Author: Janathavani (Janathavani website)

Home Janathavani

ಮಾಧ್ಯಮಗಳು ಸುಧಾರಣೆಯ ದಾರಿ ದೀಪವಾಗಬೇಕು: ಬಸವರಾಜ ಹೊರಟ್ಟಿ

ಪ್ರಸಕ್ತ ರಾಜಕೀಯ ವ್ಯವಸ್ಥೆಯಲ್ಲಿ ಹಣವಿದ್ದವರೇ ಗೆಲ್ಲುವ ಪ್ರಮಾಣ ಶೇ.90ರಷ್ಟಿದೆ. ಈ ವ್ಯವಸ್ಥೆ ಸುಧಾರಣೆಯಾಗಬೇಕಾದರೆ ಮಾಧ್ಯಮಗಳೂ ತಮ್ಮ ಪಾತ್ರವನ್ನು ಸಶಕ್ತವಾಗಿ ನಿರ್ವಹಿಸಬೇಕಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ತಂತ್ರಜ್ಞಾನ ಬದಲಾದರೂ, ಮಾಧ್ಯಮದ ಮೂಲ ಆಶಯ ಬದಲಾಗಿಲ್ಲ

ಅಚ್ಚು ಮೊಳೆಯಿಂದ ಆರ್ಟಿಫಿಷಿಯಲ್ ಇಂಟಲಿಜೆನ್ಸ್‌ವರೆಗೆ ಪತ್ರಿಕಾ ವೃತ್ತಿ ತಾಂತ್ರಿಕವಾಗಿ ಬಹಳ ಬದಲಾವಣೆ ಕಂಡಿದೆ. ಆದರೆ ಮೂಲ ಆಶಯ ಮತ್ತು ಬದ್ದತೆ ಮಾತ್ರ ಬದಲಾಗಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.  

ದಾವಣಗೆರೆಯಲ್ಲಿರುವಂತಹ ಸುಂದರ, ಸುಸಜ್ಜಿತ ಕನ್ನಡ ಭವನ ಮೈಸೂರಿನಲ್ಲೂ ಇಲ್ಲ : ಡಾ. ಕೆ. ಚಿದಾನಂದಗೌಡ ಮೆಚ್ಚುಗೆ

ಇಲ್ಲಿರುವಂತಹ ಸುಂದರ ಹಾಗೂ ಸುಸಜ್ಜಿತವಾದ ಕನ್ನಡ ಭವನ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಇಲ್ಲ ಎಂದು ಕುವೆಂಪು ವಿವಿಯ ನಿವೃತ್ತ ಉಪಕುಲಪತಿ ಡಾ.ಕೆ. ಚಿದಾನಂದ ಗೌಡ ಹೇಳಿದರು.

ಸಾಮಾಜಿಕ ಜಾಲತಾಣಗಳ `ವೈರಲ್‌’ಗೆ ಬೇಕಿದೆ `ವ್ಯಾಕ್ಸಿನ್‌’

ಸಾಮಾಜಿಕ ಜಾಲತಾಣಗಳಿಂದಾಗಿ ಸುದ್ದಿಗೆ ಈಗ `ವೈರಲ್’ ಆಗುವ ಸೋಂಕು ಬಂದಿದೆ. ಇದಕ್ಕೆ ಸರ್ಕಾರ ನಿರ್ಬಂಧ ಹೇರುವ ಮೂಲಕ `ವ್ಯಾಕ್ಸಿನ್’ ನೀಡಬೇಕಿದೆ ಎಂದು  ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರು ಸ್ಥಾನಿಕ ಸಂಪಾದಕ ರವೀಂದ್ರ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

ಕಲ್ಯಾಣ ಶರಣರಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಸೇರಿದ್ದಾರೆ

12ನೇ ಶತಮಾನದಲ್ಲಿ ಜಗತ್ತಿಗೆ ಕಾಯಕ ಶ್ರದ್ಧೆಯನ್ನು ಪರಿಚಯಿಸಿದವರು ಕಲ್ಯಾಣದ ಶರಣರು. ಅವರಲ್ಲಿ ಒಬ್ಬರು ನಿಜಶರಣ ಅಂಬಿಗರ ಚೌಡಯ್ಯ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹೇಳಿದರು.

