಿ ಕವಿ ಶ್ರೀ ಸರ್ವಜ್ಞ ಜಯಂತಿಯನ್ನು ಭಾನುವಾರ ಜಿಲ್ಲಾಡಳಿತ ಭವನದಲ್ಲಿ ಸರಳವಾಗಿ ಆಚರಿಸಲಾಯಿತು.
ಶ್ರೀ ವಿನಾಯಕ ದೇವಸ್ಥಾನ ಅಭಿವೃದ್ಧಿಗೆ ಸಹಾಯ ಧನ
ನಗರದ ಶ್ರೀ ಶಂಕರ ವಿಹಾರ ಬಡಾವಣೆ ಬಿ ಬ್ಲಾಕ್ನ ಶ್ರೀ ಸರ್ವ ಸಿದ್ಧಿ ವಿನಾಯಕ ದೇವಸ್ಥಾನದ ಕಟ್ಟಡ ಅಭಿವೃದ್ಧಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ 1 ಲಕ್ಷ ರೂ.ಗಳನ್ನು
ಡಿ.ಡಿ. ಮುಖಾಂತರ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಶ್ರೀನಿವಾಸ್, ಸೇವಾ ಸಮಿತಿ ಗೌರವಾಧ್ಯಕ್ಷರಾದ ಆಶಾ ಉಮೇಶ್ ಹಾಗೂ ಅಧ್ಯಕ್ಷ ಮಹೇಶ್ವರಯ್ಯ ಅವರಿಗೆ ಹಸ್ತಾಂತರಿಸಲಾಯಿತು.
ಸಿದ್ದಮ್ಮನಹಳ್ಳಿಯಲ್ಲಿ ಶೇಂಗಾ ಬೆಳೆ ಪ್ರಾತ್ಯಕ್ಷಿಕೆ
ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಜಗಳೂರು ತಾಲ್ಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಎಣ್ಣೆಕಾಳು ಯೋಜನೆ ಅಡಿಯಲ್ಲಿ ಗುಚ್ಛ ಗ್ರಾಮಗಳ ಶೇಂಗಾ ಬೆಳೆಯಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದರು.
ಭಾರತ ವಿಶ್ವ ಗುರುವಾಗಲು ಮೌಲ್ಯಾಧಾರಿತ ಶಿಕ್ಷಣ ಅಗತ್ಯ
ಮೌಲ್ಯಾಧಾರಿತ ಶಿಕ್ಷಣದಿಂದ ಭಾರತವನ್ನು ಮತ್ತೊಮ್ಮೆ ವಿಶ್ವಗುರುವಾಗಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದ್ದು, ಅದಕ್ಕಾಗಿ ಎಲ್ಲರ ಸಹಕಾರ ಅಗತ್ಯವಿದೆ
ತಾಯಿ, ಜನ್ಮ ಭೂಮಿ, ಮಾತೃ ಭಾಷೆ ಸ್ವರ್ಗಕ್ಕಿಂತ ಮಿಗಿಲು
ಹರಿಹರ ನಗರದಲ್ಲಿ ಸೋಮವಾರ ಸಂಜೆ ಬೀಸಿದ ಭಾರೀ ಗಾಳಿ ಹಾಗೂ ಮಳೆ ಯಿಂದಾಗಿ ಆರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಮರ ಬಿದ್ದು ಐದು ವಾಹನಗಳು ಜಖಂಗೊಂಡಿವೆ.
ಶಿಕ್ಷಣ ಸಂಸ್ಥೆಗಳಿಂದ ಉದ್ಯೋಗಗಳ ಸೃಷ್ಟಿ
ಶಿಕ್ಷಣ ಸಂಸ್ಥೆಗಳನ್ನು ಉದ್ಯೋಗ ಸೃಷ್ಟಿಯ ತಾಣಗಳನ್ನಾಗಿ ಮಾಡುವುದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯ ಉದ್ದೇಶ ಎಂದು ಆಂಧ್ರಪ್ರದೇಶ ವಿಜಯನಗರ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ತೇಜಸ್ವಿ ವಿ. ಕಟ್ಟೀಮನಿ ಹೇಳಿದರು.
ಸೇವೆಯೊಂದಿಗೆ ಕಪ್ಪು ಪಟ್ಟಿ ಧರಿಸಿ ಶಿಕ್ಷಕರ ಪ್ರತಿಭಟನೆ
ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಇಂದು ಕೈಗೆ ಕಪ್ಪು ಪಟ್ಟಿ ಧರಿಸಿ, ತಮ್ಮ ಸೇವೆಯ ಜೊತೆಯಲ್ಲಿಯೇ ಸರ್ಕಾರದ ಗಮನ ಸೆಳೆದರು.