ಇತಿಹಾಸ ದಾಖಲಿಸಿದ ಲಸಿಕಾ ಅಭಿಯಾನ

ಲಸಿಕೆ ಹಾಕುವುದರಲ್ಲಿ ರಾಜ್ಯ ಮುಂಚೂಣಿ 

ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಕೊರೊನಾ ಲಸಿಕೆ ಹಾಕುವುದರಲ್ಲಿ ಮುಂಚೂಣಿ ಯಲ್ಲಿದೆ. ರಾಜ್ಯದಲ್ಲಿ 9.1 ಕೋಟಿ ಡೋಸ್ ವಿತರಣೆ ಮಾಡಲಾಗಿದ್ದು, ಶೇ. 99 ರಷ್ಟು
1 ನೇ ಡೋಸ್ ಹಾಗೂ ಶೇ. 83 ರಷ್ಟು 2 ನೇ ಡೋಸ್ ಲಸಿಕೆ ಹಾಕಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ ತಿಳಿಸಿದರು.

ಜಿಲ್ಲೆಯಲ್ಲಿ ಶೇ. 81 ರಷ್ಟು 1 ನೇ ಡೋಸ್, 15 ರಿಂದ 17 ವರ್ಷ ವಯೋಮಾನದ 84 ಲಕ್ಷ ಕ್ಕೂ ಅಧಿಕ ಲಸಿಕೆ ಹಾಕುವ ಮೂಲಕ ಶೇ. 63 ರಷ್ಟು ಗುರು ಸಾಧಿಸಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ ದಾಸಕರಿಯಪ್ಪ, ಹೆಚ್.ಪಿ. ವಿಶ್ವಾಸ್ ಇದ್ದರು.

ದಾವಣಗೆರೆ, ಜ.17- ವಿಶ್ವದಲ್ಲೇ ಭಾರತ ಕೊರೊನಾ ಲಸಿಕೆ ನೀಡುವಲ್ಲಿ ಇತಿಹಾಸ ದಾಖಲಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯ ಕತ್ವದಿಂದಾಗಿ ಅಪಾಯಕ್ಕೆ ಸಿಲುಕಬೇಕಾಗಿದ್ದ 135 ಕೋಟಿ ಜನರನ್ನು ಭೀಕರ ಕೋವಿಡ್‌ನಿಂದ ಪಾರು ಮಾಡಲು ಸಾಧ್ಯವಾಯಿತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನಕ್ಕೆ ಇದೀಗ ಒಂದು ವರ್ಷ ಪೂರ್ಣಗೊಂಡಿದೆ. ಇದು ವರೆಗೂ 157 ಕೋಟಿಗೂ ಅಧಿಕ ಡೋಸ್‌ಗಳನ್ನು ನೀಡಲಾಗಿದೆ. ಸುಮಾರು 66 ಕೋಟಿ ಜನರು ಸಂಪೂರ್ಣವಾಗಿ ಲಸಿಕೆ ಪಡೆದುಕೊಂಡಿದ್ದಾರೆ. 91 ಕೋಟಿ ಜನರಿಗೆ ಮೊದಲ ಡೋಸ್ ನೀಡಿದ್ದು, ಪ್ರತಿ ನಿತ್ಯ ಸರಾಸರಿ 43 ಲಕ್ಷ ಡೋಸ್‌ಗಳನ್ನು ನಿರ್ವಹಿಸಲಾಗುತ್ತಿದೆ ಎಂದು ವಿವರ ನೀಡಿದರು.

76 ಕೋಟಿಗೂ ಅಧಿಕ ಮಹಿಳೆಯರು ಲಸಿಕೆ ಪಡೆದಿ ದ್ದು, ಗ್ರಾಮೀಣ ಭಾಗದ ಲಸಿಕಾ ಕೇಂದ್ರಗಳಲ್ಲಿ 99 ಕೋಟಿ ಡೋಸ್ ನೀಡಲಾಗಿದೆ. ಇದರಲ್ಲಿ 3.69 ಲಕ್ಷ ಕ್ಕೂ ಹೆಚ್ಚು ತೃತೀಯ ಲಿಂಗಿಗಳಿಗೆ ಲಸಿಕೆ ನೀಡಲಾಗಿದೆ. ಇದರೊಂದಿಗೆ ಮುಂಚೂಣಿಯ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ಮತ್ತು 60 ವರ್ಷಕ್ಕೂ ಮೇಲ್ಪಟ್ಟ ವೃದ್ಧರು ಬೂಸ್ಟರ್ ಡೋಸ್ ಪಡೆಯುತ್ತಿದ್ದಾರೆ ಎಂದರು.

