ನ್ಯಾಮತಿ : ತಾಲ್ಲೂಕಿನ ಕುರುವ ಗಡ್ಡೆ ರಾಮೇಶ್ವರ ರಥೋತ್ಸವದಲ್ಲಿ ಪಾಲ್ಗೊಳ್ಳಲು ಮಾದನಬಾವಿ ಗ್ರಾಮಸ್ಥರು ಬೀರಲಿಂಗೇಶ್ವರ ಸ್ವಾಮಿ, ರಂಗನಾಥ ಸ್ವಾಮಿ, ಮುರುಡಲಿಂಗೇಶ್ವರ ಸ್ವಾಮಿ ಉತ್ಸವ ಮೂರ್ತಿಗಳನ್ನು ಪಕ್ಕದ ಬಸವನಹಳ್ಳಿ ಗ್ರಾಮದ ಮುಖಾಂತರ ಮೆರವಣಿಗೆ ಮೂಲಕ ತೆರಳುವಾಗ ಎರಡೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು, ಕಲ್ಲು ತೂರಾಟ ನಡೆದಿದೆ.
Category: ಅಪರಾಧ
ಅಂತರ್ ಜಿಲ್ಲಾ ಕಳ್ಳರ ಬಂಧನ : 14 ಬೈಕ್ ವಶ
ಮಲೇಬೆನ್ನೂರು : ಇಲ್ಲಿನ ಪೊಲೀಸ್ ಠಾಣೆಯ ಪೊಲೀಸರು ಮೂವರು ಅಂತರ್ ಜಿಲ್ಲಾ ಕಳ್ಳತನದ ಆರೋಪಿತರನ್ನು ಬಂಧಿಸಿ ಹರಪನಹಳ್ಳಿ, ದಾವಣಗೆರೆ, ಹೊನ್ನಾಳಿ, ಹರಿಹರ ಗ್ರಾಮಾಂತರ ಮತ್ತು ಶಿರಾಳಕೊಪ್ಪ ಪೊಲೀಸ್ ಠಾಣೆಗಳಲ್ಲಿ ನಡೆದಿದ್ದ ಒಟ್ಟು 18 ಪ್ರಕರಣಗಳನ್ನು ಭೇದಿಸಿ 7,41,500 ರೂ. ಬೆಲೆ ಬಾಳುವ ಓಮ್ನಿ ವ್ಯಾನ್ ಹಾಗೂ 66,500 ರೂ. ನಗದು ಹಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆಂದು ದಾವಣಗೆರೆ ಜಿಲ್ಲಾ ಎಎಸ್ಪಿ ಆರ್.ಬಿ. ಬಸರಗಿ ತಿಳಿಸಿದ್ದಾರೆ.
ಪರಿಚಿತನಂತೆ ನಟಿಸಿ ಸಂಚು ರೂಪಿಸಿ ದರೋಡೆ
ಪರಿಚಿತನಂತೆ ನಟಿಸಿ ಸಂಚು ರೂಪಿಸಿದ್ದ ಆರೋಪಿತನೋರ್ವ ನಾಲ್ವರ ಜೊತೆ ಸೇರಿ ದರೋಡೆ ಮಾಡಿದ್ದು, ಐವರ ಪೈಕಿ ನಾಲ್ವರು ಪೊಲೀಸರ ಅತಿಥಿಯಾಗಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಬಂಗಾರದ ವ್ಯಾಪಾರಿಯ ಸಹೋದರನ ಕೊಲೆಗೈದ ಪರಿಚಿತ ಆಭರಣ ತಯಾರಕ
ಬಂಗಾರದ ಒಡವೆಯನ್ನು ತಯಾರಿಸದ ಕಾರಣ ಬಂಗಾರ ವಾಪಸ್ ನೀಡುವಂತೆ ಕೇಳಿದ್ದಕ್ಕೆ ಒಡವೆ ನೀಡಿದ್ದ ಪರಿಚಿತ ಬಂಗಾರದ ವ್ಯಾಪಾರಿಯ ಸಹೋದರನಿಗೆ ಸೋಡಾದಲ್ಲಿ ಸೈನೈಡ್ ಹಾಕಿ ಕೊಲೆ ಮಾಡಿದ ಪ್ರಕರಣವನ್ನು ಬೇಧಿಸಿರುವ ಇಲ್ಲಿನ ಬಡಾವಣೆ ಪೊಲೀಸರು, ಆರೋಪಿ ಆಭರಣ ತಯಾರಕನನ್ನು ಬಂಧಿಸಿದ್ದಾರೆ.
