ದಿ. ಹೆಚ್.ಎನ್. ಷಡಾಕ್ಷರಪ್ಪ ಅವರು ಕರ್ನಾಟಕದ ಕೇಂದ್ರ ಬಿಂದುವಾಗಿರುವ ದಾವಣಗೆರೆ ನಗರದಿಂದ ಕಳೆದ 47 ವರ್ಷಗಳಿಂದ ಪ್ರಕಟವಾಗುತ್ತಿರುವ ಜನತಾವಾಣಿ' ಕನ್ನಡ ದಿನಪತ್ರಿಕೆಯ ಸಂಸ್ಥಾಪಕ ಸಂಪಾದಕರು. 1938ರ ಮೇ ಒಂದರಂದು ದಾವಣಗೆರೆ ತಾಲ್ಲೂಕಿನ ಮೆಳ್ಳೇಕಟ್ಟೆ ಗ್ರಾಮದಲ್ಲಿ ಜನಿಸಿದ ಹೆಚ್ಚೆನ್ನೆಸ್ ಅವರು ಬಾಲ್ಯದಿಂದಲೇ ಪತ್ರಿಕೋದ್ಯಮದ ಕಡೆ ಸೆಳೆತ ಹೊಂದಿದ್ದರು.
About us

ವಿಕಾಸ್ ಮೆಳ್ಳೇಕಟ್ಟೆ
ಸಂಪಾದಕರು
ವಿಕಾಸ್ ಷಡಾಕ್ಷರಪ್ಪ ಮೆಳ್ಳೇಕಟ್ಟೆ ಜನಿಸಿದ್ದು ಮಾರ್ಚ್ 8, 1973ರಂದು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವಿಕಾಸ್, ತಮ್ಮ ತಂದೆ ಹೆಚ್.ಎನ್. ಷಡಾಕ್ಷರಪ್ಪ ಅವರಿಂದ ಪತ್ರಿಕೋದ್ಯಮದ ದೀಕ್ಷೆ ಪಡೆದಿದ್ದಾರೆ. ತಂದೆ ಷಡಾಕ್ಷರಪ್ಪ ಅವರ ಸ್ಫೂರ್ತಿಯಿಂದ ಬಾಲ್ಯದಿಂದಲೂ ಸಾಹಿತ್ಯಾಭಿರುಚಿ ಬೆಳೆಸಿಕೊಂಡವರು ವಿಕಾಸ್. ಅದೇ ಪ್ರವೃತ್ತಿ ಮುಂದೆ ಪತ್ರಿಕೋದ್ಯಮದಲ್ಲಿ ವೃತ್ತಿಯಾಗಿ ಪರಿಣಮಿಸಿತು.