ನೂತನ ಕ್ರೀಡಾಂಗಣ ಕಾಮಗಾರಿ ವೀಕ್ಷಿಸಿದ ಎಸ್ಸೆಸ್

ನೂತನ ಕ್ರೀಡಾಂಗಣ ಕಾಮಗಾರಿ ವೀಕ್ಷಿಸಿದ ಎಸ್ಸೆಸ್

ಸುತ್ತ ಕಾಂಪೌಂಡ್ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚನೆ

ದಾವಣಗೆರೆ, ಜ.27- ದಾವಣಗೆರೆ ದಕ್ಷಿಣ ವಿಧಾನಸಭಾ ವ್ಯಾಪ್ತಿಯ ಶಿವನಗರದಲ್ಲಿ ನೂತನವಾಗಿ ಕ್ರೀಡಾಂಗಣ ನಿರ್ಮಾಣಗೊಳ್ಳುತ್ತಿದ್ದು, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಇಂದು ಕಾಮಗಾರಿ ವೀಕ್ಷಿಸಿದರು.

ಸುಮಾರು 6 ಎಕರೆ ಪ್ರದೇಶದಲ್ಲಿ ದಾವಣಗೆರೆ ಸ್ಮಾರ್ಟ್‍ಸಿಟಿ ಲಿಮಿಟೆಡ್ ವತಿಯಿಂದ ನಿರ್ಮಾಣಗೊಳ್ಳುತ್ತಿದೆ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಿರ್ಮಿಸಿ ಜೊತೆಗೆ ಕ್ರೀಡಾಂಗಣದ ಸುತ್ತಲೂ ಕಾಂಪೌಂಡ್ ನಿರ್ಮಿಸಬೇಕೆಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಕಾಮಗಾರಿಯು ಗುಣಮಟ್ಟದಿಂದ ಕೂಡಿದ್ದು, ತ್ವರಿತವಾಗಿ ಕಾಮಗಾರಿ ನಡೆಸಬೇಕು. ಯಾವುದೇ ರೀತಿಯಲ್ಲಿ ಗುಣಮಟ್ಟದಲ್ಲಿ ರಾಜೀ ಮಾಡಿಕೊಳ್ಳದೇ ಕಾಮಗಾರಿಗಳು ಉತ್ತಮ ರೀತಿಯಲ್ಲಿ ಆಗುವಂತೆ ನೋಡಿಕೊಳ್ಳಬೇಕೆಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಎ.ಬಿ.ರಹೀಂ ಸಾಬ್, ಜಾಕೀರ್, ಕಬೀರ್, ಮಾಜಿ ಸದಸ್ಯರಾದ ಶಫೀಕ್ ಪಂಡಿತ್, ಫಾರೂಕ್, ಮುಖಂಡರುಗಳಾದ ಕೊಡಪಾನ ದಾದಾಪೀರ್, ಘನಿ, ಮೊಟ್ಟೆ ದಾದಾಪೀರ್, ದಾವಣಗೆರೆ ಸ್ಮಾರ್ಟ್‍ಸಿಟಿ ಲಿಮಿಟೆಡ್ ನಿರ್ದೇಶಕ ಎಂ.ನಾಗರಾಜ್, ಅಭಿಯಂತರರುಗಳಾದ ರವಿಕುಮಾರ್, ಸಿದ್ದೇಶ್, ವೀರೇಶ್ ಮತ್ತಿತರರಿದ್ದರು.