Category: ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ
ಹರಿಹರ ಪೌರಾಯುಕ್ತರಾಗಿ ಉದಯಕುಮಾರ್ ತಳವಾರ
Post

ಹರಿಹರ ಪೌರಾಯುಕ್ತರಾಗಿ ಉದಯಕುಮಾರ್ ತಳವಾರ

ಹರಿಹರ ನಗರಸಭೆಯ ಪೌರಾಯುಕ್ತರಾಗಿ ಉದಯ ಕುಮಾರ್ ತಳವಾರ ಅವರು ಇಂದು ಸಂಜೆ ನಗರಸಭೆಯ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಶ್ರೀಮತಿ ಎಸ್. ಲಕ್ಷ್ಮಿಅವರು ವರ್ಗಾವಣೆ ಯಾಗಿದ್ದು, ಅವರ ಸ್ಥಾನಕ್ಕೆ  ಉದಯಕುಮಾರ್ ತಳವಾರ ಆಗಮಿಸಿದ್ದಾರೆ.

ತಾಂಡಾ ನಿಗಮದ ನಿರ್ದೇಶಕರಾಗಿ ಎಸ್.ಪಿ. ಲಿಂಬ್ಯಾನಾಯ್ಕ್
Post

ತಾಂಡಾ ನಿಗಮದ ನಿರ್ದೇಶಕರಾಗಿ ಎಸ್.ಪಿ. ಲಿಂಬ್ಯಾನಾಯ್ಕ್

ಹರಪನಹಳ್ಳಿ : ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕರನ್ನಾಗಿ ಎಸ್.ಪಿ. ಲಿಂಬ್ಯಾನಾಯ್ಕ ಅವರನ್ನು ಶಾಸಕ ಜಿ.ಕರುಣಾಕರ ರೆಡ್ಡಿ  ಶಿಫಾರಸ್ಸಿನ ಮೇರೆಗೆ  ನೇಮಕ ಮಾಡಲಾಗಿದೆ.

ಪುಷ್ಕರ ಯೋಗದಲ್ಲಿ ವಚನಾನಂದ ಶ್ರೀ
Post

ಪುಷ್ಕರ ಯೋಗದಲ್ಲಿ ವಚನಾನಂದ ಶ್ರೀ

ಹನ್ನೆರಡು ವರ್ಷಗಳಿಗೊಮ್ಮೆ ಬರುವ ಪುಷ್ಕರ ಯೋಗದಲ್ಲಿ ನಗರದ ಪಂಚಮಸಾಲಿ ಜಗದ್ಗುರು ವಚನಾನಂದ ಶ್ರೀಗಳು ಇಲ್ಲಿನ ತುಂಗ ಭದ್ರಾ ನದಿಯಲ್ಲಿ ಮಿಂದು, ಅರ್ಚನ, ತರ್ಪಣ, ಅರ್ಪ ಣದೊಂದಿಗೆ ಯೋಗ, ಪ್ರಾಣಾಯಾಮ ಧ್ಯಾನಗೈದರು.

ಡಾ.ಮಂಜುನಾಥ ಕುರ್ಕಿ ಅವರಿಗೆ `ಕನ್ನಡ ಸಾಹಿತ್ಯ ರತ್ನ’ ಪ್ರಶಸ್ತಿ ಪ್ರದಾನ
Post

ಡಾ.ಮಂಜುನಾಥ ಕುರ್ಕಿ ಅವರಿಗೆ `ಕನ್ನಡ ಸಾಹಿತ್ಯ ರತ್ನ’ ಪ್ರಶಸ್ತಿ ಪ್ರದಾನ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಅವರು ಬೆಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೊಡಮಾಡುವ `ಕನ್ನಡ ಸಾಹಿತ್ಯ ರತ್ನ' ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಎಸ್ಸೆಸ್ ನಿವಾಸಕ್ಕೆ ಕೋಡಿಮಠದ ಶ್ರೀ
Post

ಎಸ್ಸೆಸ್ ನಿವಾಸಕ್ಕೆ ಕೋಡಿಮಠದ ಶ್ರೀ

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಇಂದು ನಗರಕ್ಕಾಗಮಿಸಿದ್ದ ಹಾರನಹಳ್ಳಿ ಕೋಡಿ ಮಠದ ಶ್ರೀ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. 

ಕೂಡ್ಲಿಗಿಯಲ್ಲಿ ಡಿಕೆಶಿಗೆ ಅದ್ದೂರಿ ಸ್ವಾಗತ
Post

ಕೂಡ್ಲಿಗಿಯಲ್ಲಿ ಡಿಕೆಶಿಗೆ ಅದ್ದೂರಿ ಸ್ವಾಗತ

ಬೆಂಗಳೂರಿನಿಂದ ಕೂಡ್ಲಿಗಿ ಮೂಲಕ ಹಾದು ಹೋಗುವ ಸಂದರ್ಭದಲ್ಲಿ ಕೂಡ್ಲಿಗಿ ಹೊರವಲಯದ ಮಾನಸ ಡಾಬಾ ಹತ್ತಿರದ ರಸ್ತೆಯಲ್ಲಿ ಕೂಡ್ಲಿಗಿಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾರ ತುರಾಯಿ ಹಾಕುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು.

ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗೆ ಪರೀಕ್ಷೆ
Post

ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗೆ ಪರೀಕ್ಷೆ

ಕೆಎಸ್ಆರ್‌ಪಿ ಹಾಗೂ ಐಆರ್‌ಬಿ ಪೊಲೀಸ್ ಕಾನ್‌ಸ್ಟೇಬಲ್ ಲಿಖಿತ ಪರೀಕ್ಷೆಯು ನಗರದ 17 ಪರೀಕ್ಷೆ ಕೇಂದ್ರಗಳಲ್ಲಿ ಇಂದು ನಡೆಯಿತು. ಒಟ್ಟು 7527 ಪರೀಕ್ಷಾ ಅಭ್ಯರ್ಥಿಗಳಲ್ಲಿ 4634 ಅಭ್ಯರ್ಥಿಗಳು ಹಾಜರಾಗಿದ್ದು, 2893 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು.