Author: Janathavani (Janathavani website)

Home Janathavani

ಭದ್ರಾ ಕಾಲುವೆ ಬಳಿ ನಿಷೇಧಾಜ್ಞೆ

ಭದ್ರಾ ಜಲಾಶಯದಿಂದ ಬಲದಂಡೆ ಕಾಲುವೆಗೆ ನೀರು ಬಿಡಲಾಗಿದ್ದು ಕೊನೆ ಹಂತದ ರೈತರಿಗೆ ನೀರು ತಲುಪಿಸಲು ಅನಧಿಕೃತ ಪಂಪ್‍ಸೆಟ್ ತೆರವು ಮಾಡಲಾಗುತ್ತಿದೆ.

ಇಂದಿನಿಂದ ಸೂಳೆಕೆರೆ ಹಳ್ಳಕ್ಕೆ ನೀರು ಬಿಡುಗಡೆ

ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾ. 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್‍ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ. 

ಚಿತ್ರದುರ್ಗದಿಂದ ಕಾರಜೋಳ ಸ್ಪರ್ಧೆ

ಚಿತ್ರದುರ್ಗ ಲೋಕಸಭಾ ಕ್ಷೇತ್ರ ದಿಂದ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪರ್ಧಿಸ ಲಿದ್ದಾರೆ ಎಂದು ಬಿಜೆಪಿ ಘೋಷಿ ಸಿದೆ. ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.

`ಉರಿಯ ಉಯ್ಯಾಲೆ’

ದಾವಣಗೆರೆ ಎವಿಕೆ ಕಾಲೇಜು ಸಭಾಂಗಣದಲ್ಲಿ ಬುಧವಾರ ಹೆಚ್.ಎಸ್. ವೆಂಕಟೇಶಮೂರ್ತಿ ಅವರ `ಉರಿಯ ಉಯ್ಯಾಲೆ’ ನಾಟಕವನ್ನು ಮೈಸೂರಿನ ಶಶಿ ಥಿಯೇಟರ್ ವತಿಯಿಂದ ಪ್ರದರ್ಶಿಸಲಾಯಿತು.

ಚುನಾವಣಾ ಅಧಿಕಾರಿಗಳು ಆಯೋಗದ ಕಣ್ಣು-ಕಿವಿ

ನ್ಯಾಯ ಸಮ್ಮತ, ಪಾರದರ್ಶಕ ಚುನಾವಣೆ ನಡೆಸಲು ಚುನಾವಣಾ ಅಧಿಕಾರಿಗಳು ಆಯೋಗದ ಕಣ್ಣು, ಕಿವಿಯಾಗಿದ್ದು ಪ್ರಾಮಾಣಿಕವಾದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು. 

ಕಾಣದ ಕೈಗಳಿಂದ ಅವಕಾಶ ವಂಚಿತನಾಗಿದ್ದೇನೆ : ವಿನಯ್‌

ಹೊನ್ನಾಳಿ : ಕಾಣದ ಕೈಗಳಿಂದ ಟಿಕೆಟ್ ಪಡೆಯುವಲ್ಲಿ ವಂಚಿತನಾಗಿದ್ದು, ಅವಕಾಶಗಳನ್ನು ನಾವೇ ಸೃಷ್ಠಿಸಿಕೊಳ್ಳಬೇಕಾಗಿದೆ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಹಿಂದ ಯುವ ನಾಯಕ ಜಿ.ಬಿ. ವಿನಯ್ ಕುಮಾರ್ ಹೇಳಿದರು.

ದಣಿದವರಿಗೆ ಮಜ್ಜಿಗೆ: ದೇವರು ಸಂತೃಪ್ತಿ

ಕಾಣದಿ ರುವ ದೇವರನ್ನು ಹುಡುಕಿಕೊಂಡು ಹೋಗಿ ಕಲ್ಲುಗಳಿಗೆ ಬೆಣ್ಣೆ, ತುಪ್ಪದ ಅಭಿಷೇಕ, ಪೂಜೆ, ಅರ್ಚನೆ ಮಾಡುತ್ತೇವೆ. ಅದರ ಬದಲು ದಣಿವಾರಿ ಬಂದವರಿಗೆ ಮಜ್ಜಿಗೆ, ನೀರು, ಊಟ ಕೊಟ್ಟರೆ ಅದು ನಿಜವಾಗಿಯೂ ದೇವರಿಗೆ ಸಂತೃಪ್ತಿ ಕೊಡುತ್ತದೆ

ಕುಂಬಳೂರು : ಮುಳ್ಳೋತ್ಸವಕ್ಕೆ ಅಪಾರ ಜನ

ಮಲೇಬೆನ್ನೂರು : ಕುಂಬಳೂರು ಗ್ರಾಮದ ಆರಾಧ್ಯ ದೈವ ಶ್ರೀ ಹನುಮಂತ ದೇವರ ಮಹಾರಥೋತ್ಸವವು ಬುಧವಾರ ಬೆಳಗಿನ ಜಾವ ಸಕಲ ವಾದ್ಯಗಳೊಂದಿಗೆ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಈ ಬಾರಿ ಶೇ.85ಕ್ಕಿಂತ ಹೆಚ್ಚು ದಾಖಲೆ ಮತದಾನ ಆಗಬೇಕು

ಪ್ರಸ್ತುತ 18ನೇ ಲೋಕಸಭಾ ಚುನಾವಣೆಯಲ್ಲಿ ಶೇ 85ಕ್ಕಿಂತಲೂ ಹೆಚ್ಚಿನ ಮತದಾನವಾಗುವಂತೆ  ಮಾಡಿ, ಹೊಸ ದಾಖಲೆ ನಿರ್ಮಿಸುವಂತೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ತಿಳಿಸಿದರು.

ನಗರದಲ್ಲಿ ಇಂದು ನ್ಯಾಯವಾದಿಗಳಿಗೆ ನ್ಯಾಯ ವಿಜ್ಞಾನ ಕಾರ್ಯಕ್ರಮ

ಜಿಲ್ಲಾ ವಕೀಲರ ಸಂಘದಿಂದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಉಪನ್ಯಾಸ ಮಾಲಿಕೆ-7 ನ್ಯಾಯವಾದಿಗಳಿಗೆ ನ್ಯಾಯ ವಿಜ್ಞಾನ ಕಾರ್ಯಕ್ರಮವನ್ನು ಇಂದು ಮಧ್ಯಾಹ್ನ 2.30ಕ್ಕೆ ಆಯೋಜಿಸಲಾಗಿದೆ.

error: Content is protected !!