ಮಲಬಾರ್‌ ಗೋಲ್ಡ್‌ ಅಂಡ್ ಡೈಮಂಡ್ಸ್‌ನಿಂದ ವಿದ್ಯಾರ್ಥಿ ವೇತನ

ಮಲಬಾರ್‌ ಗೋಲ್ಡ್‌ ಅಂಡ್ ಡೈಮಂಡ್ಸ್‌ನಿಂದ ವಿದ್ಯಾರ್ಥಿ ವೇತನ

ದಾವಣಗೆರೆ, ಜ.17- ಮಲಬಾರ್‌ ಗೋಲ್ಡ್‌ ಅಂಡ್ ಡೈಮಂಡ್ಸ್‌ ಚಾರಿಟೆಬಲ್ ಟ್ರಸ್ಟ್‌ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಇಂದು ಏರ್ಪಾಡಾಗಿದ್ದ ಸಮಾರಂಭದಲ್ಲಿ ವಿದ್ಯಾರ್ಥಿ ವೇತನ ನೀಡಲಾಯಿತು. 

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಮನೂರು ಶಿವಶಂಕರಪ್ಪ ಮತ್ತು ಡಿಡಿಪಿಯು ಶಿವರಾಜ್‌ ಅವರುಗಳು ಪ್ರತಿ  ವಿದ್ಯಾರ್ಥಿನಿಯರಿಗೆ 8 ರಿಂದ 10 ಸಾವಿರ ರೂ. ಗಳಂತೆ 192 ವಿದ್ಯಾರ್ಥಿನಿಯರಿಗೆ ಒಟ್ಟು ರೂ. 16,30,000 ವಿದ್ಯಾರ್ಥಿ ವೇತನದ ಚೆಕ್ ವಿತರಿಸಿದರು. 

ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಬಾಸಿಲ್‌ ರಾಜನ್‌ ಮತ್ತು ಸರ್ಫರಾಜ್‌ ಮತ್ತು ಇತರರು ಉಪಸ್ಥಿತರಿದ್ದರು.