ಮೂರು-ತಲೆಮಾರು ಒಂದೇ ಪೋಸ್ಟರ್

ಮೂರು-ತಲೆಮಾರು ಒಂದೇ ಪೋಸ್ಟರ್

ದಾವಣಗೆರೆ, ಮೇ 5- ವಂಶಪಾರಂಪರ್ಯ ಆಡಳಿತವನ್ನು ವಿರೋಧಿಸುವ ರಾಜಕೀಯ ನಾಯಕರುಗಳು ಇರುವ ಸಮಾಜದ ನಡುವೆ ಒಂದೇ ಕುಟುಂಬದ ಮೂರು ತಲೆಮಾರಿನ ಜನರ ಭಾವಚಿತ್ರವಿರುವ ಪೋಸ್ಟರ್ ಅನ್ನು ವಿನಾಯಕ ಬಡಾವಣೆಯ ಶುದ್ಧ ನೀರಿನ ಘಟಕದಲ್ಲಿ ಇರುವುದು ಮಾತ್ರ ವಿಶೇಷ.

ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್, ಮಹಾನಗರ ಪಾಲಿಕೆ ಸದಸ್ಯರಾದ ವೀಣಾ ನಂಜಪ್ಪ ಹಾಗೂ ಅವರ ಪುತ್ರನ ಭಾವಚಿತ್ರವಿದ್ದ ಇದು ಖಾಸಗಿ ನೀರಿನ ಘಟಕವೋ ಅಥವಾ ಸರ್ಕಾರದ ಶುದ್ಧ ನೀರಿನ ಘಟಕವೋ ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ. ಶಾಸಕರ ಮೊಮ್ಮಗನ ಭಾವಚಿತ್ರವಿದ್ದು, ಆತನ ಹುದ್ದೆ ಏನು ಎಂಬುದೇ ಸಾರ್ವಜನಿಕರಿಗೆ ಯಕ್ಷಪ್ರಶ್ನೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳೇ ಇದಕ್ಕೆ ಉತ್ತರಸಬೇಕಾಗಿದ್ದು, ಇನ್ನು ವಂಶಪಾರಂಪರ್ಯವನ್ನು ವಿರೋಧಿಸುವ ಶಾಸಕರ ಪ್ರತಿಕ್ರಿಯೆಗಾಗಿ ಸಾರ್ವಜನಿಕರು ಕಾಯುತ್ತಿದ್ದಾರೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಹರೀಶ್ ಬಸಾಪುರ ತಿಳಿಸಿದ್ದಾರೆ.