ವಿನೋಬನಗರದಲ್ಲಿ ಸಂಭ್ರಮದ ಸಂಕ್ರಾಂತಿ

ವಿನೋಬನಗರದಲ್ಲಿ ಸಂಭ್ರಮದ ಸಂಕ್ರಾಂತಿ

`ಕಹಿಯಿಂದ ಸಿಹಿ ಬಾಂಧವ್ಯದೆೆಡೆಗೆ ; ಅಜ್ಞಾನದಿಂದ ಸುಜ್ಞಾನದೆಡೆಗೆ ; ಸೋಲಿನಿಂದ ಗೆಲುವಿನ ಪಥದೆಡೆಗೆ ಸಾಗಲಿ’ ಎಂಬ ಸಂದೇಶವನ್ನು ಸಾರುವ ಮಕರ ಸಂಕ್ರಾಂತಿಯನ್ನು ಕೊರೊನಾದ ಕರಿ ನೆರಳಿನ ನಡುವೆಯೂ ದಾವಣಗೆರೆಯಲ್ಲಿ ಕೆಲವು ಕಡೆ ಸಂಭ್ರಮದಿಂದ ಆಚರಿಸಲಾಯಿತು.  ವಿನೋಬನಗರ 3ನೇ ಮುಖ್ಯ ರಸ್ತೆ, 2ನೇ `ಬಿ’ ತಿರುವಿನಲ್ಲಿ ಶ್ರೀಮತಿ ಪುಷ್ಪಾ ವಾಲಿ ಅವರ ನಿವಾಸದಲ್ಲಿ ಶನಿವಾರ ಏರ್ಪಾಡಾಗಿದ್ದ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಮಧು, ಶೀಲಾ, ಶಿಲ್ಪ, ಗಿರಿಜಾ, ಮಕ್ಕಳಾದ ಸದ್ಗುಣ, ಮಾನವಿ, ಸಾಯಿ, ಸಮೃದ್ಧಿ, ಅಫೀಫಾ, ಅಕ್ಷಯ್, ಮನೋಜ್ ಮತ್ತು ಇತರರು ಪಾಲ್ಗೊಂಡಿದ್ದರು.