39ನೇ ವಾರ್ಡಿನಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

39ನೇ ವಾರ್ಡಿನಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

ದಾವಣಗೆರೆ, ಜ.13- ನಗರದ ವಾರ್ಡ್ ನಂ. 39ರಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ 1 ಕೋಟಿ 60 ಲಕ್ಷ ರೂ.ಗಳಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್, ಸಂಸದ ಜಿ.ಎಂ.ಸಿದ್ದೇಶ್ವರ ಅವರುಗಳು ಭೂಮಿ ಪೂಜೆ ಮಾಡುವುದರ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಮಹಾಪೌರ ಎಸ್.ಟಿ.ವೀರೇಶ್, ಉಪ ಮಹಾಪೌರ ರಾದ ಶಿಲ್ಪಾ ಜಯಪ್ರಕಾಶ್, ಸ್ಥಾಯಿ ಸಮಿತಿಯ ಅಧ್ಯಕ್ಷರುಗಳಾದ ಶ್ರೀಮತಿ ಗೀತಾ ದಿಳ್ಯೆಪ್ಪ, ಎಲ್.ಡಿ.ಗೋಣೆಪ್ಪ, ಉಮಾ ಪ್ರಕಾಶ್, ರೇಣುಕಾ ಶ್ರೀನಿವಾಸ್, ಪಾಲಿಕೆ ಸದಸ್ಯರಾದ ಪ್ರಸನ್ನಕುಮಾರ್, ವೀಣಾ ನಂಜಪ್ಪ, ಗೌರಮ್ಮ ಗಿರೀಶ್, ಕೆ.ಎಂ.ವೀರೇಶ್, ಎಸ್.ಮಂಜುನಾಥ್, ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಪಾಲಿಕೆ ಆಯುಕ್ತ ವಿಶ್ವನಾಥ್ ಪಿ. ಮುದ್ದಜ್ಜಿ, ದೂಡಾ ಆಯುಕ್ತ ಕುಮಾರಸ್ವಾಮಿ, ಸ್ಮಾರ್ಟ್ ಸಿಟಿ ಎಂ.ಡಿ ರವೀಂದ್ರ ಮಲ್ಲಾಪುರ ಮತ್ತಿತರರು ಉಪಸ್ಥಿತರಿದ್ದರು. ತರಳಬಾಳು ಬಡಾವಣೆಯ ನಾಗರಿಕರುಗಳಾದ ಕಸಾಪ ಅಧ್ಯಕ್ಷ ಹೆಚ್.ಬಿ.ವಾಮದೇವಪ್ಪ ಹಾಗೂ ಬಿಜೆಪಿ ಮುಖಂಡರಾದ ಬಿ.ದಿಳ್ಯೆಪ್ಪ, ನರೇಂದ್ರಕುಮಾರ್, ಬಾಡದ ಆನಂದರಾಜ್, ಶಿವಕುಮಾರ್ ಕಡ್ಲೇಬಾಳು, ಆರ್.ಉಜ್ಜಿನಪ್ಪ, ವಾಸಣ್ಣ, ಚೇತನ್, ನಾಗರಾಜಪ್ಪ, ಶೈಲಮ್ಮ, ಷಣ್ಮುಖಪ್ಪ, ಡಾ. ತವಣಿ, ವಿನಯ್ ದಿಳ್ಯೆಪ್ಪ ಹಾಗೂ ನಾಗರಿಕರು ಉಪಸ್ಥಿತರಿದ್ದರು.

Leave a Reply

Your email address will not be published.