ಎರಡು ಕಳ್ಳತನ ಪ್ರಕರಣಗಳು ಪತ್ತೆ

ಓರ್ವನ ಬಂಧನ : ಒಂದೂವರೆ ಲಕ್ಷ ಮೌಲ್ಯದ ಚಿನ್ನಾಭರಣ ವಶ

ದಾವಣಗೆರೆ, ಜ.17- ಎರಡು ಕಳ್ಳತನ ಪ್ರಕರಣಗಳನ್ನು  ಪತ್ತೆ ಮಾಡಿರುವ ಆಜಾದ್ ನಗರ ಪೊಲೀಸರು, ಓರ್ವನ ಬಂಧಿಸಿ, 1 ಲಕ್ಷದ 50 ಸಾವಿರ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳ ವಶಪಡಿಸಿಕೊಂಡಿದ್ದಾರೆ. ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನರಸಿಂಹ ತಾಮ್ರಧ್ವಜ ಮಾರ್ಗದರ್ಶನದಲ್ಲಿ ಆಜಾದ್ ನಗರ ವೃತ್ತದ ಸಿಪಿಐ ಕೆ.ಎನ್. ಗಜೇಂದ್ರಪ್ಪ ಮತ್ತು ಆಜಾದ್ ನಗರ ಪಿಎಸ್‌ಐ ರವೀಂದ್ರ ಕಾಳಭೈರವ ಹಾಗೂ ಸಿಬ್ಬಂದಿಗಳಾದ ನಿಜಲಿಂಗಪ್ಪ ತಳವಾರ, ನಾಗರಾಜ್, ಮಹಮ್ಮದ್ ಬಷೀರ್, ಮಡ್ಡಿ ಹನುಮಂತಪ್ಪ, ಸುಭಾಷ್ ಮತ್ತು ದಯಾನಂದ್ ಒಳಗೊಂಡ ತಂಡವು ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿದೆ.