ಕೋವಿಡ್ : `ಸದ್ಧರ್ಮ ನ್ಯಾಯಪೀಠ’ದ ಕಲಾಪ ಮತ್ತೆ ಮುಂದೂಡಿಕೆ

ಸಿರಿಗೆರೆ, ಜ.16-  ಇದೇ ದಿನಾಂಕ 3ರಿಂದ ಪುನರಾರಂಭಗೊಂಡಿದ್ದ `ಸದ್ಧರ್ಮ ನ್ಯಾಯಪೀಠ’ದ ಕಾರ್ಯಕಲಾಪಗಳನ್ನು ಕೋವಿಡ್ ಕಾರಣದಿಂದ ಮತ್ತೆ ಮುಂದೂಡಲಾಗಿದೆ ಎಂದು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಕಾರ್ಯದರ್ಶಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಕಾರಣ ಎಲ್ಲಾ ನ್ಯಾಯಾಲಯಗಳು ಖುದ್ದು ಹಾಜರಾತಿಯನ್ನು ನಿಷೇಧಿಸಿರುತ್ತವೆ.  ಆದ ಕಾರಣ ಕಳೆದ ಎರಡು ವಾರಗಳಿಂದ ಪುನರಾರಂಭಗೊಂಡಿದ್ದ ನಮ್ಮ ಮಠದ `ಸದ್ಧರ್ಮ ನ್ಯಾಯಪೀಠ’ದ ಕಾರ್ಯಕಲಾಪಗಳನ್ನೂ ಸಹ ಅನಿರ್ದಿಷ್ಟ ಕಾಲಾವಧಿಗೆ ಮುಂದೂಡಲಾಗಿದೆ. 

ನಾಳೆ ದಿನಾಂಕ 17ರ ಸೋಮವಾರ ನಡೆಯಬೇಕಾಗಿದ್ದ ನ್ಯಾಯಪೀಠದ ಕಾರ್ಯಕಲಾಪಗಳೂ ಸಹ ನಡೆಯುವುದಿಲ್ಲವೆಂದು ತಿಳಿಸಲು ವಿಷಾದಿಸಿದೆ.