ಮೂವರು ಅಂತರಾಜ್ಯ ಕಳ್ಳರ ಸೆರೆ
10 ಮನೆ ಗಳ್ಳತನ ಪ್ರಕರಣಗಳನ್ನು ಬೇಧಿಸಿರುವ ಹರಿಹರ ನಗರ ಪೊಲೀಸರು ಮೂವರು ಅಂತರಾಜ್ಯ ಕಳ್ಳರನ್ನು ಬಂಧಿಸಿ, ಒಟ್ಟು 22 ಲಕ್ಷದ 92 ಸಾವಿರ ರೂ. ಮೌಲ್ಯದ ಚಿನ್ನಾ ಭರಣ, ನಗದು ವಶಪಡಿಸಿಕೊಂಡಿದ್ದಾರೆ.
ಬೈಪಾಸ್ನಲ್ಲಿ ರಸ್ತೆ ಅಪಘಾತ ಸಾವು, ಓರ್ವನ ಸ್ಥಿತಿ ಗಂಭೀರ
ಟೈರ್ ಸ್ಫೋಟಗೊಂಡ ಪರಿಣಾಮ ಒಣ ಮೆಣಸಿನಕಾಯಿ ಸಾಗಿಸುತ್ತಿದ್ದ ವಾಹನವೊಂದು ಪಲ್ಟಿಯಾಗಿ ಓರ್ವ ವ್ಯಾಪಾರಿ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರಭಾಗದ ಶಾಮನೂರು ಬಳಿಯ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಇಂದು ಸಂಭವಿಸಿದೆ.
ಸ್ನೇಹಿತನ ಕೊಲೆ : ಅಪರಾಧಿಗೆ ಶಿಕ್ಷೆ
ಬೈದಿದ್ದಕ್ಕೆ ಸ್ನೇಹಿತನನ್ನೇ ಚಾಕುವಿನಿಂದ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನಾದ ಆತ್ಮೀಯ ಗೆಳೆಯನಿಗೆ ಇಲ್ಲಿನ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 6 ವರ್ಷದ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ರೈಲ್ವೇ ಹಳಿ ಮೇಲೆ ಫೋಟೋ ಶೂಟ್ ರೈಲು ಡಿಕ್ಕಿ : ಸ್ಥಳದಲ್ಲೇ ಬಾಲಕ ಸಾವು
ರೈಲ್ವೇ ಹಳಿ ಮೇಲೆ ಫೋಟೋ ಶೂಟ್ ಗೆ ನಿಂತ ಬಾಲಕನೋರ್ವ ರೈಲು ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಲ್ಲಿನ ಡಿಸಿಎಂ ಟೌನ್ ಶಿಪ್ ಬಳಿ ಇಂದು ಸಂಜೆ ನಡೆದಿದೆ.
ಕೆರೆಗೆ ಉರುಳಿದ ಕಾರು : ಪ್ರಾಣಾಪಾಯದಿಂದ ಪಾರು
ಚಾಲಕನ ನಿಯಂತ್ರಣ ತಪ್ಪಿದ ಕಾರು ಕೆರೆಗೆ ಉರುಳಿ ಬಿದ್ದು ಮೂವರು ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಲ್ಲಿಗೆ ಸಮೀಪದ ಬಾತಿ ಕೆರೆಯಲ್ಲಿ ಇಂದು ನಡೆದಿದೆ.
ಸೈಕಲ್ಗೆ ಕಾರು ಡಿಕ್ಕಿ: ಸವಾರನಿಗೆ ಗಾಯ
ನಗರದ ಡೆಂಟಲ್ ಕಾಲೇಜು ಬಳಿಯ ಬಾಲಕರ ವಸತಿ ನಿಲಯದ ಬಳಿ ಕಾರೊಂದು ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದ ಘಟನೆ ಭಾನುವಾರ ರಾತ್ರಿ 10.15ರ ವೇಳೆಗೆ ನಡೆದಿದೆ. ಸೈಕಲ್ ಮುಂಭಾಗ ಜಖಂಗೊಂಡಿದ್ದು, ಸವಾರ ಗಾಯಗೊಂಡಿದ್ದಾನೆ.