ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಭಾಷಾ ಅತಿಕ್ರಮಣ ಸಲ್ಲದು

ಚನ್ನಗಿರಿ ಕಸಾಪ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಅಭಿಮತ

ದಾವಣಗೆರೆ, ಏ.28-ಅಭಿಜಾತ ಸ್ಥಾನಮಾನದ ಶ್ರೇಷ್ಠ ತೆಯನ್ನು ಪಡೆದಿರುವ ಕನ್ನಡ ಭಾಷೆಯು ಕರ್ನಾ ಟಕ ದಲ್ಲಿ ಸಾರ್ವಭೌಮ ಭಾಷೆ ಯಾಗಿದ್ದು, ರಾಷ್ಟ್ರಭಾಷೆಯ ಹೆಸರಲ್ಲಿ ಮತ್ತೊಂದು ಭಾಷೆಯ ಅತಿಕ್ರಮ ಪ್ರವೇಶವನ್ನು ಕನ್ನಡಿಗ ರೆಲ್ಲರೂ ಒಗ್ಗಟ್ಟಿನಿಂದ ಖಂಡಿಸ ಬೇಕಾಗಿದೆ ಎಂದು ಚನ್ನಗಿರಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಸವಾ ಪಟ್ಟಣದ ಎಲ್.ಜಿ.ಮಧುಕುಮಾರ್ ಅವರು ತಿಳಿಸಿದ್ದಾರೆ.

ಹಿಂದಿ ಎನ್ನುವುದು ರಾಷ್ಟ್ರಭಾಷೆ ಯಾಗಿಲ್ಲ ಎನ್ನುವ ಚಿತ್ರನಟ ಸುದೀಪ್‌ರವರ ಹೇಳಿಕೆಗೆ ಬೆಂಬಲವನ್ನು ವ್ಯಕ್ತಪಡಿಸಿ ಬಹುತ್ವ ಭಾಷಾ ಸಂಸ್ಕೃತಿಯ ಭಾರತದಲ್ಲಿ ಹಿಂದಿ ಭಾಷೆಯನ್ನು ಹೊತ್ತು ಮೆರೆಸುವುದರ ಅಗತ್ಯವಿಲ್ಲ. ಭಾರತೀಯ ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೂಚಿಸಿರುವ  ಭಾಷೆಗಳಲ್ಲಿ ಹಿಂದಿ  ಒಂದು ಭಾಷೆ ಅಷ್ಟೇ. ಅದಕ್ಕೆ ವಿಶೇಷ ಮಹತ್ವವನ್ನು ನೀಡುವುದು ಮೂರ್ಖತನದ ಪರಮಾವಧಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಸಂವಿಧಾನದ ಹದಿ ನಾಲ್ಕನೇ ಪರಿಚ್ಛೇದವು ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆಯ ಹಕ್ಕನ್ನು ನೀಡುತ್ತದೆ. ಹಿಂದಿಯೇ ರಾಷ್ಟ್ರ ಭಾಷೆ ಎನ್ನುವ ಮೂಲಕ ಇತರೆ ಭಾರತೀಯ ಭಾಷೆಗಳನ್ನು ಕಡೆಗಣಿಸಿ ಇತರೆ ಭಾಷಿಗರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿಸುವುದು ಅಕ್ಷಮ್ಯ. ಇದು ಸಂವಿಧಾನದ ಸಮಾನತೆಯ ಆಶಯಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.