ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿಗೆ ಸನ್ಮಾನ

ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿಗೆ ಸನ್ಮಾನ

ಹರಿಹರ, ಮೇ 26- ನಗರದ ಶಿಕ್ಷಣ ಇಲಾಖೆ ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಹನಗವಾಡಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಕುಬೇಂದ್ರ ಮೆಕ್ಕಪ್ಪನವರ್ ಇವರಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಪರಿಷತ್ ಅಧ್ಯಕ್ಷ ಡಿ.ಎಂ. ಮಂಜು ನಾಥಯ್ಯ ಮಾತನಾಡಿ, ಸ್ನೇಹಮಯ ವ್ಯಕ್ತಿತ್ವ ಹೊಂದಿರುವ ಕುಬೇಂದ್ರಪ್ಪನವರು ಶಿಕ್ಷಕರಿಗೆ ಹೆಚ್ಚಿನ ಅನುಕೂಲ ಮಾಡುವ ಅವಕಾಶ ಬಂದಿದ್ದು, ಅದನ್ನು ಯಶಸ್ವಿಯಾಗಿ ನಿಭಾಯಿಸುವ ಭರವಸೆ ಇದೆ. ಶಿಕ್ಷಕರ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೋರಿಸಿ ಶಿಕ್ಷಕರ ಪರವಾಗಿ ಸಮರ್ಥವಾಗಿ ಕೆಲಸ ಮಾಡುವ ವಿಶ್ವಾಸವಿದೆ ಎಂದು ಹೇಳಿದರು. 

ಶಿಕ್ಷಕ ಶರಣ್‌ಕುಮಾರ್ ಹೆಗಡೆ ಮಾತನಾಡಿ, ಒಳ್ಳೆಯ ವಾಗ್ಮಿಗಳು ಕೆಲಸದಲ್ಲಿ ಚತುರರಿದ್ದಾರೆ ಶಿಕ್ಷಣ ಕ್ಷೇತ್ರವನ್ನು ಬೌದ್ಧಿಕವಾಗಿ ಪ್ರಜ್ವಲಿಸುವಂತೆ ಮಾಡುವು ದರ ಜೊತೆಗೆ ಶಿಕ್ಷಕರಿಗೆ ಹಲವಾರು ರೀತಿಯ ಶೈಕ್ಷಣಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ  ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಕ್ಷೇತ್ರ ಸಮನ್ವಯ ಪ್ರಭಾರಿ ಅಧಿಕಾರಿ  ಕುಬೇಂದ್ರಪ್ಪ ಮೆಕ್ಕಪ್ಪನವರ್, ಸಿ.ಇ ಹರೀಶ್, ಬಿ.ಬಿ. ರೇವಣ್ಣನಾಯ್ಕ್  ಮಾತನಾಡಿದರು.  

ಈ ಸಂದರ್ಭದಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ಬಿ. ರೇವಣ್ಣನಾಯ್ಕ್, ಎಂ.ಚಿದಾನಂದ ಕಂಚಿಕೇರಿ, ಸಂಚಾಲಕ ಎ. ರಿಯಾಜ್ ಆಹ್ಮದ್,  ಸದಸ್ಯರಾದ ಅಬ್ದುಲ್ ಸಲಾಂ, ಶಿಕ್ಷಕರಾದ ಈಶಪ್ಪ ಬೂದಿಹಾಳ, ನೋಟಗಾರ್, ಜಗದೀಶ್ ಉಜ್ಜಮ್ಮನವರ್, ಗಿರೀಶ್,  ಚೆನ್ನವೀರಯ್ಯ ಹಿರೇಮಠ,  ಶಿಕ್ಷಕ ಸಿದ್ದನಗೌಡ ಇತರರು ಹಾಜರಿದ್ದರು.