ಸ್ವರ್ಣ ಭಾರತಿ ಮಹಿಳಾ ಅಭಿವೃದ್ಧಿ ಸಂಸ್ಥೆಯಿಂದ ಮಹಿಳಾ ದಿನಾಚರಣೆ

ಸ್ವರ್ಣ ಭಾರತಿ ಮಹಿಳಾ ಅಭಿವೃದ್ಧಿ ಸಂಸ್ಥೆಯಿಂದ  ಮಹಿಳಾ ದಿನಾಚರಣೆ

ದಾವಣಗೆರೆ, ಮಾ.18 – ವಿದ್ಯಾನಗರದ ಶಿವ ಪಾರ್ವತಿ ದೇವಸ್ಥಾನ,  ಯೋಗ ಹಾಲ್‍ನಲ್ಲಿ ಸ್ವರ್ಣ ಭಾರತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಂಸ್ಥೆಯ 6 ನೇ ವಾರ್ಷಿಕೋತ್ಸವವನ್ನು ಶ್ರೀಮತಿ ಭಾರತಿ ಕೇಶವ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

13 ಬಾರಿ ರಕ್ತದಾನ ಮಾಡಿರುವ ನಮನ ಅಕಾಡೆಮಿಯ ಕ್ಲಾಸಿಕಲ್ ಡ್ಯಾನ್ಸ್ ಶಿಕ್ಷಕಿ ಶ್ರೀಮತಿ ಮಾಧವಿ ಗೋಪಾಲಕೃಷ್ಣ ಮುಖ್ಯ ಅತಿಥಿಗಳಾಗಿ ಹಾಗೂ ಮತ್ತೊರ್ವ ಅತಿಥಿ ದಾನಿಗಳಾಗಿ ಸುಮಂಗಲಮ್ಮ ಅಧಿಕಾರ ಆಗಮಿಸಿದ್ದರು.

ಸಂಸ್ಥೆಯ ಸದಸ್ಯೆ, ಕೊರೊನಾ ವಾರಿಯರ್ ಶ್ರೀಮತಿ ವಿಜಯ ವೀರೇಂದ್ರ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥಾಪಕರಾದ ಶ್ರೀಮತಿ ಭಾರತಿ ಕೇಶವ್ ಅವರನ್ನು ಸಂಸ್ಥೆಯ ಪದಾಧಿಕಾರಿಗಳು ಸನ್ಮಾನಿಸಿದರು.  ಶುಭ ಐನಳ್ಳಿ ನಿರೂಪಿಸಿದರು, ಶಿಲ್ಪಾ ರವಿ ಸ್ವಾಗತಿಸಿದರು, ರೂಪ ಪ್ರಾರ್ಥಿಸಿದರು, ಪುಷ್ಪಾ ನಾರಾಯಣ ಸ್ವಾಮಿ ವಾರ್ಷಿಕ ವರದಿ ಓದಿದರು, ಸುಧಾ ವಂದಿಸಿದರು.