ರಾಣೇಬೆನ್ನೂರು ಶಾಸಕರ ಅನುದಾನ ದುರ್ಬಳಕೆ

ರಾಣೇಬೆನ್ನೂರು, ಜ. 17- ಸರ್ಕಾರದ ನಿಯಮಾನುಸಾರ ಶಾಸಕರ ಅನುದಾನ ಬಳಕೆಯಾಗುತ್ತಿಲ್ಲ. ಅತಿ ಯಾದ ಭ್ರಷ್ಟಾಚಾರ ನಡೆದಿದೆ. ಕ್ಷೇತ್ರ ದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಆರೋಪಿಸಿರುವ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಡಿ. ಕಬ್ಬಾರ ಪತ್ರಿಕಾಗೋಷ್ಠಿಯಲ್ಲಿ ಲಿಖಿತ ಹೇಳಿಕೆ ಬಿಡುಗಡೆ ಮಾಡಿದರು.

ಎರಡು ಎಸ್ಸಿ ಮನೆಗಳಿರುವ ಒಡೆರಾಯನ ಹಳ್ಳಿಯಲ್ಲಿ 5 ಲಕ್ಷದಲ್ಲಿ ಹೈಮಾಸ್ಟ್‌ ದೀಪ ಹಾಕಿಸಿದ್ದೀರಿ. ಅವಶ್ಯವಿರುವ  6 ಗ್ರಾಮಗಳಲ್ಲಿ ಎಸ್ಸಿ ಕಾಲೋನಿ ಹೊರತುಪಡಿಸಿ, ಬೇರೆ ಕಡೆ ಹಾಕಿಸಿ ದ್ದೀರಿ. 2019-20ರಲ್ಲಿ ನೀಡಲಾದ 1 ಕೋಟಿ ಅನುದಾನದ ಬಳಕೆ ಎಲ್ಲಿ ಆಗಿದೆ ಎನ್ನುವ ಮಾಹಿತಿ ಇಲ್ಲ. 20 ರಿಂದ 25 ಸಮುದಾಯ ಭವನಗಳು ಮಂಜೂರಾ ಗಿದ್ದರೂ ಸಹ ಕೆಲವು ಕಡೆಗಳಲ್ಲಿ ಭವನಗಳ ನಿರ್ಮಾಣವಾಗಿಲ್ಲ ಎಂದು ಕಬ್ಬಾರ್ ಆರೋಪಿಸಿದ್ದಾರೆ.

ರಾಜ್ಯದಲ್ಲಿ  ಹೆಚ್ಚು ಆದಾಯ ಅಂದರೆ ಕಂದಾಯ ತಂದುಕೊಡುವಲ್ಲಿ ಎರಡನೇ ಸ್ಥಾನದಲ್ಲಿರುವ ವಾಣಿಜ್ಯ ನಗರ,  ಉತ್ತರ ಕರ್ನಾಟಕ ಹೆಬ್ಬಾಗಿಲು ರಾಣೇಬೆನ್ನೂರು ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಮಾತ್ರ ಸೊನ್ನೆ. ಶಾಸಕರು ಈ ಬಗ್ಗೆ ತನಿಖೆ ನಡೆಸಿ ಅಭಿವೃದ್ಧಿಯ ಮಾಹಿತಿಯನ್ನು ಜನತೆಗೆ ತಿಳಿಸಬೇಕು ಎಂದು ಮನವಿ ಮಾಡಿರುವ ಹನುಮಂತಪ್ಪ ಅವರು,  ತಪ್ಪಿದಲ್ಲಿ ದಾಖಲೆ ಸಮೇತವಿರುವ ಭ್ರಷ್ಟಾ ಚಾರವೂ ಸೇರಿದಂತೆ ನಿಮ್ಮ ವಿರುದ್ದ ಕಾನೂನು ಹೋರಾಟ ಮಾಡಲಾಗು ವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.