ಗೀತಾ ಎಸ್‌.ಕೆ

ದಾವಣಗೆರೆ ಎಂಸಿಸಿ ಎ ಬ್ಲಾಕ್‌, 13ನೇ ಮೇನ್‌, ಬಕ್ಕೇಶ್ವರ ಸ್ಕೂಲ್‌ ಎದುರಿನ ರಸ್ತೆ ವಾಸಿ ಶಿವಯೋಗಿ ಎಸ್‌.ಕೆ. (ಎಂ.ಎಸ್‌.ಶಿವಣ್ಣ) ಇವರ ಪತ್ನಿ ಶ್ರೀಮತಿ ಗೀತಾ ಎಸ್‌.ಕೆ. (59) ಇವರು ದಿನಾಂಕ 04.02.2024ರ ಭಾನುವಾರ ಮಧ್ಯಾಹ್ನ 3.15ಕ್ಕೆ ನಿಧನರಾದರು.

ಬಲ್ಲೂರು ಶಾಂತಮ್ಮ

ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮದ ದಿ. ಬಲ್ಲೂರು ಪುಟ್ಟಪ್ಪನವರ ಧರ್ಮಪತ್ನಿ ಶ್ರೀಮತಿ ಶಾಂತಮ್ಮ (65 ವರ್ಷ) ಇವರು ದಿನಾಂಕ 04.02.2024ರ ಭಾನುವಾರ ಸಂಜೆ 4.15ಕ್ಕೆ ನಿಧನರಾದರು.

8ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಿದರು.

ಸಮಾಜ ಸುಧಾರಣೆಗೆ ಕನಕದಾಸರಿಂದ ಸತತ ಯತ್ನ

ಹೊನ್ನಾಳಿ : ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಸಂತೋಷದಿಂದ ಲೋಕಾರ್ಪಣೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದರು.

ಅದ್ವಾನಿಗೆ `ಭಾರತ ರತ್ನ’ ಗೌರವ

ನವದೆಹಲಿ : ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅದ್ವಾನಿ ಅವರಿಗೆ ಭಾರತ ರತ್ನ ನೀಡುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಭಾರತ ರತ್ನವು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.

ವಚನಗಳ ಸಂರಕ್ಷಕರು ಶರಣ ಮಡಿವಾಳ ಮಾಚಿದೇವರು : ಅಮರೇಶ ಜಿ.ಕೆ.

ಕೊಟ್ಟೂರು : ತಾಲ್ಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ವಚನಕಾರ ಶಿವಶರಣ ಮಡಿವಾಳ ಮಾಚಿದೇವರ ಜಯಂತಿಯನ್ನು ಗುರುವಾರದಂದು ಕಾರ್ಯಕ್ರಮ ಆಚರಿಸಲಾಯಿತು.  ತಹಶೀಲ್ದಾರ್‌ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಜಿ.ಕೆ. ಅಮರೇಶ್‌ ಇವರು ಶಿವಶರಣ  ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಣೆ ಮಾಡಿ ಚಾಲನೆ ನೀಡಿದರು.  

ಮಕ್ಕಳಲ್ಲಿ ಸಂಗೀತ, ನಾಟ್ಯ, ಕ್ರೀಡೆಗಳಲ್ಲಿ ಆಸಕ್ತಿ ಮೂಡಿಸುವಂತೆ ಪ್ರೇರೇಪಿಸಿ

ಮಕ್ಕಳಲ್ಲಿ ಮೊಬೈಲ್ ಗೀಳು ಬೆಳೆಸದೇ ಸಂಗೀತ, ನಾಟ್ಯ, ಕ್ರೀಡೆಗಳಲ್ಲಿ ಆಸಕ್ತಿ ಮೂಡಿಸುವ ಜೊತೆಗೆ ಸನ್ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿ ಪೋಷಕರದ್ದಾಗಿದೆ ಎಂದು ಎಸ್.ಎಸ್. ಕೇರ್ ಟ್ರಸ್ಟ್ ಲೈಪ್ ಟ್ರಸ್ಟಿ, ಬಾಪೂಜಿ ಆಡಳಿತ ಮಂಡಳಿ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

error: Content is protected !!