ಹರಪನಹಳ್ಳಿ : ಹಸಿವಿಗೆ ಅನ್ನ ಎಷ್ಟು ಮುಖ್ಯವೋ ಸಾಕ್ಷರತೆಯ ಅರಿವು ಅಷ್ಟೇ ಮುಖ್ಯ. ಪುಲೆ ದಂಪತಿ ಅಂದು ಹಚ್ಚಿದ ಸಾಕ್ಷರತಾ ಜ್ವಾಲೆ ನಿರಂತರವಾಗಿ ಬೆಳಗುತ್ತಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಹಕಾರ್ಯದರ್ಶಿ ಬಸವರಾಜ್ ಸಂಗಪ್ಪನವರ್ ಹೇಳಿದರು.
ಹರ ಜಾತ್ರೆ ವೈಚಾರಿಕ ವಿಚಾರ ಜಾತ್ರೆಯಾಗಲಿದೆ
ಹರಪನಹಳ್ಳಿ : 2ಎ ಮೀಸಲಾತಿ ದೊರಕಿಸಿಕೊಳ್ಳುವ ವಿಚಾರದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಹರಿಹರ ಹಾಗೂ ಕೂಡಲ ಸಂಗಮ ಎರಡೂ ಪೀಠಗಳ ಉದ್ದೇಶವೂ ಒಂದೇ ಆಗಿದ್ದು, ಹೋರಾಟದ ವಿಧಾನ ಮಾತ್ರ ಬೇರೆ ಯಾಗಿವೆ
ಮೂಲಭೂತ ಸೌಕರ್ಯಗಳಿಗೆ ಅದ್ಯತೆ ನೀಡಬೇಕು
ಹರಪನಹಳ್ಳಿ : ಜನ ಆರ್ಥಿಕವಾಗಿ ಸಬಲರಾದರೆ ಮಾತ್ರ ದೇಶ ಅಭಿವೃದ್ದಿ ಪಥದಲ್ಲಿ ಸಾಗುತ್ತದೆ. ತಮ್ಮ ತಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಮೊದಲ ಆದ್ಯತೆಯಾಗಿ ಒಳ ಚರಂಡಿ, ಶುದ್ಧ ಕುಡಿಯುವ ನೀರು, ರಸ್ತೆ ಅಭಿವೃದ್ದಿ, ಬೀದಿ ದೀಪ ಸೇರಿದಂತೆ, ಜನರ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.
ಅರ್ಹರಿಗೆ ಮನೆಗಳನ್ನು ನೀಡಬೇಕು
ಹರಪನಹಳ್ಳಿ : ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಈ ಕ್ಷೇತ್ರದಲ್ಲಿ 10 ಸಾವಿರ ಅರ್ಜಿಗಳು ಬಂದಿದ್ದು, ಶೀಘ್ರವೇ ಮನೆಗಳು ಮಂಜೂರಾಗುತ್ತವೆ. ಮಂಜೂರಾದ ಮನೆಗಳನ್ನು ಅರ್ಹರಿಗೆ ನೀಡಬೇಕು ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ನೂತನ ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯರಿಗೆ ಹೇಳಿದರು.
35 ಗ್ರಾ.ಪಂ.ಗಳ ಚುನಾವಣಾ ಫಲಿತಾಂಶ ಪ್ರಕಟ
ಹರಪನಹಳ್ಳಿ ತಾಲ್ಲೂಕಿನ 35 ಗ್ರಾಮ ಪಂಚಾಯ್ತಿಗಳ ಚುನಾವಣಾ ಫಲಿತಾಂಶ ಕೊನೆಗೂ ಹೊರಬಿದ್ದಿದ್ದು, ಚುನಾವಣಾ ಕಣದಲ್ಲಿದ್ದ 1,369 ಅಭ್ಯರ್ಥಿಗಳ ಪೈಕಿ ಕೆಲ ಅಭ್ಯರ್ಥಿಗಳು ಗೆದ್ದು ಬೀಗಿದರೆ, ಇನ್ನು ಕೆಲ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.
