ಬೋಳಾಸ್ ದಿ ಫ್ಯಾಕ್ಟರಿ ಔಟ್ಲೆಟ್ ಆರಂಭ

ಬೋಳಾಸ್ ದಿ ಫ್ಯಾಕ್ಟರಿ ಔಟ್ಲೆಟ್ ಆರಂಭ

ದಾವಣಗೆರೆ, ಏ. 27- ಕರಾವಳಿ ಬೋಳಾಸ್ ಸಮೂಹ ಸಂಸ್ಥೆ ಕಳೆದ ಏಳು ದಶಕಗಳಿಂದ ಗೋಡಂಬಿ ಮತ್ತು ಇತರ ಡ್ರೈ ಫ್ರೂಟ್ ಉದ್ಯಮದಲ್ಲಿ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಸರು ಮಾಡಿದೆ. 

ಸಂಸ್ಥೆಯು ತನ್ನ ಉತ್ಪನ್ನಗಳನ್ನು 45ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತದೆ ಮತ್ತು ರಾಷ್ಟ್ರಪತಿಗಳಿಂದ `ನಿರ್ಯಾತ ಶ್ರೀ’ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.  

ಸಂಸ್ಥೆಯು ಭಾರತದಲ್ಲೇ ಅತಿ ದೊಡ್ಡ ಡ್ರೈ ಫ್ರೂಟ್ಸ್ ಮತ್ತು ಬೀಜಗಳ ಸಂಸ್ಕರಣಾ ಘಟಕವನ್ನು ಹೊಂದಿದೆ. ಪ್ರಪಂಚಾದ್ಯಂತ 25ಕ್ಕೂ ಹೆಚ್ಚು ದೇಶಗಳಿಂದ ಡ್ರೈ ಫ್ರೂಟ್‌ಗಳನ್ನು ಆಮದು ಮಾಡಿಕೊಂಡು, ಅದನ್ನು ತನ್ನದೇ ಆದ ಅತ್ಯಾಧುನಿಕ ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸಿ ನೇರವಾಗಿ ಗ್ರಾಹಕರಿಗೆ ಪೂರೈಸುತ್ತದೆ. ಸಂಸ್ಕ ರಣಾ ಘಟಕವು ಗ್ರಾಮೀಣ ಪ್ರದೇಶದಲ್ಲಿದ್ದು, ಹೆಚ್ಚಿನ ಕಾರ್ಮಿಕರು, ಮಹಿಳೆಯರು ಎಂಬುದು ಗಮನಾರ್ಹ.

ಅಲ್ಪಾವಧಿಯಲ್ಲಿ ಸಂಸ್ಥೆಯು ಫ್ರಾಂಚೈಸ್ ಮಾದರಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ 19 ಮಳಿಗೆಗಳನ್ನು ತೆರೆದಿದೆ. ಬೋಳಾಸ್ ದಿ ಫ್ಯಾಕ್ಟರಿ ಔಟ್‌ಲೆಟ್ ನಗರದ ಗ್ರಾಹಕರು ಮೇಧಾ ಸ್ಕೇರ್, ವಿದ್ಯಾರ್ಥಿ ಭವನ ಸರ್ಕಲ್, ಹದಡಿ ರಸ್ತೆ (9113091031)ಇಲ್ಲಿ ಸಂಪರ್ಕಿಸಬಹುದಾಗಿದೆ.