ಇದುವರೆಗೂ 6 ಲಕ್ಷಕ್ಕೂ ಹೆಚ್ಚು ಕೈದಿಗಳಿಗೆ ಮತ್ತು ಗುರುತಿನ ಚೀಟಿ ಇಲ್ಲದ 67 ಲಕ್ಷ ಜನರಿಗೂ ಲಸಿಕೆ ಹಾಕಲಾಗಿದೆ. ಬುಡಕಟ್ಟು ಜನರಿರುವ ಜಿಲ್ಲೆಗಳಲ್ಲಿ 11 ಕೋಟಿಗೂ ಅಧಿಕ ಜನರು ಲಸಿಕೆ ಪಡೆದಿದ್ದಾರೆ. 40 ಕೋಟಿಗೂ ಅಧಿಕ ಲಸಿಕೆಗಳನ್ನು ಮನೆಯ ಸಮೀಪದ ಲಸಿಕಾ ಕೇಂದ್ರಗಳಲ್ಲಿ ನೀಡಲಾಗಿದೆ.

15 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ವ್ಯಾಕ್ಸಿನೇಷನ್ ಪ್ರಾರಂಭವಾಗಿ ಕೇವಲ 10 ದಿನಗಳಲ್ಲಿ 30 ಮಿಲಿಯನ್‌ಗಿಂತ ಹೆಚ್ಚು ಮಕ್ಕಳಿಗೆ ಮೊದಲ ಡೋಸ್ ನೀಡಲಾಯಿತು. ಇದುವರೆಗೆ 3.31 ಕೋಟಿ ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಪ್ರತಿನಿತ್ಯ ಕೊರೊನಾ ಲಸಿಕೆಗಳು ವ್ಯರ್ಥವಾಗುತ್ತಿವೆ. ಜಾರ್ಖಂಡ್‌ನಲ್ಲಿ ಶೇ.37.3, ಛತ್ತೀಸ್‌ಘಡದಲ್ಲಿ ಶೇ.30.2, ತಮಿಳುನಾಡಿನಲ್ಲಿ ಶೇ.15.5 ರಷ್ಟು ಲಸಿಕೆ ವ್ಯರ್ಥವಾಗಿದೆ. ಕೆಲವು ದಿನಗಳ ಹಿಂದೆ ರಾಜಸ್ಥಾನದಲ್ಲಿ 11.5 ಲಕ್ಷ ಡೋಸ್ ಲಸಿಕೆ ವ್ಯರ್ಥವಾಗಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿತ್ತು ಎಂದು ಮಾಹಿತಿ ನೀಡಿದರು.

ಕಾನೂನು ಎಲ್ಲರಿಗೂ ಒಂದೇ, ಉಲ್ಲಂಘನೆ ಸಲ್ಲದು: ಪ್ರತಿಯೊಬ್ಬರಿಗೂ ಕಾನೂನು ಒಂದೇ ಆಗಿದ್ದು, ಉಲ್ಲಂಘನೆ ಮಾಡುವುದು ಸರಿಯಲ್ಲ. ಕೋವಿಡ್ ನಿಯಮ ಜಾರಿಯಿದ್ದರೂ ಶಾಸಕರೊಬ್ಬರು ಜನ್ಮದಿನ ಆಚರಿಸಿಕೊಂಡಿರುವ ಬಗ್ಗೆ ಪತ್ರಕರ್ತರು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ವಿಷಾದವಿದೆ. ಅಭಿಮಾನಿಗಳ ಒತ್ತಡಕ್ಕೆ ಮಣಿದು ಆಚರಣೆ ಮಾಡಿಕೊಳ್ಳಲಾಗಿದೆ.

ಶಾಸಕ ರಾಮಚಂದ್ರ ಅವರು ಜಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅಲ್ಲದೇ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಸಾಕಷ್ಟು ಆಹಾರದ ಕಿಟ್‌ಗಳನ್ನು ನೀಡಿದ್ದಾರೆ ಎಂದು ವೀರೇಶ್ ಹೇಳಿದರು.