ಕ್ರೈಸ್ತ ಸಮುದಾಯದ ಕಷ್ಟ, ಸುಖಗಳಿಗೆ ಸ್ಪಂದನೆ: ಎಂ.ಪಿ.ಲತಾ
ಹರಪನಹಳ್ಳಿ : ಕೊರೊನಾ ಸಂಕಷ್ಟದಿಂದ ಸಾಕಷ್ಟು ಕಷ್ಟ ನಷ್ಟಗಳನ್ನು ಜನ ಎದುರಿಸುವಂತಾಗಿದೆ ಎಂದು ಹೇಳಿದ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಈ ಸಮುದಾಯದ ಆಗು, ಹೋಗುಗಳಿಗೆ ಸ್ಪಂದಿಸುತ್ತೇನೆ ಎಂದರು.
ಹರಪನಹಳ್ಳಿ ಟಿಎಪಿಸಿಎಂಎಸ್ಗೆ 10 ಲಕ್ಷ ರೂ. ಲಾಭ
ಹರಪನಹಳ್ಳಿ : 2019-20ನೇ ಸಾಲಿನಲ್ಲಿ ಸಂಘವು ರಸಗೊಬ್ಬರ ಹಾಗೂ ಪೆಟ್ರೋಲ್ ಬಂಕ್ ವ್ಯವಹಾರ ಲಾಭ ಹಾಗೂ ಬಾಡಿಗೆ, ಬಿಡಿಪಿ ಯೋಜನೆಯಡಿಯಲ್ಲಿ ನಿವ್ವಳ ಲಾಭ ರೂ. 10,11,876 ಗಳಿಸಿದೆ ಎಂದು ಅಧ್ಯಕ್ಷ ಪಿ.ಪ್ರೇಮಕುಮಾರ್ ತಿಳಿಸಿದ್ದಾರೆ.
ಹರಪನಹಳ್ಳಿ ತಾಲ್ಲೂಕಿನಲ್ಲಿ ಕಾಂಗ್ರೆಸ್ಗೆ ಉತ್ತಮ ವಾತಾವರಣ : ಸುಭಾಷ್ಚಂದ್ರ
ಹರಪನಹಳ್ಳಿ ತಾಲ್ಲೂಕಿನಲ್ಲಿ ಕಾಂಗ್ರೆಸ್ಗೆ ಉತ್ತಮ ವಾತವಾರಣವಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ, ಕೂಲಿ ಹಾಗೂ ಜನ ವಿರೋಧಿ ಕಾಯ್ದೆಗಳ ವಿರುದ್ಧ ಮತದಾರರು ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ .
ಏಕ ರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ಹೋರಾಟ
ಹರಪನಹಳ್ಳಿ : ರಾಜ್ಯದಲ್ಲಿ ಏಕ ರೂಪ ಶಿಕ್ಷಣ ವ್ಯವಸ್ಥೆ ಜಾರಿಗಾಗಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಸಹ ಕಾರ್ಯದರ್ಶಿ ಎಚ್.ಎಸ್. ಚೇತನ್ ಹೇಳಿದರು.
ಗುಂಪುಗಾರಿಕೆಯಿಂದ ಪಕ್ಷ ಕಟ್ಟಲಾಗದು
ಹರಪನಹಳ್ಳಿ : ಗುಂಪುಗಾರಿಕೆಯಿಂದ ಪಕ್ಷ ಕಟ್ಟಲು ಸಾಧ್ಯವಿಲ್ಲ ಒಗ್ಗಟ್ಟಿನಿಂದ ಮಾತ್ರ ಪಕ್ಷ ಕಟ್ಟಲು ಸಾದ್ಯ ಎಂದು ಕೆಪಿಸಿಸಿ ವೀಕ್ಷಕ , ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಹೇಳಿದರು.