ವಿನಾಯಕ ನಗರ ಕ್ಯಾಂಪ್‌ನಲ್ಲಿ ಕ್ರಿಕೆಟ್

ವಿನಾಯಕ ನಗರ ಕ್ಯಾಂಪ್‌ನಲ್ಲಿ ಕ್ರಿಕೆಟ್

ಮಲೇಬೆನ್ನೂರು, ಫೆ.4- ಜಿಗಳಿ ಗ್ರಾಮದ ಮಿತ್ರ ಕ್ರಿಕೆಟರ್ ಮತ್ತು ಬೃಂದಾವನ ಕನ್‌ಸ್ಟ್ರಕ್ಷನ್ ಪ್ರೈ. ಲಿ. ಇವರ ಸಂಯುಕ್ತಾಶ್ರಯದಲ್ಲಿ ವಿನಾಯಕ ನಗರ ಕ್ಯಾಂಪ್ ಸಮೀಪ ಹಮ್ಮಿಕೊಂಡಿದ್ದ 3 ದಿನಗಳ ಲೀಗ್ ಕಂ ನಾಕೌಟ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಜಿ.ಪಂ. ಮಾಜಿ ಸದಸ್ಯ ಎಂ.ನಾಗೇಂದ್ರಪ್ಪ ಉದ್ಘಾಟಿಸಿದರು.

ಎಪಿಎಂಸಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ರೈಸ್ ಮಿಲ್ ಮಾಲೀಕ ಯಕ್ಕನಹಳ್ಳಿ ಬಸವರಾಜಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ತಾ. ನಾಯಕ ಸಮಾಜದ ಅಧ್ಯಕ್ಷ ಕೆ.ಆರ್.ರಂಗಪ್ಪ, ತಾ. ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಹರಿಹರ ಪಾರ್ವತಿ, ತಾ. ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕುಂಬಳೂರು ವಾಸು, ಯಲವಟ್ಟಿ ಕೊಟ್ರೇಶ್ ನಾಯ್ಕ, ಜಿಗಳಿ ಗ್ರಾ.ಪಂ.ಸದಸ್ಯರಾದ ಕೆ.ಎನ್.ಬಸವರಾಜ್, ಡಿ.ಎಂ.ಹರೀಶ್, ವೈ.ಚೇತನ್‌ಕುಮಾರ್ ಇತರರು ಭಾಗವಹಿಸಿದ್ದರು.