ಅರಸಿಕೇರಿ ಪ್ರೌಢಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ

ಅರಸಿಕೇರಿ ಪ್ರೌಢಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ

ಹರಪನಹಳ್ಳಿ, ಜ. 17-  ತಾಲ್ಲೂಕಿನ ಅರಸಿಕೇರಿ ಖಾಸಗಿ ಪ್ರೌಢ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಸಾಂಕ್ರಾಮಿಕ ರೋಗ ದೃಢಪಟ್ಟಿದ್ದು, ಶಾಲೆಗೆ ಎರಡು ದಿನ ರಜೆ ಘೋಷಿಸಲಾಗಿದೆ.

ಗ್ರಾಮದ ಜಿವಿವಿಡಿಎಸ್ ಖಾಸಗಿ ಪ್ರೌಢಶಾಲೆಯಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು  ಶೀತ, ನೆಗಡಿ, ಜ್ವರದಂತಹ ಕೋವಿಡ್ ಗುಣ ಲಕ್ಷಣಗಳನ್ನು ಹೊಂದಿದ್ದು, ಪರೀಕ್ಷೆ ಮಾಡಿಸಿದಾಗ 8ನೇ ತರಗತಿಯ ಹಾಗೂ 10ನೇ ತರಗತಿಯ ತಲಾ ಒಬ್ಬರಿಗೆ ಒಟ್ಟು ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಟ್ಟಿದೆ ಎಂದು ತಾಲೂಕು ವೈದ್ಯಾಧಿಕಾರಿ  ಹಾಲಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಬಿಇಒ ಬಸವರಾಜಪ್ಪ ಪ್ರತಿಕ್ರಿಯೆ ನೀಡಿ, ಜಿವಿವಿಡಿಎಸ್ ಪ್ರೌಢಶಾಲೆಗೆ ಎರಡು ದಿನ ರಜೆ ಘೋಷಿಸಿದ್ದು, ಇಡೀ ಶಾಲೆಗೆ ಸ್ಯಾನಿಟೈಜರ್ ಮಾಡಲು ಗ್ರಾಮ ಪಂಚಾಯ್ತಿಯವರಿಗೆ ಸೂಚಿಸಿದ್ದೇವೆ ಎಂದು ಅವರು ಹೇಳಿದರು. ಕೋವಿಡ್‌ನಿಂದ ಮುಚ್ಚಲ್ಪಟ್ಟ ಶಾಲೆಗೆ ಆರೋಗ್ಯಾಧಿಕಾರಿ ಹಾಲಸ್ವಾಮಿ, ಬಿಇಒ ಬಸವರಾಜಪ್ಪ, ಡಾ.ವೆಂಕಟೇಶ್, ಆರೋಗ್ಯ ಸಿಬ್ಬಂದಿ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.