Author: Janathavani (Janathavani website)

Home Janathavani

ನಗರದ ಕವಯತ್ರಿ ಸೌಮ್ಯ ದಯಾನಂದ ಅವರ `ಸಂಜೆ ಐದರ ಸಂತೆ’ ಕೃತಿ ಬಿಡುಗಡೆ

ಸ್ಥಳೀಯ ಉದಯೋ ನ್ಮುಖ ಕವಯತ್ರಿ ಸೌಮ್ಯ ದಯಾನಂದ ಅವರು ರಚಿ ಸಿರುವ ‘ಸಂಜೆ ಐದರ ಸಂತೆ’ ಕವನ ಸಂಕಲನವನ್ನು ಇತ್ತೀಚಿಗೆ ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಬಿಡುಗಡೆ ಮಾಡಿದರು.

ರಾಣೇಬೆನ್ನೂರಿನಲ್ಲಿ ನಾಳೆ ಅಂಬಿಗರ ಚೌಡಯ್ಯ ಜಯಂತಿ

ರಾಣೇಬೆನ್ನೂರು : ಇಲ್ಲಿನ ತಾಲ್ಲೂಕು ಗಂಗಾಮತ ಸಂಘದಿಂದ ಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು  ಇದೇ ದಿನಾಂಕ 10 ರಂದು ವರ್ತಕರ ಸಂಘದ ಸಮುದಾಯ ಭವನದಲ್ಲಿ  ಅಂಬಿಗರ ಚೌಡಯ್ಯ ಪೀಠದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಏರ್ಪಡಿಸಲಾಗಿದೆ

ಇನ್ನರ್‌ವ್ಹೀಲ್‌ನಿಂದ ಮಾಗನೂರು ಬಸಪ್ಪ ಶಾಲಾ ಮಕ್ಕಳಿಗೆ ಕಾರ್ಯಕ್ರಮ

ಇಲ್ಲಿನ ಇನ್ನರ್‌ವ್ಹೀಲ್ ಸಂಸ್ಥೆ ವಿದ್ಯಾನಗರ ಶಾಖೆಯಿಂದ  ಮಾಗನೂರು ಬಸಪ್ಪ ಶಾಲೆಯ ಹೆಣ್ಣು ಮಕ್ಕಳಿಗೆ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 

ಶ್ರೀ ಗೋಣಿ ಬಸವೇಶ್ವರ ಸ್ವಾಮಿ ಹೊರಮಠದಲ್ಲಿ ಇಂದು ಅವರಾತ್ರಿ ಅಮವಾಸ್ಯೆ

ಹರಿಹರ ತಾಲ್ಲೂಕಿನ ಗಂಗನರಸಿ ಶ್ರೀ ಗೋಣಿಬಸವೇಶ್ವರ ಸ್ವಾಮಿ ಹೊರಮಠದಲ್ಲಿ ಅವರಾತ್ರಿ ಅಮಾವಾಸ್ಯೆ ಪ್ರಯುಕ್ತ ಇಂದು ಬೆಳಿಗ್ಗೆ ಶ್ರೀ ಸ್ವಾಮಿಗೆ ಅಭಿಷೇಕ, ಪೂಜೆ, ಹೂವಿನ ಅಲಂಕಾರ ನಡೆಯುವುದು

ಇಂದು ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಪಟ್ಟಾಭಿಷೇಕ ಮಹೋತ್ಸವ

ಭಗೀರಥ ಪೀಠ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮಿಗಳ 25ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವವು ಇಂದು ಮತ್ತು ನಾಳೆ ನಡೆಯಲಿದೆ.

ಶ್ರೀ ಪುರಂದರ ದಾಸರ ಸಮೂಹ ಗಾಯನ ಸ್ಪರ್ಧೆ

ಬ್ರಾಹ್ಮಣ ಸಮಾಜ ಮಹಿಳಾ ವಿಭಾಗದಿಂದ ಶ್ರೀ ಪುರಂದರದಾಸರ ಹಾಗೂ ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವದ ಅಂಗವಾಗಿ ನಗರದ ರಿಂಗ್ ರಸ್ತೆಯಲ್ಲಿರುವ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಇದೇ ದಿನಾಂಕ 17ರ ಶನಿವಾರ ಶ್ರೀ ಪುರಂದರ ದಾಸರ ಸಮೂಹ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ.

ರಂಭಾಪುರಿ ಜಗದ್ಗುರುಗಳವರ ಪೀಠಾರೋಹಣ ವರ್ಧಂತಿ ಉತ್ಸವ

ಶ್ರೀ ಜಗದ್ಗುರು ರೇಣುಕಾಚಾರ್ಯರ 36 ಅಡಿ ಎತ್ತರದ ಮೂರ್ತಿ ಲೋಕಾರ್ಪಣೆ ಮಹಾಮಸ್ತ ಕಾಭಿಷೇಕ ಇದೇ ದಿನಾಂಕ 12 ಮತ್ತು 13 ರಂದು ಶಿಕಾರಿಪುರ ತಾಲ್ಲೂಕಿನ ಶ್ರೀ ಮಳೆ ಮಲ್ಲೇಶ್ವರಸ್ವಾಮಿ ಜಾಗೃತ ಸ್ಥಳ ಕಡೇನಂದಿಹಳ್ಳಿ ತಪೋಕ್ಷೇತ್ರ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ನಡೆಯುವುದು.

ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿ ಬಂಧನ 4.87 ಲಕ್ಷ ರೂ. ಮೌಲ್ಯದ ವಸ್ತುಗಳ ವಶ

ನಗರದ ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದು, ಆತನಿಂದ ವಿವಿಧ ಕಂಪನಿಯ 20 ಮೊಬೈಲ್‌ಗಳು ಬಂಗಾರದ ಆಭರಣಗಳು ಸೇರಿದಂತೆ 4.87 ಲಕ್ಷ ರೂ. ಬೆಲೆಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಗಡಿ ಚೌಡೇಶ್ವರಿ ದೇವಿಯ ವಾರ್ಷಿಕೋತ್ಸವ

ಶ್ರೀ ಬನ್ನಿಮಹಾಂಕಾಳಿ, ಶ್ರೀ ವಿನಾಯಕ, ಶ್ರೀ ಈಶ್ವರ, ಶ್ರೀ ಬಸವೇಶ್ವರ ಹಾಗೂ ಶ್ರೀ ಗಡಿಚೌಡೇಶ್ವರಿ ದೇವಿಯ 19 ನೇ ವಾರ್ಷಿಕೋತ್ಸವ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ 15 ನೇ ವಾರ್ಷಿಕೋತ್ಸವ ಕಾರ್ಯಕ್ರಮಗಳು ಇದೇ ದಿನಾಂಕ 10. 11 ಹಾಗೂ 12 ರಂದು ಮೂರು ದಿನಗಳ ಕಾಲ ಜರುಗಲಿವೆ.

ನಾಳೆ ಸಾಹಿತಿ ಜಾಹ್ನವಿ ಅವರ ಪುಸ್ತಕ ಬಿಡುಗಡೆ, ರಂಗ ಪ್ರಸ್ತುತಿ

ನಗರದ ಕನ್ನಡ ಭವನದಲ್ಲಿ ನಾಡಿದ್ದು ದಿನಾಂಕ 10ರ ಶನಿವಾರ ಹಿರಿಯ ಸಾಹಿತಿ ಬಿ.ಟಿ.  ಜಾಹ್ನವಿ ಅವರ ಸಮಗ್ರ ಕಥಾ ಸಂಕಲನ `ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ’ ಪುಸ್ತಕ ಬಿಡುಗಡೆ ಮತ್ತು ಕೆ.ವಿ. ಅಕ್ಷರ ಹೆಗ್ಗೋಡು ಅವರ ಮಾರ್ಗದರ್ಶನದಲ್ಲಿ ವಿದ್ಯಾ ಅಕ್ಷರ ಮತ್ತು ವಾಣಿ ಸತೀಶ್ ಇವರಿಂದ `ದೂಪ್ದಳ್ಳಿ ಸೆಕ್ಸಿ ದುರುಗ’ ರಂಗ ಪ್ರಸ್ತುತಿ ನಡೆಯಲಿದೆ. 

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಹೆಜ್ಜೆ

ಜಗಳೂರು : ಕಾರ್ಯಕರ್ತರ ಮತ್ತು ಮುಖಂಡರುಗಳ ಅಭಿಪ್ರಾಯ ಸಂಗ್ರಹಿಸಿ, ಮುಂದಿನ ರಾಜಕೀಯ ನಿರ್ಣಯ ಕೈಗೊಳ್ಳುವು ದಾಗಿ ಕಳೆದ ವಿಧಾನ ಸಭಾಚುನಾವಣೆಯಲ್ಲಿ ಪಕ್ಷೇ ತರರಾಗಿ ಸ್ಪರ್ಧಿಸಿ ಪರಾಜಿತರಾಗಿರುವ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ತಿಳಿಸಿದ್ದಾರೆ.

ನಗರದ ಶ್ರೀ ದಾನಮ್ಮ ದೇವಸ್ಥಾನದಲ್ಲಿ ಇಂದು ಅವರಾತ್ರಿ ಅಮವಾಸ್ಯೆ

ದೊಡ್ಡಪೇಟೆಯ ಶ್ರೀ ಬಸವೇಶ್ವರ ಮತ್ತು ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ಅವರಾತ್ರಿ ಅಮಾವಾಸ್ಯೆ ಪ್ರಯುಕ್ತ  ಇಂದು ಬೆಳಿಗ್ಗೆ ಶ್ರೀ ಸ್ವಾಮಿಗೆ ಅಭಿಷೇಕ, ಪೂಜೆ, ಹೂವಿನ ಅಲಂಕಾರ ನಡೆಯುವುದು.

error: Content is protected !!