Category: ದಾವಣಗೆರೆ

Home ದಾವಣಗೆರೆ

ಯುಪಿಎಸ್ಸಿ ರ‍್ಯಾಂಕ್ ವಿದ್ಯಾರ್ಥಿಗೆ ಸಿದ್ದೇಶ್ವರ ಅಭಿನಂದನೆ

ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 101ನೇ ರಾಂಕ್ ಪಡೆದು, ಕರ್ನಾಟಕ್ಕೆ 2ನೇ ರ‍್ಯಾಂಕ್ ಪಡೆದಿರುವ ನಗರದ ಸೌಭಾಗ್ಯ ಬೀಳಗಿಮಠ ಅವರನ್ನು ಸಂಸದ ಜಿ.ಎಂ.ಸಿದ್ದೇಶ್ವರ ಅವರು ಸನ್ಮಾನಿಸಿ, ಗೌರವಿಸಿದರು.

ಸೌಭಾಗ್ಯ ಬೀಳಗಿಮಠಗೆ ರ‍್ಯಾಂಕ್ ಡಾ. ಪ್ರಭಾ ಮಲ್ಲಿಕಾರ್ಜುನ್‌ ಸನ್ಮಾನ

ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 101ನೇ ರ‍್ಯಾಂಕ್  ಪಡೆದು, ಕರ್ನಾಟಕಕ್ಕೆ 2ನೇ ರ‍್ಯಾಂಕ್ ಪಡೆದಿರುವ ನಗರದ ಸೌಭಾಗ್ಯ ಬೀಳಗಿಮಠ ಅವರ ನಿವಾಸಕ್ಕೆ ಎಸ್.ಎಸ್. ಕೇರ್ ಟ್ರಸ್ಟ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತೆರಳಿ ಅಭಿನಂದಿಸಿದರು.

ಜ್ಯೂ. ಮೋದಿ ಶೋಷಿತರ ನಾಯಕನ ಮನೆಗೆ ಬಿಜೆಪಿ ಪ್ರಚಾರ

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ನಾಮಪತ್ರ ಸಲ್ಲಿಸುವ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಉಡುಪಿ ಜಿಲ್ಲೆಯ ಹಿರಿಯಡ್ಕ ಗ್ರಾಮದ ಸದಾಶಿವನಾಯ್ಕ ಅವರು ಜ್ಯೂನಿಯರ್ ಮೋದಿ ಎಂದೇ ಹೆಸರಾಗಿದ್ದು, ಶೋಷಿತರ ವರ್ಗಗಳ ನಾಯಕ ಬಾಡದ ಆನಂದರಾಜ್ ನಿವಾಸಕ್ಕೆ ಇಂದು ದಿಢೀರ್ ಭೇಟಿ ನೀಡಿದ್ದರು. 

ಹರಿಹರ ತಾ. ಹಲವು ಗ್ರಾಮಗಳಲ್ಲಿ ಮಳೆ, ಗಾಳಿ

ಹರಿಹರ ನಗರ ಸೇರಿದಂತೆ ತಾಲ್ಲೂಕಿನ ಗುತ್ತೂರು, ಕೊಂಡಜ್ಜಿ, ಗಂಗನಹರಸಿ, ನಾಗೇನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮುಂಗಾರು ಮಳೆ‌ ಗಾಳಿ ರಭಸವು ಹೆಚ್ಚಿನ ಪ್ರಮಾಣದಲ್ಲಿ ಆಗಿದ್ದರಿಂದ, ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಮತ್ತು  ಅನೇಕ ಮರಗಳು ನೆಲಕ್ಕೆ ಉರುಳಿ ಬಿದ್ದಿದ್ದು , ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. 

ರ‍್ಯಾಂಕ್ ವಿಜೇತ ಸೌಭಾಗ್ಯ ಬೀಳಗಿ ಮಠ್ ಮಕ್ಕಳಿಗೆ ಸ್ಫೂರ್ತಿ

ಒಂದರಿಂದ ಎಸ್ಸೆಸ್ಸೆಲ್ಸಿ ಎಂಬುದು ಒಂದು ಕಟ್ಟಡದ ಭದ್ರ ಅಡಿಪಾಯ ಇದ್ದಂತೆ. ಆದ್ದರಿಂದ ಮಕ್ಕಳಿಗೆ ಪ್ರಾಥಮಿಕ, ಪ್ರೌಢ ಶಿಕ್ಷಣ ಬಹಳ ಮುಖ್ಯ ಎಂದು ಬಿಜೆಎಂ ಶಾಲೆ ಕಾರ್ಯದರ್ಶಿ ಮಂಜುನಾಥ ಅಗಡಿ ಹೇಳಿದರು. 

