ಜಿಗಳಿ ಗ್ರಾ.ಪಂ. ಅಧ್ಯಕ್ಷರಾಗಿ ರೇಣುಕಮ್ಮ

ಜಿಗಳಿ ಗ್ರಾ.ಪಂ. ಅಧ್ಯಕ್ಷರಾಗಿ ರೇಣುಕಮ್ಮ

ಉಪಾಧ್ಯಕ್ಷರಾಗಿ ಹರೀಶ್ ಆಯ್ಕೆ

ಮಲೇಬೆನ್ನೂರು, ಏ. 26- ಜಿಗಳಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಜಿ. ಬೇವಿನಹಳ್ಳಿಯ ಶ್ರೀಮತಿ ರೇಣುಕಮ್ಮ ಮಡಿವಾಳರ ರಂಗಪ್ಪ ಮತ್ತು ಉಪಾಧ್ಯಕ್ಷ ರಾಗಿ ಜಿಗಳಿಯ ಡಿ.ಎಂ. ಹರೀಶ್ ಅವರು ಆಯ್ಕೆಯಾಗಿದ್ದಾರೆ.

ಶ್ರೀಮತಿ ರೇಣುಕ ಪೂಜಾರ್ ನಾಗರಾಜ್ ಮತ್ತು ಜಿ. ಬೇವಿನಹಳ್ಳಿ ಪಿ.ಹೆಚ್. ದೇವರಾಜ್ ಇವರ ರಾಜೀನಾಮೆ ಯಿಂದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ತೆರವಾಗಿದ್ದವು.

ತೆರವಾದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರೇಣುಕಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡಿ.ಎಂ. ಹರೀಶ್ ಅವರು 12 ಮತಗಳನ್ನು ಪಡೆದು ಆಯ್ಕೆಯಾದರೆ, ಎನ್.ಎಂ. ಪಾಟೀಲ್ ಅವರು 5 ಮತಗಳನ್ನು ಪಡೆದು ಪರಾಭವಗೊಂಡರು. 1 ಮತ ತಿರಸ್ಕೃತಗೊಂಡಿತು.

ಎಲ್ಲಾ 18 ಸದಸ್ಯರೂ ಈ ವೇಳೆ ಹಾಜರಿದ್ದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ರೇಖಾ ಚುನಾ ವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ತೋಟಗಾರಿಕೆ ಇಲಾಖೆಯ ಪ್ರಕಾಶ್, ಪಿಡಿಓ ಉಮೇಶ್ ಸಹಕರಿಸಿದರು.

ಚುನಾವಣೆ ನಂತರ ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಗ್ರಾ.ಪಂ. ಮಾಜಿ ಅಧ್ಯಕ್ಷ ಡಿ.ಹೆಚ್. ಮಂಜುನಾಥ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ, ಕೆ.ಆರ್. ರಂಗಪ್ಪ, ಕೆ.ಎಂ. ರಾಮಪ್ಪ, ಕೆ.ಎಸ್.
ನಂದ್ಯಪ್ಪ, ದೊಡ್ಡಘಟ್ಟದ ಮಂಜುನಾಥ್, ಜೆ. ಕೃಷ್ಣಮೂರ್ತಿ, ಬೆಣ್ಣೇರ ನಂದ್ಯಪ್ಪ, ಜಿ.ಆರ್. ಹಾಲೇಶಪ್ಪ, ಎಂ.ಎಸ್. ಮಲ್ಲನಗೌಡ, ಪೂಜಾರ್ ನಾಗರಾಜ್, ಮಾಕನೂರು ಶಿವು, ಕೆ.ಜಿ. ಬಸವರಾಜ್ ಮತ್ತು ಜಿ. ಬೇವಿನಹಳ್ಳಿಯ ಮಡಿವಾಳರ ಸುರೇಶ್, ಆನಂದಗೌಡ, ಮಹಾಂತೇಶ್, ಅಣ್ಣಪ್ಪ, ಎ.ಕೆ. ರಂಗಪ್ಪ ಸೇರಿದಂತೆ ಅನೇಕರು ಅಭಿನಂದಿಸಿದರು.