Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ
Post

ಅಪಘಾತದಲ್ಲಿ ಮೃತರಾದವರಿಗೆ ಕೆ.ಆರ್.ಜೆ. ಸಂತಾಪ

ಮಕರ ಸಂಕ್ರಾಂತಿ ದಿನದಂದು ಎಳ್ಳು-ಬೆಲ್ಲ ಸವಿದು ಸಂತೋಷದಿಂದ ಗೋವಾ ಪ್ರವಾಸಕ್ಕೆ ಹೊರಟಿದ್ದ ನಗರದ ಪ್ರತಿಷ್ಠಿತ ಮನೆತನದ ಹೆಣ್ಣುಮಕ್ಕಳ ವಾಹನ ಅಪಘಾತಕ್ಕೀಡಾಗಿ 11 ಜನರು ಮೃತಪಟ್ಟಿದ್ದು, ರಾಜ್ಯಸಭೆಯ ಮಾಜಿ ಸದಸ್ಯ ಕೆ.ಆರ್. ಜಯದೇವಪ್ಪ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Post

ಕರಾಮುವಿ : ಆನ್‍ಲೈನ್ ಮೂಲಕ ಪರಿಚಯ ಕಾರ್ಯಕ್ರಮ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮುಕ್ತ ಗಂಗೋತ್ರಿ, ಮೈಸೂರು ಇವರ ವತಿಯಿಂದ 2020-21ನೇ ಸಾಲಿನ ಜುಲೈ ಆವೃತ್ತಿಯಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗಾಗಿ  ನಾಡಿದ್ದು ದಿನಾಂಕ 18 ರಿಂದ 20 ರವರೆಗೆ ಮೂರು ದಿನದ ಪರಿಚಯ ಕಾರ್ಯಕ್ರಮವನ್ನು ಆನ್ ಲೈನ್ ಮುಖಾಂತರ ಏರ್ಪಡಿಸಿದೆ.

Post

ಅಪಘಾತದಿಂದ ಮನಸ್ಸಿಗೆ ಆಘಾತ: ಕುಲಪತಿ ಪ್ರೊ. ಹಲಸೆ

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಶೈಲಿಯಲ್ಲಿ ಸೇವೆ ಸಲ್ಲಿಸುತ್ತಾ ಗುರುತಿಸಿಕೊಂಡಿದ್ದ ಮಹಿಳೆಯರು ಅಕಾಲಿಕವಾಗಿ ಮೃತಪಟ್ಟಿದ್ದು ಮನಸ್ಸಿಗೆ ಆಘಾತವನ್ನುಂಟು ಮಾಡಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ವಿಷಾದ ವ್ಯಕ್ತಪಡಿಸಿದ್ದಾರೆ.

Post

ಜಿಲ್ಲೆಯಲ್ಲಿ ಇಂದಿನಿಂದ `ಒಂದು ಮುಷ್ಠಿ ಮಣ್ಣು ಹುತಾತ್ಮರ ಹೆಸರಿನಲ್ಲಿ’ ಅಭಿಯಾನ

ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಹುತಾತ್ಮರಾದ ರೈತರ ಪರವಾಗಿ ಒಂದು ಮುಷ್ಠಿ ಮಣ್ಣು ಹುತಾತ್ಮರ ಹೆಸರಿನಲ್ಲಿ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ವತಿಯಿಂದ ಅಭಿಯಾನ ಆರಂಭಿಸಲಾಗಿದೆ

Post

ಪಾದಯಾತ್ರೆ ಮೂಲಕ ಒತ್ತಡ ಸರಿಯಲ್ಲ : ಮುರುಗೇಶ್ ನಿರಾಣಿ

ಏಕಾಏಕಿ ಪಾದಯಾತ್ರೆ ಮಾಡಿ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವಂತೆ ಒತ್ತಡ ಹಾಕುವುದು ಸರಿಯಲ್ಲ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ನಮ್ಮ ಸಮುದಾಯವನ್ನು 2ಎಗೆ ಸೇರಿಸಲು ಒಪ್ಪಿಗೆ ನೀಡುವ ಭರವಸೆಯನ್ನು ಕೊಟ್ಟಿದ್ದಾರೆ.

Post

ಸ್ವರ್ಣ ಜಯಂತಿ ರೋಜಗಾರ್‌ ಯೋಜನೆ ಮುಂದುವರೆಸಲು ಒತ್ತಾಯ

ಕಳೆದ 4-5 ತಿಂಗಳಿನಿಂದ ಸ್ಥಗಿತಗೊಂಡಿರುವ ಸ್ವರ್ಣ ಜಯಂತಿ ರೋಜಗಾರ್ ಯೋಜನೆಯನ್ನು ಮುಂದುವರೆ ಸುವಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ಒತ್ತಾಯಿಸಿದೆ.

Post

ರಾಣೇಬೆನ್ನೂರು ತಾಲ್ಲೂಕು ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ

ರಾಣೇಬೆನ್ನೂರು : ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ್, ತಹಶೀಲ್ದಾರ್ ಬಸನಗೌಡ ಕೋಟೂರ ಹಾಗೂ ಚುನಾವಣಾ ಆಯೋಗದ ಸಿಬ್ಬಂದಿ ವರ್ಗದವರ ಉಪಸ್ಥಿತಿಯಲ್ಲಿ ಅವಧಿ ಪೂರ್ಣಗೊಳ್ಳದ 7 ಪಂಚಾಯ್ತಿಗಳು  ಸೇರಿದಂತೆ ತಾಲ್ಲೂಕಿನ ಒಟ್ಟು 40 ಪಂಚಾಯ್ತಿಗಳ ಅಧ್ಯಕ್ಷ- ಉಪಾದ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿಗೊಳಿಸಲಾಯಿತು.

Post

ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಮಹಮದ್ ತೌಫಿಕರ್ ದ್ವಿಶತಕ

ಆರು ದಿನಗಳ ಆಹ್ವಾನಿತ ಅಂತರ್ ಜಿಲ್ಲಾ ಮಟ್ಟದ 16 ವರ್ಷದೊಳಗಿನ ಬಾಲಕರ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯ ಎರಡನೇ ದಿನದ ಆಟದಲ್ಲಿ ದಾವಣಗೆರೆ ಕ್ರಿಕೆಟ್ ಅಕಾಡೆಮಿಯ ಮಹಮದ್ ತೌಫಿ ಕರ್ ಇಂದು ಮತ್ತೊಂದು ಶತಕ ಬಾರಿಸುವ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಶತಕ ಸಿಡಿಸಿದರು.