ಪಕ್ಷೇತರ ಅಭ್ಯರ್ಥಿ ವಿನಯ್ ಪರ ಪ್ರಚಾರ

ನಗರದ ಕೆಬಿ ಬಡಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಪರ ಕಕ್ಕರಗೊಳ್ಳದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ, ತಾಲ್ಲೂಕು ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶಕುಂತಲಾ ಅವರ ನೇತೃತ್ವದಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಕಾಂಗ್ರೆಸ್ ಪರವಾಗಿ ಜೈನ್, ಪಟೇದಾರ್, ವಿಷ್ಣು ಸಮಾಜದ ಸಭೆ

ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಾ|| ಪ್ರಭಾ ಮಲ್ಲಿಕಾರ್ಜುನ್ ಪರ ರಾಜ್ ರೆಸಿಡೆನ್ಸಿಯಲ್ಲಿ ಜೈನ, ಪಟೇದಾರ್ ಮತ್ತು ವಿಷ್ಣು ಸಮಾಜದವರ ಸಭೆ ಕಳೆದ ವಾರ ನಡೆಯಿತು.

ಎಲೆಬೇತೂರಿನಲ್ಲಿ ಶ್ರೀ ಸವಗದ್ದಿಗೆ ಸಂಗಮೇಶ್ವರ ಮಹಾಸ್ವಾಮಿ ರಥೋತ್ಸವ

ಎಲೆಬೇತೂರು ಗ್ರಾಮದಲ್ಲಿ  ಸಂಜೆ ಶ್ರೀ ಸವಗದ್ದಿಗೆ ಸಂಗಮೇಶ್ವರ ಮಹಾಸ್ವಾಮಿಯ ರಥೋತ್ಸವ ಭಕ್ತರ, ಗ್ರಾಮಸ್ಥರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಯುಪಿಎಸ್‌ಸಿ ಟಾಪರ್‌ ಸೌಭಾಗ್ಯ ಬೀಳಗಿಮಠ ಅವರಿಗೆ ಸಿದ್ಧಗಂಗಾ ಸಂಸ್ಥೆ ಅಭಿನಂದನೆ

ನಗರದ ಸಿದ್ಧಗಂಗಾ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಸೌಭಾಗ್ಯ ಬೀಳಗಿಮಠ್ ಅವರು ಯುಪಿಎಸ್‌ಸಿಯಲ್ಲಿ ರಾಷ್ಟ್ರಮಟ್ಟದಲ್ಲಿ 101 ನೇ ರ‍್ಯಾಂಕ್ , ರಾಜ್ಯ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

ನಗರದ ಶ್ರೀ ಕೋದಂಡ ರಾಮ ದೇವಸ್ಥಾನದಲ್ಲಿ ತೊಟ್ಟಿಲೋತ್ಸವ

ನಗರದ ಮಂಡಿಪೇಟೆ ಶ್ರೀ ಕೋದಂಡ ರಾಮ ದೇವಸ್ಥಾನದಲ್ಲಿ 107 ನೇ ವರ್ಷದ ರಾಮ ನವಮಿಯಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ತೊಟ್ಟಿಲೋತ್ಸವ, ಪ್ರಸಾದ ವಿತರಣೆ, ವಿಶೇಷ ಅಲಂಕಾರದೊಂದಿಗೆ ರಾಮನವಮಿ ನಡೆಯಿತು.

ರನ್ನರ್‌ ಆಫ್‌ ಸ್ಥಾನ ಪಡೆದ ಕರ್ನಾಟಕ ಬ್ಯಾಸ್ಕೆಟ್‌ಬಾಲ್‌ ಬಾಲಕಿಯರ ತಂಡ

ನಗರದ ಜವಳಿ ವ್ಯಾಪಾರಿ ಬಿ.ಎಸ್‌. ಚನ್ನಬಸಪ್ಪ ಅಂಡ್‌ ಸನ್ಸ್‌ ಮಾಲೀಕ ಬಿ.ಸಿ. ಉಮಾಪತಿ ಮತ್ತು ಮಾಜಿ ಸಚಿವ ವಿ. ಸೋಮಣ್ಣ ಅವರ ಮೊಮ್ಮಗಳು ಕು. ಖುಷಿ ನವೀನ್‌ ಅವರು ಕರ್ನಾಟಕ ಬ್ಯಾಸ್ಕೆಟ್‌ಬಾಲ್‌ ಬಾಲಕಿಯರ ತಂಡದ ನಾಯಕಿಯಾಗಿ ಪ್ರತಿನಿಧಿಸಿ, 383 ಯೂತ್‌ ನ್ಯಾಷನಲ್‌ ಬಾಸ್ಕೆಟ್‌ಬಾಲ್‌ ಚಾಂಪಿನ್‌ಶಿಪ್‌ನಲ್ಲಿ ಕರ್ನಾಟಕ ತಂಡ ರನ್ನರ್‌ ಆಫ್‌ ಸ್ಥಾನ ಪಡೆದಿರುವುದಲ್ಲದೇ, ಬೆಸ್ಟ್‌ ಶೂಟರ್‌ ಆಗಿಯೂ ಆಯ್ಕೆಯಾಗಿದ್ದಾರೆ.

error: Content is protected !!