March 31, 2020

24 ಗಂಟೆಯೂ ಅಗತ್ಯ ಸೇವೆ

ದಾವಣಗೆರೆ, ಮಾ. 23 – ಕೊರೊನಾ ವೈರಸ್ ತಡೆಯಲು ಲಾಕ್‌ಡೌನ್‌ ಪ್ರಕಟಣೆ ಮಾಡಲಾಗಿದೆಯಾದರೂ, ಅಗತ್ಯ ಸೇವೆಗಳನ್ನು ಮುಂದುವರೆಸಲು ವಿನಾಯಿತಿ ನೀಡಲಾಗಿದೆ.

ನಿಷೇಧದ ಪಟ್ಟಿಯಿಂದ ಹೊರಗಿರುವ ಈ ಸೇವೆಗಳನ್ನು ಸದ್ಭಾವನೆಯಿಂದ ಒದಗಿಸುವವರು ದಿನದ 24 ಗಂಟೆಗಳೂ ಸೇವೆ ಒದಗಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ಈ ಸೇವೆಗಳಲ್ಲಿ ಆಹಾರ, ದಿನಸಿ ಅಂಗಡಿ, ಹಾಲು, ತರಕಾರಿ, ದಿನಬಳಕೆ ವಸ್ತುಗಳು, ಹಣ್ಣು, ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳು, ಪೆಟ್ರೋಲ್ ಬಂಕ್, ಗ್ಯಾಸ್, ಎಲ್‌ಪಿಜಿ, ತೈಲ ಏಜೆನ್ಸಿ ಮತ್ತು ಅದಕ್ಕೆ ಸಂಬಂಧಿಸಿದ ಉಗ್ರಾಣಗಳು ಹಾಗೂ ಹಿಟ್ಟಿನ ಗಿರಣಿಗಳು ಇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.